ಗೆಲುವಿನ ನಾಗಾಲೋಟದಲ್ಲಿದ್ದ ಭಾರತ, ಆಸೀಸ್ ವಿರುದ್ಧ ಮುಗ್ಗರಿಸಿದ್ದು ಏಕೆ??

0
765

ಓಕೆಫ್ ಫಿರ್ಕಿಗೆ, ವಿರಾಟ್ ಪಡೆ ಗಿರ್ಕಿ: ಆಸೀಸ್‌ಗೆ ೩೩೩ ರನ್ ಜಯ

ಪಂದ್ಯದ ಹೈಲ್ಯಾಟ್ಸ್
೩೩೩ ಟೆಸ್ಟ್‌ನಲ್ಲಿ ಭಾರತದ ಎರಡನೇ ಹೀನಾಯ ಸೋಲಾಗಿದೆ
೪೪೪ ಭಾರತ ಎರಡು ಇನಿಂಗ್ಸ್‌ಗಳಲ್ಲಿ ಎದುರಿಸಿದ ಎಸೆತ
೧೩ ಭಾರತೀಯ ಆಟಗಾರರು ಒಂದಕ್ಕಿಗೆ ಔಟಾದ ಸಂಖ್ಯೆ
೫ ಬಾರಿ ಭಾರತದ ವಿರುದ್ಧ ಸತತ ಐದನೇ ಪಂದ್ಯದಲ್ಲಿ ಸ್ಮಿತ್ ಶತಕ
೧೩ ಆಟಗಾರರು ಈ ಪಂದ್ಯದಲ್ಲಿ ಬಲೆಗೆ ಎಲ್‌ಬಿಡಬ್ಲ್ಯೂ ಬಿದ್ದಿರುವುದು
೧೩ ವಿರಾಟ್ ಪಡೆ ಎರಡೂ ಇನಿಂಗ್ಸ್‌ಗಳಲ್ಲಿ ಕಲೆ ಹಾಕಿದ ರನ್
೧೨ ಯುವ ಸ್ಪಿನ್ ಬೌಲರ್ ಓಕೆಫ್ ಪಡೆದ ವಿಕೆಟ್
೨೧೨ ಎರಡೂ ಇನಿಂಗ್ಸ್‌ನಲ್ಲೂ ಭಾರತ ಕಲೆ ಹಾಕಿದ ರನ್

ಸತತ ಸರಣಿ ಗೆಲುವು.. ಅಜೇಯ ಓಟ.. ಯಶಸ್ಸಿನ ಮದಲ್ಲಿ ತೇಲಾಡುತ್ತಿದ್ದ ವಿರಾಟ್ ಪಡೆಗೆ ಆಸ್ಟ್ರೇಲಿಯಾ ಶಾಕ್ ನೀಡಿದೆ. ಮೊದಲೇರಡು ಸ್ಥಾನಿಯರ ನಡುವೆ ನಡೆದ ಫೈಟ್‌ನಲ್ಲಿ ಆಸೀಸ್ ಬಾರ್ಡರ್ ಗವಾಸ್ಕರ್ ಟ್ರೋಫಿ ಮೊದಲ ಪಂದ್ಯದಲ್ಲಿ ಭಾರತವನ್ನು ಹೀನಾಯವಾಗಿ ಸೋಲಿಸಿದೆ. ಇದು ಭಾರತ ಕಂಡ ಎರಡನೇ ದೊಡ್ಡ ಸೋಲಾಗಿದೆ. ಪುಣೆಯ ಮಾಹಾರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಅಂಗಳದಲ್ಲಿ ನಡೆದ ಮೂರನೇ ದಿನವಾದ ಶನಿವಾರದ ಪಂದ್ಯದಲ್ಲೂ ಯುವ ಸ್ಪಿನ್ ಬೌಲರ್ ಓಕೆಫ್ ಕಮಾಲ್ ಮುಂದುವರೆದಿದೆ. ಮೊದಲ ಇನಿಂಗ್ಸ್‌ನಲ್ಲಿ ಭಾರತವನ್ನು ಕಾಡಿದ ಓಕೆಫ್ ಎರಡನೇ ಇನಿಂಗ್ಸ್‌ನಲ್ಲೂ ಆರು ವಿಕೆಟ್ ಪಡೆದರು. ಮೂರನೇ ದಿನ ೧೬ ವಿಕೆಟ್ ಉರುಳಿದವು.

Image result for steven smith and kohli

ಭಾರತ ಪ್ರವಾಸಿಗರಿಗೆ ಸ್ಪಿನ್ ಮೋಡಿಯ ಬಲೆ ಬೀಸಿ, ಮಜಾ ಸವಿಯುತ್ತಿತ್ತು. ಆದರೆ ಈಗ ತವರಿನಲ್ಲಿ ವಿರಾಟ್ ಪಡೆ ಸೋಲಿನ ಕಹಿಯನ್ನು ಉಂಡಿದೆ.

ಆಸೀಸ್ ತಂಡದ ನಾಯಕ ಸ್ಟೀವನ್ ಸ್ಮೀತ್ ತಾವೇಕೆ ಟೆಸ್ಟ್‌ನಲ್ಲಿ ನಂಬರ್ ೧ ಎಂಬುದನ್ನು, ಸ್ಪಿನ್ ಸ್ನೇಹಿ ಪಿಚ್‌ನಲ್ಲಿ ಶತಕ ಸಿಡಿಸಿ ಸಾಬೀತು ಮಾಡಿದ್ದಾರೆ. ಇವರ ಶತಕದ ನೆರವಿನಿಂದ ಆಸೀಸ್ ಎರಡನೇ ಇನಿಂಗ್ಸ್‌ನಲ್ಲಿ ೨೮೫ ರನ್‌ಗಳಿಗೆ ಆಲೌಟ್ ಆಯಿತು. ಮೊದಲ ಇನಿಂಗ್ಸ್ ೧೫೫ ರನ್ ಹಿನ್ನಡೆ ಆಧಾರ ಮೇಲೆ ಭಾರತಕ್ಕೆ ಗೆಲ್ಲಲು ೪೪೧ ರನ್ ಟಾರ್ಗೆಟ್.

Image result for steven smith and kohli
ಚೇಸಿಂಗ್ ಸ್ಟಾರ್ ವಿರಾಟ್ ಕೊಹ್ಲಿ, ಟ್ಯಾಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ, ರನ್ ಕಲೆ ಹಾಕಬಕಲ್ಲ ರಹಾನೆ, ಯುವ ರಾಹುಲ್ ಹಾಗೂ ವಿಜಯ್ ರನ್‌ಬರವನ್ನು ಅನುಭವಿಸಿದರ ಫಲವಾಗಿ ಎರಡನೇ ಇನಿಂಗ್ಸ್‌ನಲ್ಲೂ ಭಾರತ ಮಕಾಡೆ ಮಲಗಿದೆ.
ಈ ಸೋಲಿನಿಂದ ಭಾರತ ಪಾಠ ಕಲಿಯದೇ ಇದ್ದರೇ ಸರಣಿ ಸೋಲು ನಿಶ್ಚಿತ.