ಬೇರೆಯವರನ್ನು ಅನುಕರಿಸುವುದರಿಂದ ಯಶಸ್ಸು ಸಿಗುವುದಿಲ್ಲ; ರಾನು ಮೊಂಡಲ್ ಹಾಡಿಗೆ ಪ್ರತಿಕ್ರಿಯೆ ನೀಡಿದ ಲತಾ ಮಂಗೇಶ್ಕರ್ ಹೇಳಿದ್ದು ಏನು??

0
806

ರಾತ್ರೋ ರಾತ್ರಿ ಗಾಯಕಿಯಾಗಿ ಹೊರಹೊಮ್ಮುವ ಮೂಲಕ ಸಂಗೀತ ಪ್ರಿಯರ ಹೃದಯಕ್ಕೆ ಹತ್ತಿರವಾಗಿದ್ದ ಬಡ ಮಹಿಳೆ ರಾನು ಮೊಂಡಲ್ ಬಗ್ಗೆ ಲತಾ ಮಂಗೇಶ್ಕರ್ ಮಾತನಾಡಿದ್ದು, ಭಾರಿ ವೈರಲ್ ಆಗಿದೆ. ಏಕೆಂದರೆ ರಣಘಾಟ್ ರೈಲ್ವೆ ನಿಲ್ದಾಣದಲ್ಲಿ ಲತಾ ಮಂಗೇಶ್ಕರ್ ಅವರ “ಏಕ್ ಪ್ಯಾರ್ ಕಾ ನಾಗಮ ಹೈ” ಹಾಡಿನ ವಿಡಿಯೋ ವೈರಲ್ ಆದ ನಂತರ ರಾನು ಮೊಂಡಲ್ ಸಾಕಷ್ಟು ಜನಪ್ರಿಯತೆಯನ್ನು ಪಡೆದಿದ್ದರು, ಸದ್ಯ ಸ್ಟಾರ್ ಆದ ರಾನು ಮೊಂಡಲ್ ಅವರಿಗೆ ಹಲವು ಅವಕಾಶಗಳು ಸಿಗುತ್ತಿದ್ದು, ಅದಕ್ಕೆ ಲತಾ ಮಂಗೇಶ್ಕರ್ ಹೇಳಿದ್ದು ಹೀಗಿದೆ.

ಹೌದು ರಾನು ಮೊಂಡಲ್ ಅವರ ಬಗ್ಗೆ ಮಾತನಾಡಿದ ಲತಾ ಮಂಗೇಶ್ಕರ್ ಅವರು, ಯಾರನ್ನಾದರೂ ಅನುಕರಿಸುವುದರಿಂದ ಯಶಸ್ಸು ಸಿಗುವುದಿಲ್ಲ. ನಾನು, ಕಿಶೋರ್, ರಫಿ, ಮುಕೇಶ್ ಅಥವಾ ಆಶಾ ಅವರು ಹಾಡಿದ ಹಾಡುಗಳನ್ನು ಹಾಡುವ ಮೂಲಕ ಜನರನ್ನು ಆಕರ್ಷಿಸಬಹುದು. ಆದರೆ ಇದು ಹೆಚ್ಚು ಕಾಲ ಉಳಿಯುವುದಿಲ್ಲ, ನನ್ನ ಹೆಸರು ಹಾಗೂ ಕೆಲಸದಿಂದ ಯಾರಿಗಾದರೂ ಒಳ್ಳೆಯದ್ದು ಆಗಿದ್ದರೆ, ನಾನು ಅದೃಷ್ಟಶಾಲಿ ಎಂದು ಭಾವಿಸುತ್ತೇನೆ. ಎಂದು ಹೇಳಿದ್ದಾರೆ. ಬಳಿಕ ಮಾತನಾಡಿದ ಅವರು, ಹಳೆ ಗಾಯಕರ ಹಾಡುಗಳನ್ನು ಹಾಡುವುದು ಸರಿ. ಆದರೆ ಒಂದು ದಿನ ಅವರು ತಾವು ಹಾಡಿದ ಹಾಡಿನ ಮೂಲಕ ಜನರಿಗೆ ಪರಿಚಯವಾಗಬೇಕು ಎಂದು ಲತಾ ಮಂಗೇಶ್ಕರ್ ಅವರು ಹೊಸ ಗಾಯಕರಿಗೆ ಸಲಹೆ ನೀಡಿದ್ದಾರೆ.

ಇನ್ನು ಮುಂದುವರೆದು ಅನುಕರಣಾ ಶೈಲಿಯ ಗಾಯನ ಮಾದರಿ ದೀರ್ಘಾವಧಿಗೆ ಸಹಾಯವಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.ಇದರಿಂದಾಗಿ ಅವರು ಅಲ್ಪಾವಧಿಯವರೆಗೆ ಮಾತ್ರ ಮೆಚ್ಚುಗೆ ಗಳಿಸಬಹುದು ಎಂದು ಲತಾ ಮಂಗೇಶ್ಕರ್ ಅಭಿಪ್ರಾಯಪಟ್ಟಿದ್ದಾರೆ. ತಮ್ಮ ಅಥವಾ ಇತರ ಯಾವುದೇ ಗಾಯನಗಳನ್ನು ಹಾಡಿ ನಂತರ ಸ್ವಂತಿಕೆ ಉಳಿಸಿಕೊಳ್ಳಬೇಕು. ಬೇರೆಯವರನ್ನು ಅನುಸರಿಸಿ ಹೆಸರು ಮಾಡುವುದು ಎಲ್ಲಿಯವರೆಗೆ ಎಂದು ಹೇಳಿದ್ದಾರೆ. ಇದು ಒಂದು ರೀತಿಯ ಕೋಪದ ಮಾತಾಗಿದ್ದರು ಹೊಸ ಪ್ರತಿಭೆಗಳಿಗೆ ಪಾಠ ಹೇಳಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಸದ್ಯ ಒಂದೇ ದಿನದಲ್ಲಿ ಸ್ಟಾರ್ ಆದ ಮೊಂಡಲ್ ಸಂಗೀತ ಸಂಯೋಜಕ ಹಿಮೇಶ್ ರೇಶಮ್ಮಿಯಾ ಅವರ ಪ್ರತಿಭೆಯನ್ನು ಗಮನಿಸಿ ಅವರ ಮುಂಬರುವ ಚಿತ್ರ ಹ್ಯಾಪಿ ಹಾರ್ಡಿ ಮತ್ತು ಹೀರ್ ನಲ್ಲಿ ಹಾಡುವ ಅವಕಾಶವನ್ನು ನೀಡಿದ್ದಾರೆ.ಜನರು ಕೂಡ ಮೊಂಡಲ್ ಅವರ ಗಾಯನ ಶೈಲಿಗೆ ಮಾರುಹೋಗಿದ್ದಾರೆ. ಆದರೆ ಈಗ ರಾನು ಮೊಂಡಲ್ ಗಾಯನದ ಬಗ್ಗೆ ಮಾತನಾಡಿರುವ ಲತಾ ಮಂಗೇಶ್ಕರ್ ‘ಯಾರಾದರೂ ನನ್ನ ಹೆಸರು ಮತ್ತು ಕೆಲಸದಿಂದ ಲಾಭ ಪಡೆದರೆ ನಾನು ಅದೃಷ್ಟಶಾಲಿ ಎಂದು ಭಾವಿಸುತ್ತೇನೆ’ ಎಂದು ಹೇಳಿದ್ದಾರೆ.
ಮಂಡಲ್ ಗೆ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ 55 ಲಕ್ಷ ರೂ.ಮೌಲ್ಯದ ಫ್ಲಾಟ್ ನೀಡಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಆದರೆ, ಇದೆಲ್ಲಾ ಸುಳ್ಳು ಎಂದು ರಣಘಾಟ್ ನ ಅಮ್ರಾ ಶೂಬಾಯ್ ಶೊಯಿತಾನ್ ಕ್ಲಬ್ ಸದಸ್ಯ ವಿಕ್ಕಿ ಬಿಸ್ವಾಸ್ ಹೇಳಿದ್ದಾರೆ. ಈ ಕ್ಲಬ್ ನ ಇಬ್ಬರು ಸದಸ್ಯರು ರಾಣು ಮಂಡಲ್ ರಣಘಾಟ್ ರೈಲು ನಿಲ್ದಾಣದಲ್ಲಿ ಹಾಡುತ್ತಿದ್ದ ಹಾಡನ್ನು ಚಿತ್ರೀಕರಿಸಿದ್ದರು. ನಂತರ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈವರೆಗೂ ರಾಣು ಮಂಡಲ್ ಅವರನ್ನು ನಾವೆ ನೋಡಿಕೊಳ್ಳುತ್ತಿದ್ದೇವೆ. ಸಲ್ಮಾನ್ ಖಾನ್ ಅವರಿಂದ ರಾಣುಗೆ 55 ಲಕ್ಷ ರೂ. ಮೌಲ್ಯದ ಫ್ಲಾಟ್ ಕೊಡುಗೆ ನೀಡಲಾಗಿದೆ ಎಂಬುದು ಬರೀ ಸುಳ್ಳು ಎಂದು ಅವರು ಹೇಳಿದ್ದಾರೆ.