ಲಕ್ಷಾಂತರ ರೂಪಾಯಿ ಸಂಬಳ ನೀಡುವ ಕೆಲಸಕ್ಕೆ ಗುಡ್ ಬೈ ಹೇಳಿದ ಈ IIT ಬಾಂಬೆಯ ಇಂಜಿನಿಯರ್, ಯಾಕೆ ಗೊತ್ತಾ?

0
883

ಈಗಿನ ಬೆಳೆಯುತ್ತಿರುವ ಯುಗದಲ್ಲಿ, ಜನರನ್ನು ಕಾಡುತ್ತಿರುವ ದೊಡ್ಡ ಸಮಸ್ಯೆ ಎಂದರೆ ಅದು ನಿರುದ್ಯೋಗ. ಇಂದು ದೇಶದಲ್ಲಿ ಕೋಟ್ಯಂತರ ಯುವಕರು ಪದವಿ, ಸ್ನಾತಕೋತ್ತರ ಗಳಿಸಿದರು ಕೆಲಸ ಸಿಗದೆ ಕಂಗೆಟ್ಟಿದ್ದಾರೆ. ಆದರೆ, ಇಲ್ಲೊಬ್ಬ ಯುವಕ ಲಕ್ಷಾಂತರ ರೂಪಾಯಿ ಸಂಬಳ ಬರುವ ಕೆಲಸಕ್ಕೆ ಗುಡ್ ಬೈ ಹೇಳಿದ್ದಾನೆ, ಅಚ್ಚರಿ ಆಯ್ತಾ, ಇನ್ನು ಕೆಲಸ ಬಿಟ್ಟ ಕಾರಣ ಕೇಳಿದರೆ ಇನ್ನು ಅಚ್ಚರಿ ಪಡ್ತೀರ.

ಈ ಯುವಕನ ಹೆಸರು ಸಂಕೇತ್ ಪಾರೇಖ್ IIT ಬಾಂಬೆಯಲ್ಲಿ ಕೆಮಿಕಲ್ ಇಂಜಿನಿಯರ್ ಪದವಿಯನ್ನು ಮುಗಿಸಿ, ಲಕ್ಷಾಂತರ ರೂಪಾಯಿ ಸಂಬಳ ನೀಡುವ ಕೆಲಸಕ್ಕೆ ಸೇರಿದ್ದಾನೆ. ಎಲ್ಲ ಸಂಕೇತ್ ಅಂದುಕೊಂಡ ಹಾಗೆ ಆಗಿದ್ದರೆ ಇಂದು ಅವರು ಅಮೇರಿಕಾದಲ್ಲಿ ಸ್ನಾತಕೋತ್ತರವನ್ನು ಓದುತ್ತಿರಬೇಕಿತ್ತು. ಆದರೆ ಕೇವಲ ಒಂದು ಆನ್ಲೈನ್ ಚಾಟ್ ಸಂಕೇತ್ ಅವರ ಜೀವನದ ದಿಕ್ಕನೇ ಬದಲಾಯಿಸಿ ಬಿಟ್ಟಿತು.

ಒಂದು ದಿನ ಸಂಕೇತ್, ಅವರ ಸೀನಿಯರ್ ಆದ ಬಾವಿಕ್ ಅವರ ಜೊತೆ ಆನ್ಲೈನ್ ನಲ್ಲಿ ಚಾಟ್ ಮಾಡುತ್ತಿದ್ದ, ಅದು ಓದಿನ ಕೊನೆಯ ವರ್ಷದಲ್ಲಿ ಅವರಿಬ್ಬರ ಎಂದಿನ ದಿನಚರಿಯಾಗಿತ್ತು, ಮಾತನಾಡುತ್ತಲೇ ವಿಷಯ ಅಧ್ಯಾತ್ಮದೆಡೆಗೆ ವಾಲಿದೆ. ಬಾವಿಕ್, ತಾನು 2013 ರಲ್ಲಿ ಜೈನ ದೀಕ್ಷೆ ಸ್ವೀಕರಿಸಿರುವುದಾಗಿಯೂ, ಇದರಿಂದ ಕೇವಲ ದೇಹಕ್ಕೆ ಮಾತ್ರವಲ್ಲ ಆತ್ಮಕ್ಕೂ ಶಾಂತಿ ದೊರೆಯುತ್ತದೆ ಎಂದು ಹೇಳಿದ್ದಾರೆ.

ಸಂಕೇತ್ ಮೊದಲಿನಿಂದಲೂ ನಾಸ್ತಿಕರು. ಆದರೆ, ಬಾವಿಕ್ ಅವರ ಮಾತುಗಳು ಅವರ ಮೇಲೆ ಪ್ರಭಾವ ಬೀರಿವೆ. ಇದರಿಂದ ಪ್ರೋತ್ಸಾಹಿತರಾದ, ಸದಾ ಗ್ಯಾಡ್ಗೆಟ್ಗಳಲಲ್ಲಿಯೇ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ 29 ವರ್ಷದ ಸಂಕೇತ್ ಈ ಬಗ್ಗೆ ಯೋಚಿಸಿ, ಕೆಲಸ ಬಿಟ್ಟು ದೀಕ್ಷೆ ಸ್ವೀಕರಿಸಲು ನಿರ್ಧರಿಸಿದ್ದಾರೆ.

ಇಂದು ಜನವರಿ 22 ರಂದು, ಮುಂಬೈ ನ, ಬೊರಿವಲಿಯಲ್ಲಿ ಜೈನ ದೀಕ್ಷೆ ಸ್ವೀಕರಿಸಲಿರುವ 16 ಜನರ ಪೈಕಿ ಸಂಕೇತ್ ಪಾರ್ಕ್ ಅವರು ಕೂಡ ಒಬ್ಬರಾಗಿದ್ದಾರೆ. ಅವರು ಆಚಾರ್ಯ ಯುಗಭೂಷಣ ಸುರ್ಜಿ ಅವರ ಬಳಿ, ಎರಡೂವರೆ ವರ್ಷಗಳ ಕಾಲ, ಆಚಾರ ಮತ್ತು ಇತರೆ ಮೂಲಭೂತ ತತ್ವಗಳನ್ನು ಅಧ್ಯಯನ ಮಾಡಿದ್ದಾರೆ.