ಭಾರತ -ಪಾಕ್ ಸೈನೆ ಎಷ್ಟು ಬಲಿಷ್ಠವಾಗಿವೆ ಗೊತ್ತ? ಭಾರತ ಹೊಂದಿರುವ ಯುದ್ದದ ಬತ್ತಳಿಕೆಯ ಮುಂದೆ ಪಾಕ್ ಕೂದಲ ಸಮವಂತೆ..

0
850

ಭಾರತ ಮತ್ತು ಪಾಕ್ ನಡುವೆ ಯುದ್ದ ನಡೆಯುವ ಸಂಭವ ಬಹುತೇಕವಾಗಿದ್ದು, ಈಗಾಗಲೇ ಪಾಕ್-ಗೆ ನಡುಕ ಹುಟ್ಟಿಸಿದೆ ಏಕೆಂದರೆ ಭಾರತದ ಸೈನೆ ಎಲ್ಲದರಲ್ಲೂ ಬಲಿಷ್ಟವಾಗಿದ್ದು ಪಾಕ್ ಇದರ ಮುಂದೆ ಒಂದು ಕೂದಲು ಇದ್ದ ಹಾಗೆ ಅಷ್ಟೊಂದು ಬಲಿಷ್ಟವಾದ ಭಾರತದ ಸೈನೆ ಈಗ ಪ್ರಪಚದಲ್ಲಿ 4 ನೇ ಬಲಿಷ್ಠ ರಾಷ್ಟ್ರವಾಗಿದೆ ಪಾಕಿಸ್ತಾನ 17 ನೇ ಸ್ಥಾನದಲ್ಲಿದೆ. ಆದರು ಕೂಡ ಪಾಕ್ ತನ್ನ ನೀಚ ಕೆಲಸವನ್ನು ಬಿಡದೇ ಭಾತರದ ಒದೆಯನ್ನು ತಿನ್ನಲು ಸಿದ್ದವಾಗುತ್ತಿದೆ. ಆದರೆ ಪಾಕಿಸ್ತಾನದ ಜನತೆ ಭಾರತದ ಶಕ್ತಿನೋಡಿ ಈಗಾಗಲೇ ವಲಸೆ ಹೋಗುತ್ತಿದ್ದಾರೆ. ಹಾಗಾದ್ರೆ ಭಾರತ ಮತ್ತು ಪಾಕ್ ನಡುವೆ ಇರುವ ಸಾಮರ್ಥ್ಯ ಏನು ಅಂತ ಇಲ್ಲಿದೆ ನೋಡಿ.

Also read: ಹೇಡಿ ಪಾಕ್ ಬಂಧಿಸಿರುವ ಅಭಿನಂದನ್ ಅವರನ್ನು ಭಾರತಕ್ಕೆ ಕಳುಹಿಸಿ ಎಂಬ ಕೂಗು ಪಾಕ್-ನಲ್ಲೆ ವ್ಯಾಪಕವಾಗಿ ಕೇಳಿ ಬರುತ್ತಿದೆ..

ಎರಡು ದೇಶಗಳ ನಡುವೆ ಯುದ್ದದ ಬಿಸಿ ಏರುತ್ತಿದಂತೆ ಎರಡೂ ದೇಶಗಳ ಭೂಸೇನೆ, ವಾಯುಪಡೆ ಮತ್ತು ನೌಕಾಪಡೆಯ ಸಂಖ್ಯಾಪಡೆಯ ಸಂಖ್ಯಾಬಲ ಮತ್ತು ಸಾಮರ್ಥ್ಯದ ಬಗ್ಗೆ ಕುತೂಹಲ ವ್ಯಕ್ತವಾಗುತ್ತಿದೆ. ಜಾಗತಿಕ ಸುದ್ದಿಗಳನ್ನು ಪ್ರಕಟಿಸುವ ಅಲ್ ಜಜೀರಾ ಜಾಲತಾಣ ರಕ್ಷಣಾ ವಿದ್ಯಮಾನಗಳ ಮಾಹಿತಿ ನೀಡುವ ಗ್ಲೋಬಲ್ ಫೈರ್ ಪವರ್ (Global Fire power) ಬ್ರಿಟನ್ international institute for strategic studies-IISS. ಸ್ವೀಡನ್ stockholm international peace Research Institute- SIPRI ಮತ್ತು ಅಮೆರಿಕದ center for strategic and international Studies- CSIS ಜಾಲತಾಣಗಳಲ್ಲಿ ಲಭ್ಯವಿರುವ ಮಾಹಿತಿ ಆಧರಿಸಿ ಎರಡೂ ದೇಶಗಳ ಸೇನಾಬಲಗಳ ಮಾಹಿತಿಯನ್ನು ತಿಳಿಸಲಾಗಿದೆ.

ಸುಮಾರು 57 ಅಂಶಗಳನ್ನು ಪರಿಗಣಿಸಿ ವಿವಿಧ ದೇಶಗಳಿಗೆ ರಕ್ಷಣಾ ಸಾಮರ್ಥ್ಯದ ಸ್ಥಾನ ನೀಡುವ ಗ್ಲೋಬಲ್ ಪೈರ್ ಪವರ್ ಜಾಲತಾಣದಲ್ಲಿ ಭಾರತಕ್ಕೆ ಸೈನಿಕ ಸಾಮರ್ಥ್ಯದಲ್ಲಿ 4ನೇ ಸ್ಥಾನ ಸಿಕ್ಕಿದ. ಪಾಕಿಸ್ತಾನವು 17 ನೇ ಸ್ಥಾನದಲ್ಲಿದೆ.

ರಕ್ಷಣಾ ಬಜೆಟ್

2018 ರಲ್ಲಿ ಭಾರತ ಸರ್ಕಾರವು ರೂ. 4 ಲಕ್ಷ ಕೋಟಿ ರಕ್ಷಣಾ ಇಲಾಖೆಗೆ ನೀಡಿತ್ತು. ಇದು ಭಾರತದ ಜೆಡಿಪಿಯ ಶೇ 2. 1 ರಷ್ಟು ಮೊತ್ತ. ಈ ಅಂಕಿಅಂಶಗಳನ್ನು ಬ್ರಿಟನ್’ ಇಂಟರ್ ನ್ಯಾಷನಲ್ ಇನ್ಸ್ಟಿಟ್ಯೂಟ್ ಪುಷ್ಟಿಕರಿಸಿದೆ. ಸ್ವೀಡನ್ ಸ್ಟಾಕ್ ಹೋಂ ವರದಿಯ ಪ್ರಕಾರ 1993 ರಿಂದ 2006 ನಡುವೆ ಪಾಕಿಸ್ತಾನ ಸರ್ಕಾರವು ತನ್ನ ಒಟ್ಟು ಖರ್ಚಿನಲ್ಲಿ ಶೇ 20 ಕ್ಕೂ ಹೆಚ್ಚು ಮೊತ್ತವನ್ನು ಮಿಲಿಟರಿಗಾಗಿ ವಿನಿಯೋಗಿಸಿದೆ. 2018 ರಲ್ಲಿ ಪಾಕಿಸ್ತಾನವು ರಕ್ಷಣಾ ವೆಚ್ಚಕ್ಕಾಗಿ 10 ಕೋಟಿ ಅಮೆರಿಕನ್ ಡಾಲರ್ ನಷ್ಟು ಮೊತ್ತವನ್ನು ವಿದೇಶಗಳಿಂದ ಸಹಾಯಧನದ ರೂಪದಲ್ಲಿ ಪಡೆದುಕೊಂಡಿದೆ.

ಸೈನಿಕ ಸಂಖ್ಯಾಬಲ;

ಭಾರತದ ಒಟ್ಟು ಸೈನಿಕ ಬಲ 14 ಲಕ್ಷ. ಮೀಸಲು ಸೈನಿಕರು 28 ಲಕ್ಷ, ಮಿಲಿಟರಿ ಸೇವೆಗೆ ಸೇರಲು ಅರ್ಹತೆ ಇರುವ ವಯೋಮಿತಿಯಲ್ಲಿರುವವ ಸಂಖ್ಯೆ 48 ಕೋಟಿ. ಪಾಕಿಸ್ತಾನದ ಒಟ್ಟು ಸೈನಿಕ ಬಲ 6. 5 ಲಕ್ಷ ಮೀಸಲು ಸೈನಿಕ ಬಲ 2.82 ಲಕ್ಷ. ಮಿಲಿಟರಿ ಸೇವೆಗೆ ಅರ್ಹರಿರುವವರ ಸಂಖ್ಯೆ 7. 5 ಕೋಟಿ.

ಶಸ್ತ್ರಾಸ್ತ್ರಗಳ ಬಲ:

ಎರಡೂ ದೇಶಗಳ ಬಳಿ ಅಣ್ವಸ್ತ್ರ ಸಿಡಿತಲೆಗಳನ್ನು ಹೊತ್ತೊಯ್ಯಬಲ್ಲ ಖಂಡಾಂತರ ಕ್ಷಿಪಣಿಗಳಿವೆ. 3 ರಿಂದ 5 ಸಾವಿರ ಕಿ.ಮೀ ದೂರದ ಗುರಿಗಳನ್ನು ತಲುಪಬಲ್ಲ ಅಗ್ನಿ- 3 ಸೇರಿದಂತೆ ಭಾರತದ ಬಳಿ ವಿವಿಧ ಕಾರ್ಯಚರಣೆಗೆ ಸಿದ್ದವಿರುವ 9 ಕ್ಷಿಪಣಿಗಳಿವೆ ಎಂದು ವಾಷಿಂಗ್ಟನ್ ನಲ್ಲಿರುವ ಸೆಂಟರ್ ಫಾರ್ ಸ್ಟ್ರಾಟಜಿಕ್ ತಿಳಿಸಿದೆ. ಪಾಕಿಸ್ತಾನ ಇಡೀ ಭೂಪ್ರದೇಶ ಭಾರತದ ಕ್ಷಿಪಣಿಗಳ ಗುರಿಗೆ ನಿಲುಕಬಲ್ಲದು.

ಚೀನಾದ ನೆರವಿನೊಂದಿಗೆ ಪಾಕಿಸ್ತಾನವು ಕ್ಷಿಪಣಿಗಳನ್ನು ಅಭಿವೃದ್ದಿಪಡಿಸಿಕೊಂಡಿದೆ. 3000 ಕಿ.ಮೀ ದಾಟುವ ಸಾಮರ್ಥ್ಯ ಕ್ಷಿಪಣಿಗಳು ಪಾಕ್ ಬಳಿ ಇಲ್ಲವಾದರೂ 2000 ಕಿ.ಮೀ ಅಂತರಕ್ಕೆ ಗುರಿಯಿಡುವ ಶಾಹೀನ್- 2 ಪಾಕ್ ಬತ್ತಳಿಕೆಯಲ್ಲಿದೆ. ಆದರೆ ದಕ್ಷಿಣ ಪ್ರದೇಶದ ಕೆಲವು ಪ್ರದೇಶಗಳ ಬಿಟ್ಟರೆ ಭಾರತದ ಎಲ್ಲ ಕಡೆಗಳಲ್ಲಿ ಕ್ಷಿಪಣಿ ತಲುಪಬಲ್ಲದು.

ಭೂಸೇನೆ ಬಲ:

Also read: ಭಾರತ-ಪಾಕ್ ಯುದ್ಧ ಫಿಕ್ಸ್..! ಜಮ್ಮುಕಾಶ್ಮೀರ ಸೇರಿದಂತೆ ಎಲ್ಲೆಡೆ ಹೈ ಅಲರ್ಟ್ ಘೋಷಣೆ; ರಜೆಯ ಮೇಲೆ ತೆರಳಿದ ಸೈನಿಕರಿಗೆ ತಕ್ಷಣವೇ ಕರ್ತವ್ಯಕ್ಕೆ ಹಾಜರಾಗಲು ಸೂಚನೆ..

13,888 ಕಿ.ಮೀ ಗಡಿಯನ್ನು ಭಾರತ ಹೊಂದಿದೆ. ಭೂಸೇನೆಯಲ್ಲಿ ಸಕ್ರಿಯರಾಗಿರುವ ಒಟ್ಟು ಸಿಬ್ಬಂದಿ 12 ಲಕ್ಷ. 3565 ಯುದ್ದ ಟ್ಯಾಂಕರ್ ಗಳು. 3,436 ಯುದ್ದ ವಾಹನಗಳು, 190 ಅತ್ಯಾಧುನಿಕ ಸ್ವಯಂ ಚಾಲಿತ ಫಿರಂಗಿಗಳು, 4158 ಸಾಧಾರಣ ಫಿರಂಗಿಗಳು ಮತ್ತು 266 ರಾಕೆಟ್ ಪ್ರೊಜೆಕ್ಟರ್ ಗಳು ಇವೆ.

ಪಾಕಿಸ್ತಾನ ಗಡಿ ಉದ್ದ 7,257 ಕಿ.ಮೀ. ಭಾರತಕ್ಕೆ ಹೋಲಿಸಿದ ಪಾಕಿಸ್ತಾನದ ಭೂಸೇನೆಯ ಬಲ ಸಣ್ಣದು 5.60 ಲಕ್ಷ ಸಿಬ್ಬಂದಿ, 2182 ಯುದ್ದ ಟ್ಯಾಂಕರ್ ಗಳು 2,604 ಯುದ್ದ ವಾಹನಗಳು, 375 ಅತ್ಯಾಧುನಿಕ ಸ್ವಯಂ ಚಾಲಿತ ಫಿರಂಗಿಗಳು. 1,240 ಸಾಧಾರಣ ಫಿರಂಗಿಗಳು ಮತ್ತು 144 ರಾಕೆಟ್ ಇವೆ.

ವಾಯುಪಡೆ ಬಲ:

1, 27 ಲಕ್ಷ ಸಿಬ್ಬಂದಿ, 814 ದಾಳಿ ಯುದ್ದ ವಿಮಾನಗಳು ಭಾರತೀಯ ವಾಯುಪಡೆಯ ಬೆನ್ನೆಲುಬು. ಇದರೊಂದಿಗೆ 590 ಪೈಟರ್ ಜೆಟ್ ಗಳು, 708 ಸಾಗಣಿ ವಿಮಾನಗಳು, 15 ದಾಳಿ ಹೆಲಿಕಾಪ್ಟರ್ ಗಳು ಸೇರಿ 720 ಹೆಲಿಕಾಪ್ಟರ್-ಗಳು ಇವೆ 70 ಸಾವಿರ ಸಿಬ್ಬಂದಿ ಇರುವ ಪಾಕ್ ವಾಯುಪಡೆ ಬಳಿ 410 ದಾಳಿ ಯುದ್ದ ವಿಮಾನಗಳು, 320 ಫ್ಯೇಟರ್ ಜೆಟ್ -ಗಳು ಇವೆ. 296 ಸಾಗಣಿ ವಿಮಾನಗಳು, 49 ದಾಳಿಯ ಹೆಲಿಕಾಪ್ಟರ್-ಗಳು ಸೇರಿ ಒಟ್ಟು 328 ಹೆಲಿಕಾಪ್ಟರ್-ಗಳು ಇವೆ ಚೀನಾ ಅಭಿವೃದ್ದಿಪಡಿಸಿದ F- 7 ಪಿಜಿ ಮತ್ತು ಅಮೆರಿಕದಿಂದ ಖರೀದಿಸಿರುವ F- 16 ಫಾಲ್ಕನ್ ಫೈಟಿಂಗ್ ಜೆಟ್ ಗಳನ್ನು ಪಾಕ್ ವಾಯುಪಡೆ ನೆಚ್ಚಿಕೊಂಡಿದೆ.

ನೌಕಾಪಡೆ ಬಲ:

ಭಾರತವು ಈಗ 7517 ಕಿ.ಮೀ, ಸಾಗರ ತೀರ ಹೊಂದಿರುವ ಭಾರತ ಬಲಿಷ್ಠ ನೌಕಾಪಡೆ ಹೊಂದಿದೆ. ವಿಮಾನ ವಾಹಕ ಯುದ್ದನೌಕೆ’ ವಿಕ್ರಮಾದಿತ್ಯ ಬಳಸಿಕೊಂಡು ಪಾಕಿಸ್ತಾನ ಯಾವುದೇ ಬಂದರಿಗೆ ವಾಣಿಜ್ಯ, ಯುದ್ದ ನೌಕೆಗಳ ಸಾಗಾಟವನ್ನು ನಿರ್ಬಂಧಿಸಬಹುದು. ವಿಮಾನ ವಾಹಕ ನೌಕೆಗಳು ಯುದ್ದ ವಿಮಾನಗಳು ಕ್ರಮಿಸುವ ಅಂತರ ಮತ್ತು ಹಾರಾಟದ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. 67, 700 ಸಿಬ್ಬಂದಿ ಇರುವ ಭಾರತೀಯ ನೌಕಾಪಡೆಯಲ್ಲಿ 16 ಸಬ್ ಮರೀನ್- ಗಳು, 22 ಕರ್ವೆಟ್, 139 ಗಸ್ತು ನೌಕೆಗಳು ಇವೆ. ಇದೆಲ್ಲವನ್ನು ತಿಳಿದರು ಸುಮ್ಮನಿರದ ಪಾಕ್ ಅಳುವಿನ ಅಂಚಿನಲ್ಲಿದೆ.

Also read: 300 ರಕ್ಕೂ ಹೆಚ್ಚು ಉಗ್ರರನ್ನು ನಾಶ ಮಾಡಲು ಏರ್ ಸರ್ಜಿಕಲ್ ಸ್ಟ್ರೈಕ್ ದಾಳಿಯ ಪ್ಲಾನ್ ಹೀಗಿತ್ತು ಗೊತ್ತಾ?