ಇನ್ಮುಂದೆ ಅಂಚೆ ಕಚೇರಿಯಲ್ಲಿ ಸಿಗಲಿದೆ ಸಾಲ; ಬ್ಯಾಂಕ್ ನ ಎಲ್ಲ ಸೇವೆಗಳು ಈಗ ಅಂಚೆ ಕಚೇರಿಯಲ್ಲಿ ಲಭ್ಯ!!

0
1068

ಪೂರ್ಣ ಪ್ರಮಾಣದ ಸೇವೆಯನ್ನು ಒದಗಿಸಲು ಬರುತ್ತಿರುವ ಅಂಚೆ ಪಾವತಿ ಬ್ಯಾಂಕ್‌ ‘ಮನೆ ಮನೆಗೂ ತಮ್ಮ ಬ್ಯಾಂಕ್‌’ ಎಂಬ ಧ್ಯೇಯದಿಂದ ಆರಂಭವಾಗಿರುವ ಅಂಚೆ ಪಾವತಿ ಬ್ಯಾಂಕ್‌ ಪ್ರತಿಯೊಂದು ಜಿಲ್ಲೆಯಲ್ಲಿಯೂ ಕೂಡ ಕನಿಷ್ಠ ಒಂದೊಂದು ಅಂಚೆ ಇಲಾಖೆಯ ಪೇಮೆಂಟ್ಸ್ ಶಾಖೆ ತೆರೆದಿದ್ದು. ಉಳಿತಾಯ ಖಾತೆಯಲ್ಲಿನ ಹಣವನ್ನು ನೇರವಾಗಿ ಮನೆ ಬಾಗಿಲಿಗೆ ತಂದುಕೊಡುವ ಹಾಗೂ ಮನೆ ಬಾಗಿಲಿಗೆ ಬಂದು ಹಣ ಪಡೆದು ಅದನ್ನು ಖಾತೆಗೆ ಜಮಾ ಮಾಡುವ ಚಿಂತನೆಯಲ್ಲಿದ್ದು, ಪ್ರಧಾನಿ ಮೋದಿಯವರು ಕೂಡ ಅಂಚೆ ಕಚೇರಿ ವ್ಯವಸ್ಥೆಯಲ್ಲಿ ಸಾಕಷ್ಟು ಸುಧಾರಣೆ ಮಾಡಿದ್ದು, ಈಗ ಅಂಚೆ ಬ್ಯಾಂಕ್ ಗಳಲ್ಲಿವೂ ಸಾಲ ಪಡೆಯಬಹುದಾಗಿದೆ.

ಅಂಚೆ ಬ್ಯಾಂಕ್-ಗಳಲ್ಲಿ ಸಾಲ ಸೌಲಭ್ಯ?

ಹೌದು ಈಗಾಗಲೇ ಹೊಸ ಹೊಸ ಸೌಲಭ್ಯ ಹೊತ್ತು ತರುತ್ತಿರುವ ಅಂಚೆ ಬ್ಯಾಂಕ್-ಗಳಿಗೆ ಕೇಂದ್ರ ಸರ್ಕಾರ ಹೊಸ ಯೋಜನೆಗಳನ್ನು ತರುತ್ತಿದ್ದು. ನೀವು ಎಲ್ಲಾ ಬ್ಯಾಂಕಿಂಗ್ ಸೌಲಭ್ಯಗಳನ್ನು ಅಂಚೆ ಕಚೇರಿಯಲ್ಲಿ ಪಡೆಯಬಹುದು. ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಪ್ರಾರಂಭಿಸಿದ ನಂತರ, ಪೋಸ್ಟ್ ಆಫೀಸ್ ಆನ್ಲೈನ್ ಬ್ಯಾಂಕಿಂಗ್‌ಗೆ ಅನುಕೂಲ ಕಲ್ಪಿಸಲು ಆರಂಭಿಸಿದೆ. ಉಳಿತಾಯ ಖಾತೆ ಮತ್ತು ಸ್ಥಿರ ಠೇವಣಿಗಳಂತಹ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸುವುದರ ಜೊತೆಗೆ ಅಂಚೆ ಕಚೇರಿ ಈಗ ಸಾಲ ಸೌಲಭ್ಯವನ್ನು ಒದಗಿಸುತ್ತದೆ. ನಿಮಗೆ ಅಗತ್ಯವಿದ್ದರೆ ಈಗ ನೀವು ಅಂಚೆ ಕಚೇರಿಯಿಂದ ಸಾಲ ತೆಗೆದುಕೊಳ್ಳಬಹುದು.

ಅಂಚೆ ಇಲಾಖೆಯನ್ನು ಸಣ್ಣ ಹಣಕಾಸು ಬ್ಯಾಂಕ್ ಆಗಿ ಪರಿವರ್ತಿಸಲು ಸರ್ಕಾರ ನಿರ್ಧರಿಸಿದೆ. ಇದು ಗ್ರಾಹಕರಿಗೆ ಸಣ್ಣ ಸಾಲವನ್ನು ನೀಡಲಿದೆ. ಐಪಿಪಿಬಿ ಖಾತೆಯನ್ನು ಪೋಸ್ಟ್ ಆಫೀಸ್ ಉಳಿತಾಯ ಖಾತೆಗೆ ಲಿಂಕ್ ಮಾಡಬಹುದು. ಇದಲ್ಲದೆ, ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್, ಎಸ್‌ಎಂಎಸ್ ಬ್ಯಾಂಕಿಂಗ್, ಮಿಸ್ಡ್ ಕಾಲ್ ಬ್ಯಾಂಕಿಂಗ್, ಫೋನ್ ಬ್ಯಾಂಕಿಂಗ್ ಸೇವೆಗಳು ಸಹ ಅಂಚೆ ಕಚೇರಿಯಲ್ಲಿ ಲಭ್ಯವಿದೆ. ಸದ್ಯ ಪೇಮೆಂಟ್ ಬ್ಯಾಂಕಿಂಗ್ ಗ್ರಾಹಕರಿಗೆ ಸಾಲ ನೀಡುವುದಿಲ್ಲ. ಪೋಸ್ಟ್ ಆಫೀಸ್ ನಲ್ಲಿ ತೆರೆದ ಆರ್ ಡಿ ಖಾತೆಯಿಂದ ಸಾಲ ಪಡೆಯಬಹುದು.

ಪೋಸ್ಟ್ ಆಫೀಸ್ ಪೇಮೆಂಟ್ ಬ್ಯಾಂಕ್ ಸೌಲಭ್ಯ

ಅಂಚೆ ಇಲಾಖೆಯನ್ನು ಸಣ್ಣ ಹಣಕಾಸು ಬ್ಯಾಂಕ್ ಆಗಿ ಪರಿವರ್ತಿಸಲು ಸರ್ಕಾರ ನಿರ್ಧರಿಸಿದೆ. ಇದು ಗ್ರಾಹಕರಿಗೆ ಸಣ್ಣ ಸಾಲವನ್ನು ಒದಗಿಸಲು ಸಹಾಯ ಮಾಡುತ್ತದೆ. ಪೋಸ್ಟ್ ಆಫೀಸ್ ಪೇಮೆಂಟ್ ಬ್ಯಾಂಕ್ ಉಳಿತಾಯ ಖಾತೆ, ಕರೆಂಟ್ ಅಕೌಂಟ್, ಗ್ರೂಪ್ ಟರ್ಮ್ ಇನ್ಶುರೆನ್ಸ್, ಬಿಲ್ ಪಾವತಿ ಮತ್ತು ರೀಚಾರ್ಜ್, ರವಾನೆ ಮತ್ತು ಫಂಡ್ ವರ್ಗಾವಣೆ, ಡೋರ್‌ಸ್ಟೆಪ್ ಬ್ಯಾಂಕಿಂಗ್, ಡಿಒಪಿ ಉತ್ಪನ್ನ ಪಾವತಿ ಮತ್ತು ನೇರ ಲಾಭ ವರ್ಗಾವಣೆಯನ್ನು ಒದಗಿಸುತ್ತಿದೆ.

ಅಂಚೆ ಬ್ಯಾಂಕಿನಲ್ಲಿ ಹೆಚ್ಚುವರಿ ಸೌಲಭ್ಯ

ಆದರೆ ಅಂಚೆ ಕಚೇರಿ ಪೇಮೆಂಟ್ಸ್ ಬ್ಯಾಂಕ್ ಸಾಲವನ್ನು ನೀಡಲು ಸಾಧ್ಯವಿಲ್ಲ. ಆದಾಗ್ಯೂ, ಇದು ಅಂಚೆ ಕಚೇರಿಯಲ್ಲಿ ತೆರೆದ ಆರ್‌ಡಿ ಖಾತೆಗೆ ಬದಲಾಗಿ ಸಾಲವನ್ನು ನೀಡಬಹುದು. ಇದಲ್ಲದೆ, ಐಪಿಪಿಬಿ ತನ್ನ ಖಾತೆಯ ಮೂಲಕ ಸುಕನ್ಯಾ ಸಮೃದ್ಧಿ ಖಾತೆ, ಪಿಪಿಎಫ್ ಮತ್ತು ಆರ್ಡಿ ಖಾತೆಯಲ್ಲಿ ಆನ್ಲೈನ್ ಪಾವತಿ ಅಥವಾ ಫಂಡ್ ವರ್ಗಾವಣೆಗೆ ಸಹಕರಿಸುತ್ತದೆ. ಇದರಂತೆ ಇನ್ನೂ ಹಲವು ಸೌಲಭ್ಯಗಳನ್ನು ಶೀಘ್ರವಾಗಿ ಜಾರಿಗೆ ತರುವ ಯೋಚನೆಯನ್ನು ಕೇಂದ್ರ ಸರ್ಕಾರ ತಿಳಿಸಿದೆ.