ಪ್ರತ್ಯೇಕ ಕನ್ನಡ ರಾಷ್ಟ್ರಕ್ಕೆ ಕನ್ನಡ ಬರಹಗಾರರು ಬೇಡಿಕೆ

0
1353

ಬುಧವಾರ ಕನ್ನಡ ಬರಹಗಾರರು, ಬುದ್ಧಿಜೀವಿಗಳು ಮತ್ತು ಕವಿಗಳು ಕಾವೇರಿ ನೀರು ವಿವಾದದಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ ಅದರಿಂದ ಕರ್ನಾಟಕದ ಜನರು ಪ್ರತ್ಯೇಕ ಕನ್ನಡ ದೇಶದ ಆಯ್ದುಕೊಳ್ಳಬಹುದು ಎಂದು ಹೇಳಿದರು.

ಪ್ರತ್ಯೇಕ ಕನ್ನಡ ರಾಷ್ಟ್ರ- ಕನ್ನಡ ಬರಹಗಾರರ ಬೇಡಿಕೆ

ರವೀಂದ್ರ ಕಲಾಕ್ಷೇತ್ರದಲ್ಲಿ ಕರೆದಿದ್ದ ಸಭೆಯಲ್ಲಿ , ಪ್ರಧಾನಿ ನರೇಂದ್ರ ಮೋದಿ ಮಧ್ಯಪ್ರವೇಶಿಸಿ ಕರ್ನಾಟಕ ಮತ್ತು ತಮಿಳುನಾಡು ನಡುವೆ ಕಾವೇರಿ ನೀರಿನ ಹಂಚಿಕೆ ವಿಚಾರವಾಗಿ ಒಂದು ಸೌಹಾರ್ದಯುತ ಪರಿಹಾರವನ್ನು ಕಂಡುಹಿಡಿಯಲು ಪ್ರಧಾನಿ ನರೇಂದ್ರ ಮೋದಿ ವಿಫಲರಾಗಿದ್ದರೆ ಎಂದು ನಿರ್ಣಯಕೆ ಬಂದರು.

“ಪ್ರಧಾನಿ ನರೇಂದ್ರ ಮೋದಿ ಮೌನ ಜನರು ಕನ್ನಡ ಜನರ ಅಕೋಶಕ್ಕೆ ಕಾರಣವಾಗಿ ಒಂದು ಸ್ವತಂತ್ರ ರಾಷ್ಟ್ರವನ್ನು ಆಯ್ಕೆ ಮಾಡಬೇಕೆಂಬ ಬಾವನೆ ಬಂದಿದೆ. ಈ ರೀತಿಯ ಚಿಂತನೆ ಬರದಂತೆ ನೋಡಿಕೊಳ್ಳಬೇಕು ಎಂದು ಪ್ರಧಾನಿಗಳಿಗೆ ನಾನು ಕೇಳಿಕೊಳ್ಳುತೇನೆ. 924 ರಲ್ಲಿ ತಮಿಳುನಾಡು ಮತ್ತು ಕರ್ನಾಟಕ ನಡುವೆ ಒಪ್ಪಂದದ ರದ್ದು ಮತ್ತು ಎರಡೂ ರಾಜ್ಯಗಳಲ್ಲಿ ವಾಸ್ತವ ಪರಿಸ್ಥಿತಿ ಆಧರಿಸಿ ಹೊಸ ಒಪ್ಪಂದಕ್ಕೆ ಸಹಿ ಮಾಡಿಸುವುದು ಈಗಿನ ಅಗತ್ಯ. ತಮಿಳುನಾಡು ಮತ್ತು ಕರ್ನಾಟಕ ನಡುವೆ ಹೊಸ ಒಪ್ಪಂದಕ್ಕೆ ಬೇಡಿಕೆ ಬೇಕು ಅಂತ ಕರ್ನಾಟಕದ ಸಂಸದರು ರಾಜೀನಾಮೆ ಬಯಸುವ, ” ಮಾಲೂರು ಸಿದ್ದಪ್ಪ ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರೊ ಚಂದ್ರಶೇಖರ ಪಾಟೀಲ್ ಕಾವೇರಿ ನೀರು ವಿವಾದದಲ್ಲಿ ಸಂವಿಧಾನದ ಪ್ರಕಾರ ಸುಪ್ರೀಂ ಕೋರ್ಟ್ ಹಸ್ತಕ್ಷೇಪ ತಪ್ಪು ಎಂದು ಹೇಳಿದರು. “ಎರಡು ರಾಷ್ಟ್ರೀಯ ರಾಜಕೀಯ ಪಕ್ಷಗಳ ನಾಯಕರು ತಮ್ಮ ತಮ್ಮ High ಕಮಾಂಡ್ ಗಳಿಗೆ ಶರಣಾಗಿದ್ದಾರೆ. ಇದು ತಮಿಳುನಾಡು ಜೊತೆ ಕಾವೇರಿ ನೀರು ಹಂಚಿಕೆಯಲ್ಲಿ ಕರ್ನಾಟಕಕ್ಕೆ ಹಿನ್ನಡೆಗೆ ಪ್ರಮುಖ ಕಾರಣ, ” ಪ್ರೊ ಪಾಟೀಲ್ ಹೇಳಿದರು.

ಜಿ ಕೆ ಗೋವಿಂದ ರಾವ್ ರಾಜ್ಯದ ಬಿಜೆಪಿ ನಾಯಕರು ಮತ್ತು ಕರ್ನಾಟಕ ಪ್ರತಿನಿಧಿಸುವ ಕೇಂದ್ರ ಸಚಿವರು ರಾಜ್ಯದ ವಿರುದ್ಧ ಕೆಲಸ ಮಾಡುತಿದ್ದರೆ ಎಂದು ಹೇಳಿದರು. “ಈ ನಾಯಕರು ಪ್ರಧಾನಿ ಕಾವೇರಿ ನೀರಿನ ವಿವಾದದ ಬಗ್ಗೆ ಮಾತಾಡುವುದು ಸರಿ ಇಲ್ಲ ಅಂತ ಬೊಗಳೆ ಹೇಳುತ್ತಿದ್ದಾರೆ ಅಷ್ಟೇ ” ರಾವ್ ತಿಳಿಸಿದ್ದಾರೆ.