ಮದುವೆ ಪಿಕ್ಸ್ ಆದ ಬಳಿಕ ಮದುಮಗ ಶೌಚಾಲಯದಲ್ಲಿ ನಿಂತು ಸೆಲ್ಫಿ ತೆಗೆದುಕೊಂಡರೆ ವಧುಗೆ ಸಿಗುತ್ತೆ ರೂ.51 ಸಾವಿರ.!

0
283

ಮದುವೆಯ ಮುನ್ನ ಮೊದಲು ಮನೆಯನ್ನು ಸರಿಯಾಗಿ ಬಳಿದು ಇಲ್ಲ, ಹೊಸ ಮನೆಯನ್ನು ಕಟ್ಟಿ ಮದುವೆಯಾಗುತ್ತಾರೆ. ಅದರಂತೆ ಮದುವೆಗೆ ಬೇಕಾದ ಎಲ್ಲ ವಸ್ತುಗಳನ್ನು ಸರಿಯಾರಿ ಖರೀದಿ ಮಾಡುವುದು ಕೂಡ ಪದ್ದತಿಯಾಗಿದೆ. ಅದರಂತೆ ಮದುವೆಯಲ್ಲಿ ಅತೀ ಮುಖ್ಯವಾದ ಬೇಡಿಕೆ ಎಂದರೆ ಫೋಟೋ ತೆಗೆಸುವುದು ಆಗಿರುತ್ತೆ, ಆದರೆ ಇಲ್ಲಿ ಮದುವೆಯ ಮೊದಲು ವರ ಟಾಯ್ಲೆಟ್​ನಲ್ಲಿ ನಿಂತು ಫೋಟೋ ತೆಗೆಸಿಕೊಂಡರೆ ಮಾತ್ರ ಮದುವೆಯಂತೆ. ಅಷ್ಟೇ ಅಲ್ಲದೆ ವಧುವಿಗೂ ಸರ್ಕಾರದಿಂದ ಸಿಗುತ್ತೆ 51 ಸಾವಿರ ರೂ. ಸಿಗುತ್ತಂತೆ.

Also read: ಬಿಗ್ ಬ್ರೇಕಿಂಗ್; ಬಿಎಲ್’ ಕಾರ್ಡ್ ದಾರರಿಗೆ ಬರೆ ಎಳೆದ ಸರ್ಕಾರ, ಇನ್ಮುಂದೆ ಆಯುಷ್ಮಾನ್ ಭಾರತ್ ಆರೋಗ್ಯ ಯೋಜನೆಯಲ್ಲಿ ಉಚಿತ ಚಿಕಿತ್ಸೆ ಇಲ್ಲ.!

ಟಾಯ್ಲೆಟ್’ ಸೆಲ್ಫೀ ಗೆ 51 ಸಾವಿರ?

ಹೌದು ಮದುವೆ ಮೊದಲು ಪ್ರಿವೆಡ್ಡಿಂಗ್​ ಫೋಟೋಶೂಟ್ ಹುಚ್ಚು ಶುರುವಾಗಿದೆ. ಆದರೆ ಮಧ್ಯಪ್ರದೇಶದಲ್ಲಿ ಮದುವೆಗೂ ಮುನ್ನ ವರನ ಫೋಟೋವನ್ನು ಕ್ಲಿಕ್ಕಿಸಿದರೆ ವಧುವಿಗೆ ಸರ್ಕಾರದಿಂದ 51 ಸಾವಿರ ರೂಪಾಯಿ ಸಿಗಲಿದೆ!. ಆದರೆ, ಮದುವೆ ಗಂಡು ಶೌಚಾಲಯದಲ್ಲಿ ನಿಂತು ಫೋಟೋ ಕ್ಲಿಕ್ಕಿಸಿಕೊಂಡರೆ ಮಾತ್ರ ಈ ಹಣ ಸಿಗಲಿದೆ! ಇದು ಅಚ್ಚರಿ ಎನಿಸಿದರೂ ಇದು ಸತ್ಯ.ವಾಗಿದ್ದು. ಬಯಲು ಶೌಚ ಮುಕ್ತಗೊಳಿಸುವ ಉದ್ದೇಶದಿಂದ ಮಧ್ಯಪ್ರದೇಶ ಸರ್ಕಾರ ಇಂತಹದ್ದೊಂದು ಹೊಸ ಯೋಜನೆಯನ್ನು ಜಾರಿಗೆ ತಂದಿದೆ. ವಿವಾಹಕ್ಕೂ ಮುನ್ನ ಪ್ರತೀಯೊಬ್ಬ ಹುಡುಗನ ಮನೆಯಲ್ಲಿಯೂ ಶೌಚಾಲಯ ಇರಬೇಕೆಂಬುದು ಯೋಜನೆಯ ಉದ್ದೇಶವಾಗಿದೆ.

Also read: ಸ್ವಂತ ಮಗುವಿನ ಆಸೆಗೆ 6 ವರ್ಷದ ಮಗುವನ್ನು ಕತ್ತು ಹಿಸುಕಿ ಟೆರೇಸ್‌ನಿಂದ ಎಸೆದು ಕೊಲೆ ಮಾಡಿದ ಮಲತಾಯಿ.!

ಕನ್ಯಾ ವಿವಾಹ ಯೋಜನೆಯಡಿ ಅರ್ಜಿ ಸಲ್ಲಿಸುವ ಮದುಮಗಳು ವರನ ಮನೆಯಲ್ಲಿ ಟಾಯ್ಲೆಟ್​ಯಿದೆ ಎಂದು ಸಾಬೀತು ಪಡಿಸಿದರೆ, ಆಕೆಗೆ ಈ ಯೋಜನೆಯಡಿ 51 ಸಾವಿರ ರೂಪಾಯಿ ಸರ್ಕಾರ ನೀಡುತ್ತದೆ. ಅದಕ್ಕಾಗಿ ಯುವತಿಯ ಕುಟುಂಬದವರು ಮದುಮಗ ಟಾಯ್ಲೆಟ್​ನಲ್ಲಿ ನಿಂತು ಕ್ಲಿಕ್ಕಿಸಿದ ಫೋಟೋವನ್ನು ಸರ್ಕಾರಕ್ಕೆ ಸಲ್ಲಿಸಬೇಕು. ನಂತರ ಯುವತಿಗೆ ಈ ಯೋಜನೆಯಡಿ ಹಣ ಸಿಗುತ್ತದೆ. ಅದರಂತೆ ಮಧ್ಯಪ್ರದೇಶದ ಮುಖ್ಯಮಂತ್ರಿ ಕನ್ಯಾ ವಿವಾಹ ಯೋಜನೆಯಡಿಯಲ್ಲಿ ವಧು ಹಣ ಪಡೆದುಕೊಳ್ಳಬೇಕಾದರೆ, ಮದುವೆಯಾಗುವ ಗಂಡನ ಮನೆಯ ಶೌಚಾಲಯ ಇದೆ ಎಂಬುದನ್ನು ಸಾಕ್ಷ್ಯ ಸಮೇತ ಸಾಬೀತು ಪಡಿಸಬೇಕು.

Also read: ಕ್ಷುಲ್ಲಕ ವಿಚಾರಕ್ಕೆ ಗಂಡ-ಹೆಂಡತಿಯ ಕಿತ್ತಾಟ; ಹುಚ್ಚು ಗುದ್ದಾಟದಲ್ಲಿ 5 ತಿಂಗಳ ಮಗುವನ್ನೇ ಕೊಂದರು.!

ಟಾಯ್ಲೆಟ್ ನಲ್ಲಿ ನಿಂತು ಸೆಲ್ಫಿ ತೆಗೆಸಿಕೊಳ್ಳುವುದು ಈಗ ಮುಜುಗರದ ಸಂಗತಿಯಾಗಿ ಪರಿಣಮಿಸಿದ್ದು, ಆದರೆ ಈ ನಿಯಮ ಯೋಜನೆ ಜಾರಿಯಾದ 2013 ರಿಂದಲೂ ಚಾಲ್ತಿಯಲ್ಲಿರುವುದರಿಂದ ಟಾಯ್ಲೆಟ್ ನಲ್ಲಿ ವರ ನಿಂತಿರುವ ಭಾವಚಿತ್ರ ನೀಡುವುದು ಕಡ್ಡಾಯ ಎಂದು ಅಧಿಕಾರಿಗಳು ಹೇಳುತ್ತಾರೆ. ಈ ಎಲ್ಲ ನಿಯಮಗಳಂತೆ ವಧುವಿಗೆ ಸರ್ಕಾರದಿಂದ ಹಣ ಸಿಗಬೇಕಾದರೆ, ವರ ತನ್ನ ಮನೆಯ ಟಾಯ್ಲೆಟ್’ನಲ್ಲಿ ಸೆಲ್ಫಿ ಕ್ಲಿಕ್ಕಿಸಿ ಅಧಿಕಾರಿಗಳಿಗೆ ದಾಖಲೆಗಳ ಜೊತೆಗೆ ನೀಡಬೇಕು. ಬಳಿಕ ಯೋಜನೆಯಡಿ ಮದುಮಗಳಿಗೆ ರೂ.51 ಸಾವಿರ ಹಣವನ್ನು ಸರ್ಕಾರ ನೀಡಲಿದೆ. ಈ ಯೋಜನೆ 2013ರಲ್ಲಿ ಮುಖ್ಯಮಂತ್ರಿ ಕನ್ಯಾ ಯೋಜನೆ ಜಾರಿಗೆ ಬಂದಿದೆ. ಯೋಜನೆ ಜಾರಿಗೆಯಾದ ಆರಂಭದಲ್ಲಿ ಶೌಚಾಲಯ ಇರಬೇಕೆಂಬ ಕಡ್ಡಾಯ ನಿಯಮವನ್ನು ಘೋಷಿಸಲಾಗಿತ್ತು. ಇದೀಗ ಸೆಲ್ಫಿ ವಿತ್​ ಟಾಯ್ಲೆಟ್​​ ಎಂಬ ಹೊಸ ನಿಯಮವನ್ನು ಜಾರಿಗೆತಂದಿದೆ
ಒಟ್ಟಾರೆಯಾಗಿ ನೋಡಿದರೆ ಈ ನಿಯಮ ಒಳ್ಳೆಯದೇ ಆಗಿದೆ. ಏಕೆಂದರೆ ಕೇಂದ್ರ ಸರ್ಕಾರ ಶೌಚಾಲಯಗಳನ್ನು ನಿರ್ಮಿಸಿ ಬಯಲು ಶೌಚ ಮುಕ್ತ ಗೊಳಿಸಬೇಕೆಂದು ಹಲವು ಯೋಜನೆಗಳನ್ನು ಜಾರಿಗೆ ತಂದರು ಕೆಲವರು ಶೌಚಾಲಯ ಕಟ್ಟಿಸಿದೆ ಮದುವೆಯಾದ ಹೆಂಡತಿ ಬಿಟ್ಟು ಹೋದ ಹಲವು ಪ್ರಕರಣಗಳಿಗೆ ಇದೊಂದು ಸರಿಯಾದ ನಿಯಮವೇ ಆಗಿದೆ.