ಭಾರತೀಯ ಸೇನೆ ಸಿಪಾಯಿ ಫಾರ್ಮಾ ವಿಭಾಗದಲ್ಲಿನ ಸೈನಿಕ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ..

0
359

ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಸುವರ್ಣಾವಕಾಶ. ಭಾರತೀಯ ಸೇನೆ ಸಿಪಾಯಿ ಫಾರ್ಮಾ ವಿಭಾಗದಲ್ಲಿನ ಸೈನಿಕ ಹುದ್ದೆಗಳ ನೇಮಕಾತಿ ಮಾಡಲು ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ ರ‍್ಯಾಲಿ ನಡೆಸಲಿದೆ. ಫಾರ್ಮಾಕ್ಯುಟಿಕಲ್‌ ವಿಷಯದಲ್ಲಿ ಡಿಪ್ಲೊಮಾ ಅಥವಾ ಪದವಿ ಪಡೆದ ಅಭ್ಯರ್ಥಿಗಳು ಈ ರ್ಯಾಲಿಯಲ್ಲಿ ಪಾಲ್ಗೊಳ್ಳಬಹುದು. ಆಸಕ್ತ ಹಾಗೂ ಅಭ್ಯರ್ಥಿಗಳು ಸೆಪ್ಟೆಂಬರ್‌ 22, 2019 ಆನ್‌ಲೈನ್‌ ಮೂಲಕ ಹೆಸರು ನೊಂದಣಿ ಮಾಡಬೇಕು.

Also read: ಸಿದ್ಧಸಿರಿ ಸೌಹಾರ್ದ ಸಹಕಾರಿ ನಿಯಮಿತ ಬ್ಯಾಂಕ್ ಹಲವು ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ..

ಹುದ್ದೆಗೆ ಸಂಬಂಧಪಟ್ಟ ಮಾಹಿತಿ: ಶೈಕ್ಷಣಿಕ ವಿದ್ಯಾರ್ಹತೆ: ಪಿಯುಸಿ ವಿದ್ಯಾರ್ಹತೆಯೊಂದಿಗೆ ರಾಜ್ಯ ಫಾರ್ಮಾಕ್ಯುಟಿಕಲ್‌ ಕೌನ್ಸಿಲ್‌/ಭಾರತೀಯ ಫಾರ್ಮಸಿ ಕೌನ್ಸಿಲ್‌ನಲ್ಲಿ ನೋಂದಣಿಯಾದ ಸಂಸ್ಥೆಯಿಂದ ಕನಿಷ್ಠ 55% ರಷ್ಟು ಅಂಕದೊಂದಿಗೆ ಡಿ ಫಾರ್ಮಾವಿದ್ಯಾರ್ಹತೆಯುಳ್ಳ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಶೇಕಡ 50%ರಷ್ಟು ಅಂಕದೊಂದಿಗೆ ಬಿ ಫಾರ್ಮಾ ಪೂರ್ಣಗೊಳಿಸಿರುವ ಅಭ್ಯರ್ಥಿಗಳೂ ಕೂಡ ಅರ್ಜಿಯನ್ನು ಸಲ್ಲಿಸಬಹುದು.

ವಯೋಮಿತಿ: ಕನಿಷ್ಠ 19 ರಿಂದ ಗರಿಷ್ಠ 25 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ರ್ಯಾಲಿಯಲ್ಲಿ ಪಾಲ್ಗೊಳ್ಳಬಹುದು. ಅಂದರೆ, ಅಕ್ಟೋಬರ್‌ 1, 1994ರಿಂದ ಸೆಪ್ಟೆಂಬರ್‌ 30, 2000ರ ನಡುವೆ ಜನಿಸಿದ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ದೈಹಿಕ ಅರ್ಹತೆ: ಅಭ್ಯರ್ಥಿಯು ಕನಿಷ್ಠ ಎತ್ತರ 166 ಸೆಂ.ಮೀ., ತೂಕ 50 ಕೆ.ಜಿ ಮತ್ತು ಎದೆಯ ಸುತ್ತಳತೆ 77 ಸೆಂ.ಮಿ. (5 ಸೆಂ.ಮೀ. ವಿಸ್ತರಣೆ ಸಾಮರ್ಥ್ಯ‌) ಇರಬೇಕು.

ದೈಹಿಕ ಅರ್ಹತೆ: ಅಭ್ಯರ್ಥಿಯು ಕನಿಷ್ಠ ಎತ್ತರ 166 ಸೆಂ.ಮೀ., ತೂಕ 50 ಕೆ.ಜಿ ಮತ್ತು ಎದೆಯ ಸುತ್ತಳತೆ 77 ಸೆಂ.ಮಿ. (5 ಸೆಂ.ಮೀ. ವಿಸ್ತರಣೆ ಸಾಮರ್ಥ್ಯ‌) ಇರಬೇಕು.

ಆಯ್ಕೆ ಪ್ರಕ್ರಿಯೆ: ರ‍್ಯಾಲಿಯಲ್ಲಿ ಫಿಸಿಕಲ್‌ ಫಿಟ್ನೆಸ್‌ ಟೆಸ್ಟ್‌, ಫಿಸಿಕಲ್‌ ಮೆಷರ್‌ಮೆಂಟ್‌ ಟೆಸ್ಟ್‌ ಮತ್ತು ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಬಳಿಕ ನಿಗದಿಪಡಿಸಿದ ಸ್ಥಳ,ದಿನಾಂಕದಂದು ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸಲಾಗುತ್ತದೆ. ಅಭ್ಯರ್ಥಿಯು ಎಂದು ರ್ಯಾಲಿಯಲ್ಲಿ ಭಾಗವಹಿಸಬೇಕು ಎಂಬ ಮಾಹಿತಿಯನ್ನು ಪ್ರವೇಶ ಪತ್ರದಲ್ಲಿ ನೀಡಲಾಗಿರುತ್ತದೆ.

ರ್ಯಾಲಿಯಲ್ಲಿ ಭಾಗವಹಿಸುವುದು ಹೇಗೆ?:

ಸೆಪ್ಟೆಂಬರ್‌ 29 ರಿಂದ ಅಕ್ಟೋಬರ್ 4ರ ವರೆಗೆ ನಡೆಯುವ ಈ ರ್ಯಾಲಿಯಲ್ಲಿ ಭಾಗವಹಿಸಲಿಚ್ಛಿಸುವ ಪುರುಷ ಅಭ್ಯರ್ಥಿಗಳು ಮೊದಲಿಗೆ ಆನ್‌ಲೈನ್‌ನಲ್ಲಿ ತಮ್ಮ ಹೆಸರು ನೋಂದಣಿ ಮಾಡಿಕೊಳ್ಳಬೇಕಿರುತ್ತದೆ. ನೋಂದಣಿ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ಅಭ್ಯರ್ಥಿಗಳು ಸೆಪ್ಟೆಂಬರ್‌ 22ರೊಳಗೆ ನೊಂದಣಿ ಮಾಡಿಕೊಳ್ಳಬಹುದು. ಈ ರೀತಿ ಹೆಸರು ನೋಂದಾಯಿಸಿದ ಅಭ್ಯರ್ಥಿಗಳ ಇಮೇಲ್‌ಗೆ ರ‍್ಯಾಲಿಯಲ್ಲಿ ಭಾಗವಹಿಸಲು ಪ್ರವೇಶ ಪತ್ರವನ್ನು ಸೆಪ್ಟೆಂಬರ್‌ 23ರ ನಂತರ ಕಳುಹಿಸಿಕೊಡಲಾಗುತ್ತದೆ.

ರ್ಯಾಲಿ ನಡೆಯುವ ದಿನಾಂಕ: ಸೆಪ್ಟೆಂಬರ್‌ 29ರಿಂದ ಅಕ್ಟೋಬರ್‌ 04, 2019,

ರ್ಯಾಲಿ ನಡೆಯುವ ಸ್ಥಳ: ಜಿಲ್ಲಾ ಕ್ರೀಡಾಂಗಣ, ಮೆನ್ಸ್‌ ಕಾಂಪೌಂಡ್‌, ಮಡಿಕೇರಿ.

ಹೆಚ್ಚಿನ ಮಾಹಿತಿಗಾಗಿ: http://www.joinindianarmy.nic.in ಕ್ಲಿಕ್ ಮಾಡಿ.