ವಿಶೇಷವಾಗಿ ಭಾರತದಲ್ಲಿ ಅನೇಕ ಜನರು ಕಳೆದ ಕೆಲವು ವರ್ಷಗಳಿಂದ, ಯೂನಿಫೈಡ್ ಪೇಮೆಂಟ್ ಇಂಟರ್ಫೇಸ್ (ಯುಪಿಐ) ಆಧಾರಿತ ಮೊಬೈಲ್ ಅಪ್ಲಿಕೇಶನ್-ಗಳನ್ನು ಬಳಸಿಕೊಂಡು ಆಹಾರ, ಪೆಟ್ರೋಲ್, ದಿನಬಳಕೆ ವಸ್ತುಗಳ ಶಾಪಿಂಗ್, ಹೀಗೆ ಎಲ್ಲದರಲ್ಲಿ ನಗದು ರಹಿತ ವ್ಯವಹಾರ ಮಾಡುತ್ತಿದ್ದಾರೆ. ಇದು ಬಹುತೇಕವಾಗಿ ಉಪಯೋಗವನ್ನು ಪಡೆದಿದ್ದರು ಕೂಡ ಅಷ್ಟೇ ನಷ್ಟವನ್ನು ತರುತ್ತಿದೆ. ಇತ್ತೀಚಿನ ದಿನಗಳಲ್ಲಿ ಅಂತು ಈ ಆಪ್ ಮೂಲಕ ಹೆಚ್ಚಿನ ಜನರು ಹಣ ಕಳೆದುಕೊಂಡಿದ್ದಾರೆ. ಹ್ಯಾಕರ್ಸ್ ಗಳು ವಿವಿಧ ರೀತಿಯಲ್ಲಿ ಹಣ್ಣವನ್ನು ವಂಚನೆ ಮಾಡುತ್ತಿದ್ದು ಪ್ರಕರಣಗಳು ಹೆಚ್ಚುತ್ತಿವೆ. ಅದೇ ರೀತಿ ಮತ್ತೊಂದು ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ RBI ಈಗ ಎಚ್ಚರಿಕೆ ನೀಡಿದೆ.
ಏನಿದು ವಂಚನೆ?
ನೀವು ಗೂಗಲ್ ಪ್ಲೇ ಸ್ಟೋರ್ನಲ್ಲಿ ಲಭ್ಯವಿರುವ ‘ಎನಿಡೆಸ್ಕ್ ಆ್ಯಪ್‘ ಬಳಸುತ್ತಿದ್ದೀರಾ..? ಹಾಗಾದರೆ ನಿಮಗಿದು ಎಚ್ಚರದ ಸಂದೇಶ. ಗೂಗಲ್ನಲ್ಲಿ ಲಭ್ಯವಿರುವ ‘ಎನಿಡೆಸ್ಕ್ ಆ್ಯಪ್‘ ಮೂಲಕ ಹ್ಯಾಕರ್ಗಳು ವಂಚನೆ ನಡೆಸುತ್ತಿದ್ದು, ನಿಮ್ಮ ಬ್ಯಾಂಕ್ ಎಕೌಂಟ್ ಮೇಲೆ ಹ್ಯಾಕರ್ಗಳು ಕನ್ನ ಹಾಕುತ್ತಿದ್ದಾರೆ. ಗೂಗಲ್ನಲ್ಲಿ ಲಭ್ಯವಿರುವ ‘ಎನಿಡೆಸ್ಕ್ ಆ್ಯಪ್‘ ಮೂಲಕ ಹ್ಯಾಕರ್ಗಳು ವಂಚನೆ ನಡೆಸುತ್ತಿದ್ದು, ನಿಮ್ಮ ಬ್ಯಾಂಕ್ ಅ ಅಕೌಂಟ್ ಮೇಲೆ ಹ್ಯಾಕರ್ಗಳು ಕನ್ನ ಹಾಕುತ್ತಿದ್ದಾರೆ. ಆದಕಾರಣ ಈ ಆ್ಯಪ್ ಅನ್ನು ಡೌನ್ಲೋಡ್ ಮಾಡಬಾರದು ಮಾಡಿದರೆ ಪ್ಲೇಸ್ಟೋರ್ ಮತ್ತು ಆ್ಯಪ್ಸ್ಟೋರ್ನಲ್ಲಿರುವ ಎನಿಡೆಸ್ಕ್ ಅನ್ನು ಡೌನ್ಲೋಡ್ ಮಾಡುವುದು ನಾವೇ ಅಪಾಯಕ್ಕೆ ಆಹ್ವಾನ ನೀಡಿದಂತೆ. ಹ್ಯಾಕರ್ಗಳು ಈ ಆ್ಯಪ್ ಅನ್ನು ತಮ್ಮ ನಿಯಂತ್ರಣಕ್ಕೆ ಪಡೆದು, ಗ್ರಾಹಕರ ಮೊಬೈಲ್ನ ಬ್ಯಾಂಕ್ ಖಾತೆ ಮಾಹಿತಿಗೆ ಕನ್ನ ಹಾಕುತ್ತಿದ್ದಾರೆ ಎಂದು ರಿಸರ್ವ್ ಬ್ಯಾಂಕ್ ಎಚ್ಚರಿಸಿದೆ.
ಹೇಗೆ ನಡೆಯುತ್ತಿದೆ ಕಳ್ಳತನ?
ಈ ಆ್ಯಪ್ ಡೌನ್ಲೋಡ್ ಆದ ಮೇಲೆ, ಆ್ಯಪ್ ನೀಡುವ 9 ಅಂಕಿಗಳ ಕೋಡ್ ಅನ್ನು ಕಳುಹಿಸುವಂತೆ ಗ್ರಾಹಕರನ್ನು ಹ್ಯಾಕರ್ಗಳು ಕೇಳುತ್ತಾರೆ. ಈ ಸಮಯದಲ್ಲಿ ಗ್ರಾಹಕರ ಮೊಬೈಲ್ ಸಾಧನದ ಮೇಲೆ ನಿಯಂತ್ರಣ ಪಡೆಯುವ ಹ್ಯಾಕರ್ಗಳು ತಮಗೆ ಬೇಕಾದ ಎಲ್ಲ ವಿವರ ಪಡೆದುಕೊಳ್ಳುತ್ತಾರೆ. ಅದು ಅಷ್ಟೇ ಅಲ್ಲದೆ ವ್ಯಾಲೆಟ್ ಮತ್ತು ಮೊಬೈಲ್ ಅಪ್ಲಿಕೇಶನ್ ಬಳಸುವ ಮನ್ನ ಎಚ್ಚರಿಕೆ ಅಗತ್ಯವಾಗಿದ್ದು. ಅದರಲ್ಲೂ ಓಟಿಪಿ ಮತ್ತು ಕೋಡ್ ಹಂಚಿಕೊಳ್ಳುವಾಗ ಯಾವ ಮೂಲ ಮತ್ತು ಯಾವ ಆಧಾರದ ಮೇಲೆ ಕೇಳುತ್ತಿದೆ ಎಂಬುದನ್ನು ಮೊದಲು ತಿಳಿದುಕೊಳ್ಳಬೇಕಾದದ್ದು ಮುಖ್ಯವಾಗಿದೆ.
ವಂಚನೆಗೆ ಕಡಿವಾಣ ಹೇಗೆ?
ಮೊಬೈಲ್-ನಲ್ಲಿ ಬಳಸುವ ಎಲ್ಲ ಅಪ್ಲಿಕೇಶನ್ ಗಳ ಪಾಸ್ವರ್ಡ್ ಮತ್ತು ಸೆಕ್ಯೂರಿಟಿಯನ್ನು ವಾರದಲ್ಲಿ ಒಂದು ಬಾರಿಯಾದರು ಬಳಕೆ ಮಾಡಿ.
- ನಿಮ್ಮ ಮೊಬೈಲ್-ಗಳ Android ಅಪ್ಡೇಟಿಂಗ್ ಯಾವಾಗಲು ಪ್ಲೇ ಸ್ಟೋರ್ ನಿಂದ ಕೊಡಬೇಕು. ಅದನ್ನು ಹೊರತು ಪಡಿಸಿ ಬೇರೊಂದು ಆಪ್ ಮೂಲಕ ಅಪ್ಡೇಟ್ ಮಾಡಬೇಡಿ.
- ಮೊಬೈಲ್ ಗಳಿಗೆ ಬರುವ ಮೆಸೇಜ್-ಗಳಲ್ಲಿ ಡೈರೆಕ್ಟ್ ಹ್ಯಾಕ್ ಅಪ್ಲಿಕೇಶನಗಳ ಲಿಂಕ್ ಇರುತ್ತದೆ ಅದನ್ನು ಒತ್ತದಂತೆ ನೋಡಿ.
- Google Play store ನಿಂದ ಯಾವುದೇ ಆಪ್ ಡೌನ್ಲೋಡ್ ಮಾಡುವ ಮುನ್ನ ಆ ಆಪ್ ಬಗ್ಗೆ ಬಳಕೆದಾರರ ಅಭಿಪ್ರಾಯವನ್ನು ನೋಡಿ.
- ಅರ್ಥವಾಗದ ಅಪ್ಲಿಕೇಶನ್-ಗಳನ್ನು ಎಂದಿಗೂ Google Play ನಿಂದ ಡೌನ್ಲೋಡ್ ಮಾಡಿಕೊಳ್ಳಬೇಡಿ.