ಅತೀಂದ್ರಿಯ ಶಕ್ತಿಯನ್ನು ಹೋಗಲಾಡಿಸುವ ಗೋಮಾತೆ!!!

0
3339

Kannada News | Health tips in kannada

ಇಂದಿಗೂ ಕೂಡ ಹಳ್ಳಿಗಳಲ್ಲಿ ಸಂಜೆ ಆರು ಗಂಟೆಯ ನಂತರ ಕೆಲವು ಸ್ಥಳಗಳಿಗೆ ಹೋಗುವಾಗ ಹಿರಿಯರು ‘ಅಲ್ಲಿ ಹೋಗಬೇಡಿ, ಅದು ಒಳ್ಳೆಯ ಸ್ಥಳವಲ್ಲ’ ಎಂಬ ಎಚ್ಚರಿಕೆಯನ್ನು ನೀಡುತ್ತಾರೆ. ಒಳ್ಳೆಯ ಸ್ಥಳವಲ್ಲ ಎಂದರೆ ಅಲ್ಲಿ ಭೂತಪ್ರೇತಗಳಿವೆ, ಅದರಿಂದ ತೊಂದರೆಯಾಗಬಹುದು ಮನೆಯಲ್ಲಿ ಸುಖ ಹಾಗೂ ಸಮೃದ್ಧಿ ನೆಲೆಸಲೆಂದು ಅವರು ಮುನ್ನೆಚ್ಚರಿಕೆ ನೀಡುತ್ತಾರೆ. ಹಿರಿಯರು ಮಾಡಿರುವ ಅನೇಕ ಪದ್ದತಿಗಳನ್ನು ಈಗಲೂ ಪಾಲಿಸಿಕೊಂಡು ಬರಲಾಗುತ್ತಿದೆ. ಹಾಗೆ ಮಾಡಿದವರ ಮನೆಯಲ್ಲಿ ಈಗಲೂ ಆ ಪದ್ಧತಿಗಳು ಜಾರಿಯಲ್ಲಿವೆ. ಅಂತಹ ಮನೆಯಲ್ಲಿ ಸದಾ ಸುಖ- ಸಮೃದ್ಧಿ ನೆಲೆಸಿರುತ್ತದೆ. ಆ ಮನೆ ಸುತ್ತಮುತ್ತ ಯಾವುದೇ ಕೆಟ್ಟ ಶಕ್ತಿಗಳು ಸುಳಿಯುವುದಿಲ್ಲ ಎಂಬ ನಂಬಿಕೆ ಇದೆ.

ಇದು ನಿಜವೋ ಸುಳ್ಳೋ ಬೇರೆ ಪ್ರಶ್ನೆ, ಆದರೆ ಹಲವೆಡೆ ಜನರು ಅತೀಂದ್ರಿಯ ಶಕ್ತಿ (ಕೆಟ್ಟ ಶಕ್ತಿ), ಹಾಗೂ ಭೂತಗಳಿರುವಿಕೆಯನ್ನು ಗಮನಿಸಿದ್ದಾರೆ. ಇದಕ್ಕೆ ಸೂಕ್ತವಾದ ವಿವರಣೆ ಇದುವರೆಗೆ ಲಭ್ಯವಾಗಿಲ್ಲ.

ಅನಾದಿ ಕಾಲದಿಂದಲೂ ಮಾನವನಿಗೂ ಗೋವಿಗೂ ಅವಿನಾಭಾವ ಸಂಬಂಧ ಇದೆ. ತನ್ನ ಹಾಲಿನಿಂದ ಸಮಾಜವನ್ನು ಬಲಿಷ್ಠಗೊಳಿಸುವ, ಕೃಷಿಗಾಗಿ ತನ್ನ ಸೆಗಣಿಯಿಂದ ಗೊಬ್ಬರವನ್ನು ನೀಡುವ, ಕೃಷಿಗೆ ಉಪಯುಕ್ತವಾದ ಎತ್ತುಗಳಿಗೆ ಜನ್ಮ ನೀಡುವ ಗೋಮಾತೆಯನ್ನು ನಾವು ಪೂಜೆ ಮಾಡುತ್ತಿದ್ದೇವೆ. ಹಸುವನ್ನು ದೇವರೆಂದು ಪೂಜಿಸೋ ಭಾರತೀಯರಾದ ನಮ್ಮಲ್ಲಿ ಎಷ್ಟೋ ಜನಕ್ಕೆ ಇದರ ಮಾಹಿತಿ ಇಲ್ಲ.

ಗೋಮಯ, ಗೋಮೂತ್ರ, ಹಾಲು, ಮೊಸರು ಮತ್ತು ತುಪ್ಪ ಇವುಗಳನ್ನು ಪಂಚಗವ್ಯಗಳೆನ್ನುತ್ತೇವೆ. ಇವೆಲ್ಲವೂ ಆಕಳದ್ದಾಗಿರುತ್ತದೆ. ಇವುಗಳಲ್ಲಿ ಪ್ರತಿಯೊಂದಕ್ಕೂ ಅದರದೇ ಆದ ವಿಶೇಷ ಗುಣಗಳಿರುತ್ತವೆ. ಗೋವು ಉಸಿರಾಟ ಪ್ರಕ್ರಿಯೆಯಲ್ಲಿ ಆಮ್ಲಜನಕವನ್ನು ಒಳಗೆಳೆದುಕೊಂಡು ಆಮ್ಲಜನಕವನ್ನೇ ಹೊರಗೆ ಬಿಡುತ್ತದೆ !(ಮತ್ಯಾವ ಜೀವಸಂಕುಲದಲ್ಲೂ ಹೀಗಿಲ್ಲ). ಗೋವಿನ ಒಂದು ಚಮಚ ತುಪ್ಪವನ್ನು ಬೆಂಕಿಗೆ ಸುರಿದಾಗ ಸುಮಾರು ಒಂದು ಟನ್ನುಗಳಷ್ಟು ಆಮ್ಲಜನಕ ಬಿಡುಗಡೆಯಾಗುತ್ತೆ. ಗೋವಿಗೆ ವಿಷವನ್ನು ಸತತ 90 ದಿನಗಳವರೆವಿಗೂ ನೀಡುತ್ತಾ ಬಂದರೂ ಅದರ ಹಾಲಿನಲ್ಲಿ ವಿಷದ ಪ್ರಮಾಣ ಕಿಂಚಿತ್ತೂ ಇರುವುದಿಲ್ಲ. ಗೋ ಮೂತ್ರದಲ್ಲಿ 46 ರೀತಿಯ ಔಷಧಿಗಳನ್ನು ತಯಾರಿಸಲಾಗ್ತಾ ಇದೆ.

ಹಿಂದಿನಿಂದಲೂ ಮನೆಯಲ್ಲಿ ಯಾವ ಪೂಜೆ ಮಾಡಿದರೂ ಗೋ ಮೂತ್ರವನ್ನು ಮನೆಯ ಮೂಲೆ ಮೂಲೆಗೂ ಚಿಮುಕಿಸುವ ಸಂಪ್ರದಾಯವಿದ್ದ ಕಾರಣ ಅನೇಕ ವಾಸ್ತುದೋಷಗಳು ಪರಿಹಾರವಾಗಲು ಮತ್ತು ವಾಸ್ತುದೋಷ ನಿವಾರಣೆಗಾಗಿ ಗೋ ಮೂತ್ರವನ್ನು ಮನೆಯ ಮೂಲೆ ಮೂಲೆಗೂ ಚುಮುಕಿಸಲಾಗಿತ್ತದೆ. ಗೋ ಮೂತ್ರದ ವಾಸನೆಯಿಂದ ಅನೇಕ ಹಾನಿಕಾರಕ ಕೀಟಾಣುಗಳು ನಾಶವಾಗುತ್ತವೆ. ಇದರಿಂದ ಮನೆಯಲ್ಲಿರುವವರ ಆರೋಗ್ಯ ಸುಧಾರಿಸುತ್ತದೆ.

ನಿಯಮಿತ ರೂಪದಲ್ಲಿ ಯಾರ ಮನೆಯಲ್ಲಿ ಗೋ ಮೂತ್ರವನ್ನು ಸಿಂಪಡಿಸಲಾಗುತ್ತದೆಯೋ ಆ ಮನೆಯಲ್ಲಿ ಲಕ್ಷ್ಮಿ ಸದಾ ನೆಲೆಸಿರುತ್ತಾಳೆ. ಧನ- ಧಾನ್ಯದ ಕೊರತೆಯಾಗುವುದಿಲ್ಲ. ಪ್ರತಿದಿನ ಗೋಮೂತ್ರ ಸೇವನೆ ಮಾಡುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಶರೀರ ಆರೋಗ್ಯ ಹಾಗೂ ಶಕ್ತಿಯುತವಾಗಿರುತ್ತದೆ. ಗೋಮೂತ್ರದಲ್ಲಿ ಗಂಗೆ ನೆಲೆಸಿರ್ತಾಳೆ. ಗೋಮೂತ್ರ ಸೇವನೆಯಿಂದ ಎಲ್ಲ ಪಾಪಗಳು ತೊಳೆದು ಹೋಗ್ತವೆ. ಭೂತ- ಪ್ರೇತಗಳಿಂದ ಬಳಲುತ್ತಿರುವ ವ್ಯಕ್ತಿಗೆ ಗೋಮೂತ್ರ ಹಾಕಿದಲ್ಲಿ ಭೂತ ಆತನ ಶರೀರವನ್ನು ಬಿಟ್ಟು ಹೋಗುತ್ತವೆ.

Also Read: ಜೇವನದಲ್ಲಿ ಒಮ್ಮೆ ನೋಡಲೇಬೇಕಾದ ಪುಣ್ಯಕ್ಷೇತ್ರ ಬ್ರಾಹ್ಮಿ ದುರ್ಗಾಪರಮೇಶ್ವರಿ ಕಮಲಶಿಲೆ