ಮಕರ ಸಂಕ್ರಾಂತಿ ವರ್ಷದ ವಿಷೇಶ ಮೊದಲ ಹಬ್ಬ. ಮಕರ ಸಂಕ್ರಮಣ ಉತ್ತರಾಯಣದ ಪರ್ವಕಾಲ. ಈ ದಿನ ಎಳ್ಳು, ಕಬ್ಬು, ಸಕ್ಕರೆ ಅಚ್ಚುಗಳನ್ನು ದೇವರಿಗೆ ಸಮರ್ಪಣೆ ಮಾಡಿ ಹಿರಿಯರಿಗೆ ಕೊಟ್ಟು ಆಶೀರ್ವಾದ ಪಡೆಯುವುದು ರೂಡಿ. ಉತ್ತರಾಯಣ ಪರ್ವಕಾಲದಲ್ಲಿ ಕರಿಎಳ್ಳು ಅರೆದು ಅದನ್ನು ಹಚ್ಚಿಕೊಂಡು ಎಲ್ಲರೂ ಸ್ನಾನ ಮಾಡಬೇಕು.ಹೀಗೆ ಮಾಡುವುದರಿಂದ ಮನುಷ್ಯ ನಿರೋಗಿಯಗುವನೆಂದು ಧರ್ಮಶಾಸ್ತ್ರವು ಹೇಳುತ್ತದೆ.
ತಿಲಸ್ನಾಯಿ ತಿಲೋದ್ವರ್ತಿ ತಿಲಹೋಮಿ ತಿಲೋದಕೀ |
ತಿಲಬುಕ್ ತಿಲದಾತ ಚ ಷಟ್ತಿಲ. ಪಾಪನಾಶನ: ||
ಮಕರ ಸಂಕ್ರಮಣದಂದು ಯಾರು ಎಳ್ಳು ಹಚ್ಚಿ ಸ್ನಾನ, ಎಳ್ಳು ದಾನ, ಎಳ್ಳು ಭಕ್ಷಣ, ಎಳ್ಳಿನಿಂದ ತರ್ಪಣ, ಎಳ್ಳೆಣ್ಣೆಯ ದೀಪ ಹಚ್ಚುವರೋ ಅವರ ಪಾಪಗಳು ನಾಶವಾಗುವುದು.
ಜಗತ್ತಿಗೆ ದೇವನಾದ ಸೂರ್ಯನು ಒಂದು ರಾಶಿಯಿಂದ ಮತ್ತೊಂದು ರಾಶಿಯನ್ನು ಪ್ರವೇಶಿಸುವ ಸಂದಿ ಕಾಲಕ್ಕೆ ಮಕರ ಸಂಕ್ರಮಣವೆನ್ನುತ್ತಾರೆ. ಅಯಣ ಸಂಕ್ರಮಣಗಳು ಎರಡು.
1) ಉತ್ತರಾಯಣ- ಸೂರ್ಯನು ಭೂ ಮಧ್ಯೆಯ ರೇಖೆಗೆ ಉತ್ತರಾಭಿಮುಖವಾಗಿ ಚಲಿಸುವ ಕಾಲವಾಗಿದೆ.
2) ದಕ್ಷಿಣಾಯಣ – ಸೂರ್ಯನು ಭೂ ಮಧ್ಯೆಯ ರೇಖೆಗೆ ದಕ್ಷಿಣಾಯಣಮುಖವಾಗಿ ಚಲಿಸುವ ಕಾಲವಾಗಿದೆ.
ಸಂಕ್ರಾಂತಿಯಂದು ಎಳ್ಳು ಬೆಲ್ಲ,ಸಕ್ಕರೆ ಅಚ್ಚು, ಬೋರೆಹಣ್ಣು, ಸಿಹಿಕುಂಬಳಕಾಯಿ, ಕಬ್ಬು,ತಾಂಬುಲವನ್ನು ದಾನ ಮಾಡಬೇಕು.ಆಯುರಾಬೀವ್ರುದ್ದಿಗಾಗಿ ಎಳ್ಳಿನ ಜ಼ೊತೆಗೆ ಬೆಲ್ಲವನ್ನು ದಾನವಾಗಿ ನೀಡುವ ಪದ್ದತಿಯಿದೆ. ಎಳ್ಳು ಬೆಲ್ಲ ತಿಂದು ಒಳ್ಳೋಳ್ಳೇ ಮಾತನಾಡೋಣ ಎನ್ನುವುದೇ ಹಬ್ಬದಲ್ಲಿ ಹೇಳುವ ಮಾತಾಗಿದೆ.
–ಶ್ರುತಿ.ಎಚ್.ಎ.