ಭಾರತದ ಪೂರ್ವಜರ ವಿವಾಹ ಪದ್ದತಿಯ ಹಿಂದೆ ಇರುವ ವೈಜ್ಞಾನಿಕ ಅರ್ಥ ಗೊತ್ತಾದ್ರೆ, ಹೆಮ್ಮೆ ಆಶ್ಚರ್ಯ ಎರಡೂ ಆಗುತ್ತೆ!!

0
2815

ನಮ್ಮ ಪ್ರಾಚೀನ ಕಾವ್ಯಗಳಲ್ಲಿ ವಿವಾಹಕ್ಕೆ ಸಂವಾದಿಯಾಗಿ ಪಾಣಿಗ್ರಹಣ ಅಥವಾ ಪಾಣಿಪೀಡನ ಎನ್ನುವ ಶಬ್ದಗಳು ಬಳಕೆಯಲ್ಲಿವೆ. `ಗ್ರಹಣ’ ಅಂದರೆ ಹಿಡಿಯುವುದು. `ಪೀಡನ’ ಅಂದರೆ ಗಟ್ಟಿಯಾಗಿ ಅದುಮುವುದು ಅಥವಾ ಹಿಡಿಯುವುದು ಎಂದು ಅರ್ಥ. ಆದಕಾರಣ ಈ ವಿಧಿಗೆ ಪಾಣಿಗ್ರಹಣ (ಕೈಯನ್ನು ಹಿಡಿಯುವುದು) ಅಥವಾ ಪಾಣಿಪಾಣೌಕರಣ’(ಕೈಯಲ್ಲಿ ಕೈ ಇರಿಸುವುದು) ಮೊದಲಾದ ಹೆಸರುಗಳಿವೆ. ವಿವಾಹಕ್ಕೆ `ಕಲ್ಯಾಣ’ ಎನ್ನುತ್ತಾರೆ. ವಧು-ವರರು ಹಾಗೂ ಸಮಾಜಕ್ಕೆ ಒಳ್ಳೆಯದನ್ನುಂಟು ಮಾಡುವ ವಿಧಿ ಎಂಬ ಅರ್ಥದಲ್ಲಿ ಕಲ್ಯಾಣ ಶಬ್ದ ಪ್ರಯೋಗವಿದೆ.

`ಪತ್ನಿಯಿಂದ ಪತಿಯು, ಪತಿಯಿಂದ ಪತ್ನಿಯು ಸಂತುಷ್ಟವಾಗುವ ವಂಶದಲ್ಲಿ ಯಾವಾಗಲೂ ಕಲ್ಯಾಣ ಉಂಟಾಗುತ್ತದೆ’ (ಸಂತುಷ್ಟೋ..ಕಲ್ಯಾಣಂ ತತ್ರ ವೈಧ್ರುವಂ| ಮನು) ಮೊದಲಾದ ಅಭಿಪ್ರಾಯಗಳಲ್ಲಿ ಮದುವೆ ಮತ್ತು ಕಲ್ಯಾಣ ಶಬ್ದಗಳ ನಡುವಿನ ಸಂಬಂಧವು ಸ್ಪಷ್ಟವಾಗಿದೆ. ಸಾಮಾನ್ಯವಾಗಿ 21-24ನೆ ವಯಸ್ಸಿಗೆ ಬ್ರಹ್ಮಚಾರಿಯು ಗೃಹಸ್ಥಾಶ್ರಮಕ್ಕೆ ಬರಬೇಕಾಗಿತ್ತು. ಅದು ವಿವಾಹ ಯೋಗ್ಯವಾದ ತುಂಬು ತಾರುಣ್ಯದ ವಯೋಮಾನ.

ಹಿಂದಿನ ಕಾಲದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಂತಾನ ಇರುತ್ತಿತ್ತು. ಹೆಣ್ಣು `ಪುಷ್ಪವತಿ’ ಆಗುವುದೇ ವಿವಾಹಯೋಗ್ಯ ವಯಸ್ಸೆಂದು ಪರಿಗಣಿಸಲಾಗಿತ್ತು. ಪ್ರಾಚೀನ ಕಾಲದಲ್ಲಿ ಬಾಲ್ಯ ವಿವಾಹ ಪದ್ಧತಿ ಅಸ್ತಿತ್ವದಲ್ಲಿತ್ತು. ಎಳೆಯ ವಯಸ್ಸಿಗೆ ಮದುವೆ ಮಾಡುತ್ತಿದ್ದರು. ಮೈನೆರೆದ ಕನ್ಯೆಯನ್ನು ಕಣ್ಣು ಕಟ್ಟಿ ಕಾಡಿಗೆ ಬಿಡುತ್ತಿದ್ದರು ಎನ್ನುವ ಅಭಿಪ್ರಾಯವೂ ಇದೆ. ಪ್ರಾಚೀನ ಪುರಾಣ ಕಾವ್ಯಗಳಲ್ಲಿ ಇಂತಹ ಯಾವ ಸೂಚನೆಯೂ ಇಲ್ಲ.

ರುಕ್ಮಿಣಿ, ದ್ರೌಪದಿ, ದಮಯಂತಿ, ಕುಂತಿ ಮೊದಲಾದವರ ಉದಾಹರಣೆಗಳನ್ನು ನೋಡಿದರೆ ಅಂದಿನ ಯುವತಿಯರೂ ದೈಹಿಕ-ಮಾನಸಿಕವಾಗಿ ಬೆಳೆದ ನಂತರವೇ ವಿವಾಹವಾಗುತ್ತಿದ್ದರೆಂಬುದು ಸ್ಪಷ್ಟವಾಗುತ್ತದೆ. ವರನ ವಯಸ್ಸಿನ ಮೂರನೆಯ ಎರಡರಷ್ಟು ವಯಸ್ಸು ವಧುವಿಗೆ ಆಗಿರಬೇಕೆಂದು 3:2ರ ಅನುಪಾತವನ್ನು ಸೂಚಿಸಲಾಗಿದೆ. ಇದನ್ನೇ ಹನ್ನೆರಡು ವರ್ಷದ ಬಾಲಕನಿಗೆ ಎಂಟು ವರ್ಷದ ಕನ್ಯೆ ಎಂದು ವಿವರಿಸಿ ಬಾಲ್ಯ ವಿವಾಹಕ್ಕೆ ಒತ್ತು ಕೊಟ್ಟಿದ್ದಾರೆ. ಎಂಟನೆ ವರ್ಷದಲ್ಲಿ ಗುರುಕುಲಕ್ಕೆ ಹೋಗಿ ಅಲ್ಲಿ ಹನ್ನೆರಡು ವರ್ಷ ವಿದ್ಯಾಭ್ಯಾಸ ಮಾಡಿ, ಕೆಲ ವರ್ಷ ಲೋಕ ಯಾತ್ರೆ ಕೈಕೊಂಡು ವಿವಿಧ ವಿದ್ವಾಂಸರ ಸನ್ನಿಧಾನದಲ್ಲಿ ಕಾಲ ಕಳೆದು ಪರಿಪಕ್ವನಾದ ನಂತರ ಮದುವೆಯಾಗುತ್ತಿದ್ದನು.

ಹೀಗೆ 24 ವರ್ಷದ ವರನಿಗೆ 3:2 ರ ಅನುಪಾತದಲ್ಲಿ 16 ವರ್ಷದ ವಧು ಅರ್ಹಳಾಗುತ್ತಿದ್ದಳು. ಆದ್ದರಿಂದಲೇ ಶುೃತಿ ಗ್ರಂಥಗಳು `ಷೋಡಶೀಂ ಕನ್ಯಾಂ ಉಪಹರೇತ್’ ಅಂದರೆ 16 ವರ್ಷದ ಕನ್ಯೆಯನ್ನು ವಿವಾಹ ಆಗಬೇಕೆಂದು ಅಭಿಪ್ರಾಯ ಪಟ್ಟಿವೆ.