ಚಿಕನ್ ಪ್ರಿಯರೇ ಹುಷಾರ್ ಆಂಟಿಬಯೋಟಿಕ್ ಕೊಟ್ಟು ಬೆಳೆಸುವ ಫಾರಂ ಕೋಳಿ ತಿನ್ನೋದ್ರಿಂದ ಭಯಾನಕ ರೋಗಗಳು ಬರುತ್ತಿವೆ ಅಂತ ಪತ್ತೆ ಹಚ್ಚಿದ ಮುಂಬೈ ಸಂಶೋಧಕರು!!

0
785

ಚಿಕನ್ ಮತ್ತು ಮೊಟ್ಟೆಯಿಲ್ಲದೆ ಒಂದುಹೊತ್ತು ಊಟ ಮಾಡದ ಜನರು ತುಂಬಾನೇ ಇದ್ದಾರೆ. ಆದರೆ ಹೆಚ್ಚೆಚು ಕೋಳಿಯ ಮಾಂಸ ಎಷ್ಟೊಂದು ವಿಷಪೂರಿತ ಎನ್ನುವುದು ಹಲವು ಸಂಶೋಧನೆಗಳು ತಿಳಿಸಿವೆ. ಆದರು ಅಮೃತ ಸಮಾನವೆಂದು ತಿನ್ನುವ ಕೋಳಿ ಮಾಂಸ ಕುರಿತು ಮುಂಬೈಯಲ್ಲಿ ಅಧ್ಯಯನಯೊಂದು ನಡೆದಿದ್ದು ಮಾಂಸ ಪ್ರಿಯರನ್ನು ಬೆಚ್ಚಿಬಿಳಿಸಿದೆ.

Also read: ಈ ದಿನನಿತ್ಯ ಬಳಸುವ ತರಕಾರಿ-ಹಣ್ಣುಗಳು ಆರೋಗ್ಯಕ್ಕೆ ಇಷ್ಟೊಂದು ಒಳ್ಳೇದಾಗುತ್ತೆ ಅಂತ ಇವತ್ತೇ ಗೊತ್ತಾಗಿದ್ದು!!

ಹೌದು ಮೇ 6 ರಂದು ಜರ್ನಲ್ ಆಕ್ಟಾ ಸೈಂಟಿಫಿಕ್ ಮೈಕ್ರೋಬಯಾಲಜಿಯಲ್ಲಿ ಅಧ್ಯಯನ ನಡೆದಿದ್ದು ಮುಂಬೈಯಲ್ಲಿ ಮಾರಾಟವಾಗುವ ಕೋಳಿ ಮತ್ತು ಮೊಟ್ಟೆಗಳು ಪ್ರತಿಜೀವಕ-ನಿರೋಧಕ (antibiotic-resistant) ಬ್ಯಾಕ್ಟೀರಿಯಾಗಳು ತುಂಬಿಕೊಂಡಿವೆ ಎಂದು ವರದಿ ಮಾಡಿದೆ. ಕೋಳಿ ಯಕೃತ್ತಿ (ಲಿವರ್) ಮತ್ತು ಮಾಂಸವನ್ನು ಸ್ಯಾಂಪಲ್ಸ್ ಟೆಸ್ಟಿಂಗ್ ಗೆ ಒಳಪಡಿಸಿದಾಗ ಅದರಲ್ಲಿ ಹಲವಾರು ವಿಷಕಾರಿ ಅಂಶಗಳು ಪತ್ತೆಯಾಗಿವೆ. ಇದರಲ್ಲಿ ಚಂಬುರ್, ಕುರ್ಲಾ, ಘಾಟ್ಕೋಪರ್, ಸಿಯಾನ್, ಮತುಂಗ, ಲೋವರ್ ಪ್ಯಾರೆಲ್, ಸ್ಯಾಂಟಕ್ರೂಜ್, ಬೋರಿವಲಿ, ವಸೈ, ಪನ್ವೆಲ್, ವಾಶಿ ಮತ್ತು ವಡಾಲಾದ ಸೇರಿದಂತೆ 24 ತಳಿಯ ಕೋಳಿ ಮಾಂಸವನ್ನು ಪರೀಕ್ಷಿಸಲಾಗಿದೆ. ಅದರಂತೆ ವಿವಿಧ ಔಷಧಿ, ಹಾರ್ಮೋನುಗಳು ಮತ್ತು ಆಂಟಿ ಬಯೋಟಿಕ್ ಗಳನ್ನು ನೀಡಿ ತಿನ್ನಿಸಿದ ಆಹಾರಕ್ಕೆ ತಕ್ಕ ಮಾಂಸ ಬಲವಂತವಾಗಿ ಬೆಳೆಯುವಂತೆ ಮಾಡಿ ಬಳಿಕ ಸಂಸ್ಕರಿಸಲಾಗಿರುತ್ತದೆ.
ವಾಸ್ತವವಾಗಿ ಈ ಕೋಳಿಗಳ ಮಾಂಸದಲ್ಲಿ ಹಲವಾರು ವಿಷಕಾರಿ ಅಂಶಗಳಿದ್ದು ಆರೋಗ್ಯಕ್ಕೆ ಮಾರಕವಾಗಿವೆ. ಏಕೆಂದರೆ ಮಾಂಸ ಬೆಳೆಯಲೆಂದು ತಿನ್ನಿಸಿದ್ದ ಹಾರ್ಮೋನುಗಳು ಕೋಳಿ ಮಾಂಸದಲ್ಲಿ ಮಿಳಿತಗೊಂಡು ತಿಂದ ವ್ಯಕ್ತಿಯ ಆರೋಗ್ಯದ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ. ಎಂದು ಸಂಶೋಧಕರು ತಿಳಿಸಿದ್ದಾರೆ. ಸಾಮಾನ್ಯವಾಗಿ, ಕನಿಷ್ಠ ಮೂರು ವರ್ಗಗಳ ಪ್ರತಿಜೀವಕ ಬ್ಯಾಕ್ಟೀರಿಯಾಗಳಿಗೆ ಔಷಧಿ ಇರುವುದಿಲ್ಲವೆಂದು ಹೇಳಿದ್ದಾರೆ. ಇಂತಹ ಮಾಂಸವನ್ನು ತಿಂದ ವ್ಯಕ್ತಿಗೆ ಏನಾದರು ಸೋಂಕು ತಗುಲಿದರೆ ವ್ಯಕ್ತಿಯನ್ನು ಬದುಕಿಸುವುದು ಕಷ್ಟವಾಗುತ್ತೆ ಎಂದು ಸಂಶೋಧಕ ವಿಕಾಸ್ ಝಾ, ಹೇಳಿದ್ದಾರೆ.

ಅದ್ಯಯನದ ಪ್ರಕಾರ;

ಕೋಳಿಯ ಎದೆಭಾಗದ ಮಾಂಸದ ಶೇ 97 ರಷ್ಟು ಪಾಲಿನಲ್ಲಿ ಸೋಂಕು ಹರಡಲು ಸಕ್ಷಮವಿರುವ ಬ್ಯಾಕ್ಟೀರಿಯಾಗಳನ್ನು ಹೊಂದಿದೆ. ಇದಕ್ಕೆ ಹಾರ್ಮೋನು ಮತ್ತು ಆಂಟಿಬಯೋಟಿಕ್ ಔಷಧಿಗಳು ನೇರವಾಗಿ ಕಾರಣವಲ್ಲದಿದ್ದರೂ ಮಾಂಸದಲ್ಲಿ ಬ್ಯಾಕ್ಟೀರಿಯಾಗಳಂತೂ ಕಂಡುಬಂದಿವೆ. ಈ ಬ್ಯಾಕ್ಟೀರಿಯಾಗಳು ಶೈತ್ಯೀಕರಿಸಿದ ಬಳಿಕವೂ ಜೀವಂತವಾಗಿದ್ದು ಬೇಯಿಸಿದ ಬಳಿಕವೂ ಹಾನಿ ಮಾಡಬಲ್ಲಷ್ಟು ಪ್ರಮಾಣದ ಬ್ಯಾಕ್ಟೀರಿಯಾಗಳು ಆಹಾರದ ಮೂಲಕ ಹೊಟ್ಟೆ ಸೇರುತ್ತದೆ. ಇಂತಹ ಬ್ಯಾಕ್ಟೀರಿಯಾಗಳನ್ನು 12 ಆಂಟಿಬಯೋಟಿಕ್ ನೀಡಿ ಬೇರ್ಪಡಿಸಿ ಪರೀಕ್ಷಿಸಿದಾಗ amoxicillin, ciprofloxacin, azithromycin, ceftriaxone, erythromycin, gentamicin, chloramphenicol, levofloxacin, tetracycline, ಸೋಂಕು ಮಾನವರಿಗೆ ಸೇರುತ್ತದೆ. ಎಂದು ತಿಳಿಸಿದೆ.

Also read: ವ್ಯದ್ಯರಿಂದ ವಾಸಿಯಾಗದ ಕ್ಯಾನ್ಸರ್-ಗೆ ಇಲ್ಲಿ ಸಿಗುತ್ತೆ ಔಷಧಿ; ಈ ಔಷಧಿಯಿಂದ ಲಕ್ಷಾಂತರ ಜನರ ಕೊನೆಯ ಹಂತದಲ್ಲಿರುವ ಕ್ಯಾನ್ಸರ್ ವಾಸಿಯಾಗಿದೆ..

2017 ರಲ್ಲಿ ಯು.ಎಸ್, ರಾಜಸ್ಥಾನ, ಪಂಜಾಬ್ ಮತ್ತು ಹರಿಯಾಣದ ಸುತ್ತಲಿನ ಕೋಳಿ ಸಾಕಣೆ ಕೇಂದ್ರಗಳಲ್ಲಿ E. ಕೊಲ್ಲಿ, ಕ್ಲೆಬ್ಸಿಯಾಲಾ ನ್ಯುಮೋನಿಯಾ ಮತ್ತು ಸ್ಟ್ಯಾಫಿಲೊಕೊಕಸ್ ಲೆಂಟಸ್ ಅಂತ ಬ್ಯಾಕ್ಟೀರಿಯಾದಲ್ಲಿ ಹೆಚ್ಚಿನ ಪ್ರಮಾಣದ ಬಹು-ಔಷಧಿ ನಿರೋಧಕತೆ ಕಂಡುಬಂದಿರುವ ಬಗ್ಗೆ ವಿಜ್ಞಾನ ಮತ್ತು ಪರಿಸರ ವರದಿ ಕೇಂದ್ರವು ಬಹಿರಂಗಪಡಿಸಿದೆ. ಅದರಲ್ಲಿ ಈ ಮೂರೂ ವಿಷಯುಕ್ತ ಬ್ಯಾಕ್ಟೀರಿಯಾಗಳು ಔಷಧಿ ನಿರೋಧಕವೆಂದು ಕಂಡುಬಂದಿವೆ. ಅದಕ್ಕಾಗಿ 2014 ರಲ್ಲಿ, ಯೂನಿಯನ್ ಕೃಷಿ ಸಚಿವಾಲಯ ಪ್ರಾಣಿಗಳಿಗೆ ಫೀಡ್ ಕೊಡಬಾರದು ಎಂದು ಹೇಳಿದೆ ಆದರು ಇದನ್ನು ನೀಡುತ್ತಿರುವುದು. ವಿಪರ್ಯಾಸವಾಗಿದೆ.

Also read: ಫಾರಂ ಕೋಳಿ ತಿಂದ್ರೆ ಸಾವು ಖಚಿತ…

AMR ಭಾರತದ ರಾಷ್ಟ್ರೀಯ ಕಾರ್ಯ ಯೋಜನೆ, ಮಾರಕವಾದ ಆಂಟಿಮೈಕ್ರೊಬಿಯಲ್ ಗಳನ್ನು ಸ್ಥಗಿತಗೊಳಿಸುವಂತೆ ಸಲಹೆ ನೀಡಿದೆ. ಇದರ ನಂತರ, ಆಹಾರ ಸುರಕ್ಷತಾ ಮತ್ತು ಮಾದರಿಗಳ ಪ್ರಾಧಿಕಾರವು ಪ್ರಾಣಿಗಳ ಆಹಾರದ ಮಾದರಿಗಳಲ್ಲಿ antibiotics ಗುಣಮಟ್ಟವನ್ನು ನಿಲ್ಲಿಸಲು ಸಲಹೆ ನೀಡಿದೆ. ಇಂತಹ ಮಾಂಸದ ಸೇವನೆಯಿಂದ ಕಿಡ್ನಿಗಳ ಮೇಲೆ ದುಷ್ಪರಿಣಾಮ ಬೀರುತ್ತದೆ. ಅಲ್ಲದೇ ವಿಶೇಷವಾಗಿ ಪುರುಷರಲ್ಲಿ ನಪುಂಸಕತೆಯನ್ನು ಉಂಟುಮಾಡುತ್ತದೆ ಎಂಬ ಮಾಹಿತಿ ಆಘಾತಕಾರಿಯಾಗಿದೆ. ದೇಹದಲ್ಲಿ ಕೊಬ್ಬು ಬೆಳೆಯಲೂ ಕಾರಣವಾಗುತ್ತದೆ. ಇದು ನೇರವಾಗಿ ಸ್ಥೂಲಕಾಯಕ್ಕೆ ಆಹ್ವಾನ ನೀಡುತ್ತದೆ. ಅಲ್ಲದೇ ಮಾಂಸದ ತುಂಡು ಸಾಕಷ್ಟು ದೊಡ್ಡದಿದ್ದರೆ ಅದರತ್ತ ಆಕರ್ಷಣೆಯೂ ಹೆಚ್ಚುವ ಕಾರಣ ಹೋಟೆಲುಗಳು ದೊಡ್ಡ ತುಂಡುಗಳನ್ನೇ ನೀಡುತ್ತವೆ. ಇದು ಪ್ರತ್ಯಕ್ಷವಾಗಿ ತೂಕದ ಹೆಚ್ಚಳಕ್ಕೆ ಕಾರಣವಾಗುತ್ತದೆ. ಎಂದು ಸಂಶೋಧನೆ ಹೇಳಿದೆ.