ಅಧಿಕ ಜ್ಯೇಷ್ಠ ಮಾಸ ಶುರುವಾಗಿದೆ..! ಹಾಗಾದರೆ ಈ ಮಾಸದ ಮಹತ್ವ ಮತ್ತು ವಿಶೇಷತೆಗಳ ಬಗ್ಗೆ ಇಲ್ಲಿದೇ ಸಂಪೂರ್ಣ ಮಾಹಿತಿ..

0
2036

ಅಧಿಕ ಮಾಸ ಮೇ ೧೬ ರಿಂದ ಜೂನ್ ೧೩, ೨೦೧೮ ರ ವರೆಗೆ ಅಧಿಕ ಮಾಸವಿರುತ್ತದೆ.

ಅಧಿಕ ಮಾಸವನ್ನು ‘ಪುರುಷೋತ್ತಮ ಮಾಸ’ ಎಂದು ಕೂಡ ಕರೆಯುತ್ತಾರೆ. ಹಾಗಾದರೆ ಅಧಿಕ ಮಾಸ ಅಂದರೆ ಏನು..? ಯಾವ ಚಾಂದ್ರಮಾಸದಲ್ಲಿ ಸೂರ್ಯನ ಸಂಕ್ರಾಂತಿ ಇರುವುಗಿಲ್ಲವೋ ಅದು ಸಂಸರ್ಪಮಾಸ ಅಥವಾ ಅಧಿಕ ಮಾಸ ಎಂದು ಕರೆಯುತ್ತಾರೆ ಎರಡು ತಿಂಗಳುಗಳ ಕಾಲ ಸೂರ್ಯಗ್ರಹವು ಒಂದೇ ರಾಶಿಯಲ್ಲಿ ಇರುತ್ತಾನೆ. ಈ ಮಾಸದಂದು ಧ್ಯಾನ, ಜಪ, ಪೂಜೆ, ಪಾರಾಯಣ ಹಾಗೂ ದಾನ ಮಾಡಿದರೆ ಅಧಿಕ ಫಲ ಇರುತ್ತದೆ. ಆಗ ನಾವು ಮಾಡಿದ ಪಾಪಗಳು ಕಡಿಮೆಯಾಗಿ ಪುಣ್ಯಫಲ ಹೆಚ್ಚಾಗುತ್ತದೆ ಎಂಬ ಪ್ರತೀತಿ ಕೂಡ ಇದೆ.

ಈ ವರ್ಷ ವಿಶೇಷವಾಗಿ ಅಧಿಕವು ಜೇಷ್ಠಮಾಸವೇ ಆಗಿದೆ ವಿಳಂಬನಾಮ ಸಂವಸ್ಸರದ ಮೇ ೧೬ ರಿಂದ ಅಧಿಕ ಜೇಷ್ಠ ಮಾಸ ಪ್ರರಂಭವಾಗಿ ಜೂನ್ ೧೩, ೨೦೧೮ ರ ವರೆಗೆ ಅಧಿಕ ಜ್ಯೇಷ್ಠ ಮಾಸವಾಗಿರುತ್ತದೆ. ಈ ಮಾಸದಲ್ಲಿ ಶುಕ್ಲ ಪೂರ್ಣಮಿ ತಿಥಿ ಇರುವ ದಿವಸ ಚಂದ್ರನು ಜೇಷ್ಠ ನಕ್ಷತ್ರದಲ್ಲಿರುತ್ತಾನೆ ಆದ್ದರಿಂದ ಈ ಮಾಸಕ್ಕೆ ಜೇಷ್ಠ ಮಾಸ ಎಂದು ಕರೆಯುತ್ತಾರೆ. ಈ ಮಾಸ ಸರಿಸುಮಾರು 3 ವರ್ಷಕ್ಕೊಮ್ಮೆ ಅಧಿಕಮಾಸ ಪುನರಾವರ್ತನೆಯಾಗುತ್ತಲೇ ಇರುತ್ತದೆ.

ಅಧಿಕ ಜ್ಯೇಷ್ಠ ಮಾಸದ ವಿಶೇಷತೆಗಳು:

ಅಧಿಕ ಮಾಸದ ೨೦ ದಿನಗಳಂದು ಯಾವ ಕಾರ್ಯಗಳನ್ನು ಮಾಡಿದರೆ ಅಧಿಕಮಾಸದ ಧರ್ಮಾನುಷ್ಠಾನದಿಂದ ಸಕಲ ದಾರಿದ್ರ್ಯವನ್ನು ಕಳೆದುಕೊಳ್ಳಬಹುದು. ಈ ಮಾಸದಲ್ಲಿ ಪವಿತ್ರತೀರ್ಥಂಗಳಲ್ಲಿ, ನದಿಗಳಲ್ಲಿ, ಸಮುದ್ರಲ್ಲಿ ಸ್ನಾನ ಮಾಡಿದರೆ ವಿಶೇಷ ಫಲಸಿಗುತ್ತದೆ ದಾನಕ್ಕೂ ವಿಶೇಷ ಫಲಸಿಗುತ್ತದೆ ಅದರಲ್ಲಿ ಸಪಾತ್ರರಿಂಗೆ ಅಥವಾ ದೇವಸ್ಥಾನಕ್ಕೆ ದೀಪದಾನ ಮತ್ತು ಬ್ರಾಹ್ಮಣ, ಸುವಾಸಿನಿಯರಿಗೆ ತಾಂಬೂಲದಾನ ಸದಾ ಫಲದಾನ ಮಾಡಬೇಕು. ಧಾರ್ಮಿಕ ಚಿಂತನೆ ಮಾಡುತ್ತಿದ್ದರೆ ಮತ್ತು ಜಪ ತಪ ಉಪವಾಸ ಇಷ್ಟ ದೇವರ ಆರಾಧನೆ ಮಾಡುವುದರಿಂದ ಅಧಿಕ ಫಲ ಪ್ರಾಪ್ತಿಯಾಗುತ್ತದೆ. ಅಷ್ಟೇ ಅಲ್ಲ, ಅಧಿಕಮಾಸ ವ್ರತ ಮಾಡುವದರಿಂದ ಬ್ರಹ್ಮಹತ್ಯಾ ದೋಷಂಗಳಂಥಾ ದೊಡ್ಡಪಾಪಗಳೂ ಪರಿಹಾರವಾಗುತ್ತದೆ.

ಅಧಿಕ ಮಾಸದಲ್ಲಿ ಯಾವ ಯಾವ ಕಾರ್ಯಗಳನ್ನು ಮಾಡಲೇಬಾರದು:

ಇದರ ಜೊತೆಗೆ ಅಧಿಕ ಮಾಸದಲ್ಲಿ ಕೆಲವು ಕಾರ್ಯಗಳನ್ನು ಮಾಡಲೇಬಾರದು. ಉದಾಹರಣೆಗೆ ಗೃಹ ಪ್ರವೇಷ, ದೇವತಾ ಪ್ರತಿಷ್ಠಾಪನ, ಉಪಕರ್ಮ, ಉತ್ಸರ್ಜನ, ಚೌಲ ಸಂಸ್ಕಾರ, ವಿವಾಹ, ಉಪನಯನ, ವಾಸ್ತು ಕಾರ್ಯ, ತೀರ್ಥಯಾತ್ರೆ, ಜೀರ್ಣೋದ್ದಾರ, ತುಲಾಭಾರ ಮುಂತಾದ ಕಾರ್ಯಗಗಳನ್ನು ಮಾಡಬಾರದು.