ಎಲ್ಲವನ್ನು ಒಂದೇ ಒಂದರಲ್ಲೇ ಜೋಡಿಸಲು ಹೊರಟಿರುವ ಕೇಂದ್ರ ಸರ್ಕಾರ ಈಗಾಗಲೇ ಒಂದು ದೇಶ ಒಂದು ಚುನಾವಣೆ. ‘ಒನ್ ನೇಷನ್, ಒನ್ ರೇಷನ್ ಕಾರ್ಡ್’ ಒಂದೇ DL ಸೇರಿದಂತೆ ಹಲವು ಮಹತ್ವದ ಯೋಜನೆ ಬಗ್ಗೆ ಈಗಾಗಲೇ ಜಾರಿ ಮಾಡಲು ಸಿದ್ದತೆ ನಡೆಸಿದ್ದು, ಈಗ ಮತ್ತೊಂದು ಯೋಜನೆ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅಮಿತ್ ಶಾ ಸುಳಿಯು ನೀಡಿದ್ದು ಎಲ್ಲಡೆ ಅದರದೇ ಚರ್ಚೆ ನಡೆಯುತ್ತಿದೆ. ಅದರಂತೆ ಆಧಾರ್, ಪಾಸ್ ಪೋರ್ಟ್, ಡ್ರೈವಿಂಗ್ ಲೈಸೆನ್ಸ್ ಹಾಗೂ ಬ್ಯಾಂಕ್ ಖಾತೆ ಒಳಗೊಂಡ ಬಹು ಉಪಯೋಗಿ ಕಾರ್ಡ್ ಅನ್ನು ಭಾರತೀಯರಿಗೆ ನೀಡುವ ಬಗ್ಗೆ ಮಾತನಾಡಿದ್ದಾರೆ.
ಏನಿದು ಒಂದೇ ಸ್ಮಾರ್ಟ್ ಕಾರ್ಡ್?
ಹೌದು ಸದ್ಯದ ಪರಿಸ್ಥಿತಿ ಒಂದು ಕೆಲಸಕ್ಕೆ ಒಂದೊಂದು ಗುರುತಿನ ಚೀಟಿ ಇದ್ದು, ಯಾವುದೇ ಕೆಲಸಕ್ಕೆ ಹತ್ತಾರು ಐಡಿ ಕಾರ್ಡ್ ಇಟ್ಟುಕೊಂಡು ಓಡಾಡುವ ಪರಿಸ್ಥಿತಿ ಜನಸಾಮಾನ್ಯರಿಗಿದೆ. ಈ ತಾಪತ್ರೆಯನ್ನು ತಪ್ಪಿಸಿ ಎಲ್ಲ ಕೆಲಸಗಳಿಗೂ ಒಂದೇ ಗುರುತಿನ ಚೀಟಿ ಪರಿಚಯಿಸಲು ಕೇಂದ್ರ ಸರ್ಕಾರ ಯೋಜಿಸಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪಾಸ್ಪೋರ್ಟ್, ಆಧಾರ್, ವೋಟರ್ ಐಡಿ, ಡ್ರೈವಿಂಗ್ ಲೈಸೆನ್ಸ್, ಬ್ಯಾಂಕ್ ಅಕೌಂಟ್ ಸೇರಿದಂತೆ ಎಲ್ಲ ಕೆಲಸಗಳಿಗೂ ಒಂದೇ ಬಹುಉದ್ದೇಶಿತ ಗುರುತಿನ ಚೀಟಿ (ಮಲ್ಟಿಪರ್ಪಸ್ ಐಡಿ ಕಾರ್ಡ್) ಪರಿಚಯಿಸುವುದಾಗಿ ಪ್ರಸ್ತಾಪಿಸಿದ್ದಾರೆ.
ದೆಹಲಿಯಲ್ಲಿ ಜನಗಣನ(ಜನಗಣತಿ) ಕಟ್ಟಡದ ಶಂಕುಸ್ಥಾಪನಾ ಸಮಾರಂಭದಲ್ಲಿ ಭಾಗಿಯಾಗಿ ಮಾತನಾಡಿದ ಅಮಿತ್ ಶಾ, ದೇಶದ ಜನರ ಆಧಾರ್ ಕಾರ್ಡ್, ಪಾನ್ ಕಾರ್ಡ್, ವೋಟರ್ ಐಡಿ, ಬ್ಯಾಂಕ್ ಖಾತೆ, ಪಾಸ್ ಪೋರ್ಟ್ ಗಳ ಜಾಗದಲ್ಲಿ ಒಂದೇ ಕಾರ್ಡ್ ಇದ್ದರೆ ಬಹಳ ಸಹಾಯವಾಗುತ್ತದೆ. ಬಹು ಉಪಯೋಗಿ ಕಾರ್ಡ್(ಮಲ್ಟಿ ಪರ್ಪಸ್ ಕಾರ್ಡ್) ಇದ್ದರೆ ದೇಶದ ಹಲವು ಸಮಸ್ಯೆಗಳು ಶೀಘ್ರವೇ ಇತ್ಯರ್ಥವಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ತಮ್ಮ ಭಾಷಣದಲ್ಲಿ ಮಲ್ಟಿ ಪರ್ಪಸ್ ಕಾರ್ಡ್ ಇದ್ದರೆ ಚೆನ್ನಾಗಿರುತಿತ್ತು ಎಂದು ಹೇಳಿದರು. ಆದರೆ ಈ ಕಾರ್ಡ್ ಸರ್ಕಾರ ನೀಡಲು ಮುಂದಾಗಿದ್ಯಾ ಎನ್ನುವುದರ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಿಲ್ಲ. ಈ ವೇಳೆ 2021ರ ಜನಗಣತಿ ಮೊಬೈಲ್ ಅಪ್ಲಿಕೇಶನ್ ಮೂಲಕ ನಡೆಯಲಿದೆ ಎಂದು ತಿಳಿಸಿದರು.
ಮೊಬೈಲ್ app ಮೂಲಕ ಜನಗಣತಿ?
2021ರ ಜನಗಣತಿಗೆ ಒಂದು ಮೊಬೈಲ್ ಆಪ್ ರೂಪಿಸಲಾಗುವುದು. ಇದು ಇಲ್ಲಿಯವರೆಗೆ ನಡೆಯುತ್ತಿದ್ದ ಸಾಂಪ್ರದಾಯಿಕ ಸಮೀಕ್ಷೆಯನ್ನು ಡಿಜಿಟಲ್ ಸಮೀಕ್ಷೆಯನ್ನಾಗಿ ಪರಿವರ್ತಿಸಲಿದೆ ಎಂದು ಹೇಳಿದರು. ಈ ಭಾರಿ 2 ಹಂತಗಳಲ್ಲಿ ಜನಗಣತಿ ನಡೆಯಲಿದೆ. ಮೊದಲ ಹಂತವು 2021ರ ಮಾರ್ಚ್ 1ರಂದು ಆರಂಭವಾಗಲಿದೆ. ಮೊದಲ ಹಂತದಲ್ಲಿ ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡಗಳಲ್ಲಿ ನಡೆಯಲಿದೆ. ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್ಪಿಆರ್ : 2021 ರ ಜನಗಣತಿ ಕಾರ್ಯಕ್ಕೆ 12,000 ಕೋಟಿ ರೂಪಾಯಿ ಅನುದಾನ ಮೀಸಲಿರಿಸಲಾಗಿದೆ. ಜತೆಗೆ 2020ರ ವೇಳೆಗೆ ದೇಶದ ಎಲ್ಲ ಜನತೆಯನ್ನು ನೋಂದಣಿ ಮಾಡುವ “ರಾಷ್ಟ್ರೀಯ ಜನಸಂಖ್ಯಾ ನೋಂದಣಿ” (ಎನ್ಪಿಆರ್) ಗೆ ಸಿದ್ದತೆ ನಡೆಸುವುದಾಗಿಯೂ ಅಮಿತ್ ಶಾ ತಿಳಿಸಿದ್ದಾರೆ.