ಅಮೆರಿಕಾದಲ್ಲಿ ಮೋದಿ ಕನ್ನಡ ಸೇರಿ ಅನೇಕ ಭಾರತೀಯ ಭಾಷೆಯಲ್ಲಿ ಮಾತಾಡಿದ್ದು ವಿಶೇಷ, ಹಿಂದಿ ಹೇರಿಕೆ ವಿವಾದಕ್ಕೆ ಈಥರ ಉತ್ತರ ಕೊಟ್ರ ಮೋದಿ?

0
461

ಅಮೇರಿಕಾದಲ್ಲಿ ಅನಿವಾಸಿ ಭಾರತೀಯರು ಆಯೋಜಿಸಿದ್ದ ಹೌಡಿ ಮೋದಿ ಕಾರ್ಯಕ್ರಮದಲ್ಲಿ ಮೋದಿ ಭಾರತೀಯ ಭಾಷೆಗಳ ಕಲರವನ್ನು ಹಂಚಿ ಹೊಗಳಿದ್ದಾರೆ. ಕಳೆದ ಮೂರು ದಿನಗಳಿಂದ ದೇಶದಲ್ಲಿ ಸಾಕಷ್ಟು ಕೇಳಿಬರುತ್ತಿರುವ ಕೂಗೆಂದರೆ, ಅದು ಹೌಡಿ ಮೋದಿ. ಅಮೆರಿಕದ ಹ್ಯೂಸ್ಟನ್​​ನಲ್ಲಿ ನಡೆದ ಈ ‘ಹೌಡಿ ಮೋದಿ’ ಎಂಬ ಕಾರ್ಯಕ್ರಮವೂ ಬಾರಿ ಟ್ರೆಂಡ್​​ ಸೆಟ್​​ ಮಾಡಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೇ ಈ ಟ್ರೆಂಡ್​​ ಸೆಟ್​​ ಕಾರಣ ಎನ್ನಬಹುದು.

ಹೌದು ಭಾರೀ ನಿರೀಕ್ಷೆ ಮೂಡಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಅಮೆರಿಕದ ಭೇಟಿಯಲ್ಲಿನ ಹೌಡಿ ಮೋದಿ ಕಾರ್ಯಕ್ರಮ ಹೊಸ ಇತಿಹಾಸ ರಚಿಸುವಲ್ಲಿ ಯಶಸ್ಸು ಕಂಡಿದೆ. ಭಾರತ ಮತ್ತು ಅಮೆರಿಕ ನಡುವಣ ಸಂಬಂಧವನ್ನು ಮತ್ತೊಂದು ಮಜಲಿಗೆ ಕೊಂಡೊಯ್ಯುವಲ್ಲಿ ಯಶಸ್ವಿಯಾಗಿ ಈ ಕಾರ್ಯಕ್ರಮ, ಭಾರತ ಮತ್ತು ಅಮೆರಿಕ ಎರಡೂ ದೇಶಗಳಲ್ಲಿ ಹೊಸ ಅಲೆ ಸೃಷ್ಟಿಸುವಲ್ಲೂ ಫಲಪ್ರದವಾಗಿದೆ. ಇಲ್ಲಿನ ಎನ್‌ಆರ್‌ಜಿ ಸ್ಟೇಡಿಯಂನಲ್ಲಿ, ಟೆಕ್ಸಾಸ್‌ ಭಾರತೀಯ ವೇದಿಕೆ ಸಂಘಟಿಸಿದ ಹೌಡಿ ಮೋದಿ ಕಾರ್ಯಕ್ರಮದಲ್ಲಿ ಐವತ್ತು ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಿ ದಾಖಲೆ ಬರೆದಿದ್ದಾರೆ.

Also read: ಕೇವಲ ಭಾರತದಲ್ಲಿ ಮಾತ್ರವಲ್ಲ, ವಿದೇಶಗಳಲ್ಲೂ ಪರಿಸರ ಸ್ವಚ್ಚತೆಯ ಬಗ್ಗೆ ಅರಿವು ಮೂಡಿಸಿ ಸರಳತೆ ಮೆರೆದ ನರೇಂದ್ರ ಮೋದಿಯವರ ವೀಡಿಯೋ ಭಾರಿ ವೈರಲ್.!

ಹೌಡಿ ಮೋದಿ ಎಂಬುದು ‘ಹೌ ಡು ಯು ಡು ಮೋದಿ’ (ಹೇಗಿದ್ದೀರ ಮೋದಿ) ಎಂಬುದರ ಹೃಸ್ವ ರೂಪ. ನಿನ್ನೆಯ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಪ್ರಧಾನಿ ನರೇಂದ್ರ ಮೋದಿ, ಭಾರತದ ಪ್ರಮುಖ ಹತ್ತು ಭಾಷೆಗಳಲ್ಲಿ ಈ ಹೌಡಿ ಮೋದಿ ಎಂಬುದಕ್ಕೆ ಉತ್ತರ ನೀಡಿದ್ದಾರೆ. ಅದರಲ್ಲಿ ಕನ್ನಡದಲ್ಲಿವೂ ಮಾತನಾಡಿ ‘ಭಾರತದಲ್ಲಿ ಎಲ್ಲವೂ ಚೆನ್ನಾಗಿದೆ’ ಎಂದು ಹೇಳುವ ಮೂಲಕ ಗಮನ ಸೆಳೆದಿದ್ದಾರೆ. ಹಿಂದಿ ಹೇರಿಕೆ ವಿವಾದಕ್ಕೆ ಈಥರ ಉತ್ತರ ಕೊಟ್ರ ಮೋದಿ ಎನ್ನುವ ಪ್ರಶ್ನೆ ಮೂಡಿದ್ದು, ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅಮೆರಿಕದ ಅಧ್ಯಕ್ಷ ಟ್ರಂಪ್​​​ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಫೋಟೋ ಶೇರ್​​ ಮಾಡುವ ಮೂಲಕ ನೆಟ್ಟಿಗರು ಟ್ರೆಂಡ್​ ಸೆಟ್​​ ಮಾಡಿದ್ದಾರೆ.

ಭಾರೀ ಪೂರ್ವಸಿದ್ಧತೆಯೊಂದಿಗೆ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಲು ಸಾವಿರಾರು ಭಾರತೀಯರು ಭಾನುವಾರ ಬೆಳಗ್ಗೆಯಿಂದಲೇ ಕೈಯಲ್ಲಿ ತ್ರಿವರ್ಣ ಧ್ವಜ, ಪ್ಲೇ ಕಾರ್ಡ್‌ ಹಿಡಿದುಕೊಂಡು, ಸಾಂಸ್ಕೃತಿಕ ಉಡುಗೆ, ಪ್ರಧಾನಿ ಮೋದಿಗೆ ಸ್ವಾಗತ ಬಯಸುವ ಟೀ ಶರ್ಟ್‌ ಧರಿಸಿಕೊಂಡು ಸ್ಟೇಡಿಯಂನತ್ತ ಧಾವಿಸಿದ್ದರು. ಕಾರ್ಯಕ್ರಮಕ್ಕೆ ಆಗಮಿಸಲೆಂದೇ ಟೆಕ್ಸಾಸ್‌ನ ಸುತ್ತಮತ್ತಲಿಂದಲೇ 140 ಬಸ್‌ಗಳನ್ನು ನಿಯೋಜಿಸಲಾಗಿತ್ತು. ಸುಮಾರು 90 ನಿಮಿಷಗಳ ಕಾಲ ನಡೆದ ಸಾಂಸ್ಕೃತಿ ಕಾರ್ಯಕ್ರಮಗಳು ಭಾರತದ ಸಂಸ್ಕೃತಿ ಹಾಗೂ ವಿವಿಧತೆಗೆ ಹಿಡಿದ ಕೈಗನ್ನಡಿಯಂತಿತ್ತು. ನೂರಾರು ಇಂಡೋ-ಅಮೆರಿಕ ಕಲಾವಿದರಿಂದ ಭಾರತದ ಭವ್ಯ ಸಂಸ್ಕೃತಿ, ಧಾರ್ಮಿಕ, ಸಾಮಾಜಿಕ ಹಾಗೂ ಭಾಷಾ ವೈವಿಧ್ಯತೆ, ಉಭಯ ದೇಶಗಳ ಆಚರಣೆಗಳ ಕುರಿತಾಗಿ ನೃತ್ಯ, ಗಾಯನ ಹಾಗೂ ಸಂಗೀತ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯಿತು.

Also read: ಉಪ ಚುನಾವಣೆ ಸಿದ್ದವಾದ ಕಾಂಗ್ರೆಸ್; 15 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆ, ಯಾವ ಕ್ಷೇತ್ರಕ್ಕೆ ಯಾರು ಪ್ರಭಾವಿ ಅಭ್ಯರ್ಥಿ??

ವೇದಿಕೆ ಹಿಂಬಾಗದಲ್ಲಿ ಅಳವಡಿಸಲಾದ ಬೃಹತ್‌ ಎಲ್‌ಸಿಡಿ ಪರದೆಯಲ್ಲಿ ಭಾರತ ಸಂಸ್ಕೃತಿ, ಸಾಧನೆ ಹಾಗೂ ವೈಶಿಷ್ಟ್ಯವನ್ನು ಸಾರುವ ಫೋಟೋ ಹಾಗೂ ಚಿತ್ರಗಳು ಗಮನ ಸೆಳೆದವು. ಇದೇ ವೇಳೆ ಭಾರತ ಹಾಗೂ ಅಮೆರಿಕ ನಡುವಣ ಸಂಬಂಧ ಕುರಿತಾದ ಡಾಕ್ಯುಮೆಂಟರಿ ಕೂಡ ಪ್ರದರ್ಶಿಸಲಾಯ್ತು. ಹತ್ತು ಭಾಷೆಯಲ್ಲಿ ಮಾತನಾಡಿದ ಮೋದಿ ಮೋದಿ ಭಾಷಣದುದ್ದಕ್ಕೂ ಜನರ ಘೋಷಣೆ, ಚಪ್ಪಳೆ, ಶಿಳ್ಳೆ, ಸಂಭ್ರಮ ಮುಗಿಲು ಮುಟ್ಟಿದ್ದವು. ಅದರಂತೆ ಹಿಂದಿ ಹೇರಿಕೆ ವಿವಾದಕ್ಕೆ ಈಥರ ಉತ್ತರ ಕೊಟ್ರ ಮೋದಿ ಎನ್ನುವುದು ಹಲವರು ಟ್ವೀಟ್ ನಲ್ಲಿ ಅಭಿಪ್ರಾಯ ತಿಳಿಸಿದ್ದಾರೆ.