ಭಾರತದ ಬಗ್ಗೆ ಆರ್ಥಿಕ ಸಮೀಕ್ಷೆ ನೀಡಿದ 7 ಕುತೂಹಲಕಾರಿ ವಿಷಯಗಳು

0
1508

ಸರಿಯಾದ ದಿಕ್ಕಿನಲ್ಲಿ ಸರಕಾರ ಮುನ್ನಡೆಸಿದರೆ ಭಾರತ ವಿಶ್ವದ 4ನೇ ಶಕ್ತಿಶಾಲಿ ರಾಷ್ಟ್ರವಾಗಿ ಹೊರಹೊಮ್ಮಲಿದೆ. ಅಮೆರಿಕ, ಚೀನಾ, ಜರ್ಮನಿ ನಂತರದ ಸ್ಥಾನ ಭಾರತಕ್ಕೆ ಲಭಿಸಲಿದೆ ಎಂದು ಆರ್ಥಿಕ ಸಮೀಕ್ಷೆ ಅಭಿಪ್ರಾಯಪಟ್ಟಿದೆ. ಅದರ ಜೊತೆ ಭಾರತದ ಕುರಿತು ಕೆಲವೊಂದು ಕುತೂಹಲಕಾರಿ ಅಂಶಗಳ ಮೇಲೆ ಬೆಳಕು ಚೆಲ್ಲಿದ ಅದರ ಸಂಕ್ಷಿಪ್ತ ನೋಟ ಇಲ್ಲಿದೆ.

 • ವಲಸೆ ಪ್ರಮಾಣ ದುಪ್ಪಟ್ಟು
  ರೈಲ್ವೆಯಲ್ಲಿ ಪ್ರಯಾಣಿಕರ ಸಂಚಾರ ದಟ್ಟಣೆ ಅಂಕಿ-ಅಂಶಗಳ ಪ್ರಕಾರ ಪ್ರತಿವರ್ಷ 90 ಲಕ್ಷ ವಲಸೆಗಾರರು ಭಾರತಕ್ಕೆ ಪ್ರವೇಶಿಸುತ್ತಿದ್ದಾರೆ. 2011ರ ವರ್ಷಕ್ಕೆ ಹೋಲಿಸಿದರೆ ವಲಸೆ ಪ್ರಮಾಣದಲ್ಲಿ ದುಪ್ಪಟ್ಟು ಹೆಚ್ಚಳ
 • ಚೀನಾದ ಅಭಿವೃದ್ಧಿ ಕುಂಠಿತ
  ಚೀನಾದ ಕ್ರೆಡಿಟ್ ರೇಟಿಂಗ್‍ 2010ಕ್ಕೆ ಹೋಲಿಸಿದರೆ ಎ+ನಿಂದ ಎಎ ದರ್ಜೆಗಿಳಿದಿದೆ. ಭಾರತದ ರೇಟಿಂಗ್‍ ಬಿಬಿಬಿನಲ್ಲೇ ಉಳಿದಿದೆ. ಚೀನಾದ ಘೋಷಿತ ಕ್ರೆಡಿಟ್‍ ಜಿಡಿಪಿ ಶೇ.2015ರಿಂದ 145ಕ್ಕೆ ಇಳಿದಿದೆ. ಅತ್ಯಂತ ಪ್ರಮುಖವಾದುದು ಅಂದರೆ ಭಾರತದೊಂದಿಗಿನ ಒಪ್ಪಂದಗಳ ಸಂಖ್ಯೆಯಲ್ಲಿ ಭಾರೀ ಇಳಿಮುಖವಾಗಿದೆ.
 • ಸಮಾಜ ಕಲ್ಯಾಣ ನೆನೆಗುದಿಗೆ
  ದೇಶದಲ್ಲಿ ಸಮಾಜ ಕಲ್ಯಾಣಾಭಿವೃದ್ಧಿ ಕೆಲಸಗಳು ಅನುದಾನ ಇಲ್ಲದೇ ಕಳೆಗುಂದಿದೆ. ತೀರಾ ಹಿಂದುಳಿದ ಗ್ರಾಮಗಳು ಸರಕಾರದ ನೆರವಿನ ಹಸ್ತ ಇಲ್ಲದೇ ಸೊರಗಿದೆ. ತೀರಾ ಹಿಂದುಳಿದ ಗ್ರಾಮಗಳಿಗೆ ಶೇ.40ರ ಬದಲು ಶೇ.29 ಅನುದಾನ ತಲುಪುತ್ತಿದೆ.
 • ತೆರಿಗೆ ಪಾವತಿಯಲ್ಲಿ 13ನೇ ಸ್ಥಾನ
  ಭಾರತದಲ್ಲಿ 100 ಜನರ ಪೈಕಿ 7 ಮಂದಿ ಮಾತ್ರ ತೆರಿಗೆ ಪಾವತಿಸುತ್ತಿದ್ದಾರೆ. ತೆರಿಗೆ ಪಾವತಿದಾರರ ಸಂಖ್ಯೆಯಲ್ಲಿ ಭಾರತಕ್ಕೆ 13ನೇ ಸ್ಥಾನ ಲಭಿಸಿದೆ. ಜಿ-20 ದೇಶಗಳ ಪಟ್ಟಿಯಲ್ಲಿ ಭಾರತಕ್ಕೆ 20ನೇ ಸ್ಥಾನವಿದೆ.
 • ಚೀನಾಗಿಂತ ಭಾರತ ಮುಂದು
  ಚೀನಾಗೆ ಹೋಲಿಸಿದರೆ ಸರಕು ಮತ್ತು ಮಾರಾಟದಲ್ಲಿ ಭಾರತ ಮುಂದೆ ಇದೆ. ಜಿಡಿಪಿಗೆ ಅತಿ ಹೆಚ್ಚು ಕೊಡುಗೆ ಜಿಡಿಪಿಯಿಂದ ಬರುತ್ತಿದೆ. ಇದೇ ರೀತಿ ದೇಶದ ಆಂತರಿಕ ವ್ಯವಹಾರದಲ್ಲೂ ಚೀನಾಗಿಂತ ಭಾರತ ಮುಂದಿದೆ.
 • ಉದ್ಯೋಗಿಗಳ ಸಂಖ್ಯೆ ಸಾಮಾನ್ಯ
  ದೇಶದಲ್ಲಿ ಹೊಸ ಉದ್ಯೋಗಿಗಳ ಸಂಖ್ಯೆಯಲ್ಲಿ ಸರಿಸಾರಿ ಏರಿಕೆ ಉತ್ತಮವಾಗಿದೆ. ಇತರ ದೇಶಗಳಿಗೆ ಹೋಲಿಸಿದರೆ ಕಡಿಮೆ ಆಗಿದ್ದರೂ ಉತ್ತಮ ಸ್ಥಿತಿ ಇದೆ.
 • ತಲಾ ಆದಾಯ ಏರಿಕೆ
  ಚೀನಾಗೆ ಹೋಲಿಸಿದರೆ ಭಾರತದ ತಲಾ ಆದಾಯ ಹೆಚ್ಚಳವಾಗಿದೆ.