ಈ ತನಿಖಾ ವರದಿ ನೋಡಿದ್ರೆ ಶಾಕ್ ಆಗ್ತೀರ!! ಬಡವರಿಗೆಂದಿದ್ದ ಇಂದಿರಾ ಕ್ಯಾಂಟೀನ್-ನಲ್ಲಿ ನಡೆಯುತ್ತಿದ್ಯ ಭಾರಿ ಅವ್ಯವಹಾರ??

0
987

ಮುಖ್ಯಮಂತ್ರಿ ಸಿದ್ದರಾಮಯ್ಯ 2017-18ರಲ್ಲಿ ರಾಜ್ಯ ಬಜೆಟ್-ನಲ್ಲಿ ಸುಮಾರು 100 ಕೋಟಿ ರೂ. ವೆಚ್ಚದಲ್ಲಿ ನಗರದ 198 ವಾರ್ಡ್-ಗಳಲ್ಲಿ ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಪ್ರಾರಂಭಿಸಿದ ‘ಅಮ್ಮ ಉವಾವಗಂ’ ಕ್ಯಾಂಟೀನ್ ರೀತಿಯಲ್ಲಿ ರಾಜ್ಯದಲ್ಲಿ “ಇಂದಿರಾ ಕ್ಯಾಂಟೀನ್-ಗಳನ್ನು” ತೆರಯಲು ಹಣ ಒದಗಿಸಿದ್ದರು. 2017 ರಲ್ಲಿ, ಕರ್ನಾಟಕ ಸರ್ಕಾರವು ಬೆಂಗಳೂರಿನ ಎಲ್ಲಾ 198 ವಾರ್ಡ್-ಗಳಲ್ಲಿ ಕಡಿಮೆ ವೆಚ್ಚದ ಕ್ಯಾಂಟೀನ್-ಗಳನ್ನು ಪ್ರಾರಂಭಿಸಿತು. ಮಾಜಿ ಪ್ರಧಾನ ಮಂತ್ರಿ ಇಂದಿರಾ ಗಾಂಧಿಯವರ ಹೆಸರನ್ನು ಈ ಕ್ಯಾಂಟೀನ್ ಗೆ ಇಡಲಾಗಿದೆ ಮತ್ತು ನಗರವು ಹಸಿವು ರಹಿತವಾಗಿಸುವ ಮುಖ್ಯ ಗುರಿಯಿಂದ ಇದನ್ನು ತೆರೆಯಲಾಗಿತ್ತು. ಇದೆಲ್ಲಾ ಹಳೆ ವಿಷ್ಯ ಬಿಡಿ, ಆದರೆ ಈ ಕ್ಯಾಂಟೀನ್ಗಳಲ್ಲಿ ಅವ್ಯವಹಾರ ನಡೆಯುತ್ತಿದೆ ಎಂದು ಕೆಲ ನಾಗರೀಕ ಸಂಸ್ಥೆಗಳು ಆರೋಪ ಮಾಡುತ್ತಿವೆ.

ಒಂದು ತನಿಖೆಯ ಪ್ರಕಾರ, ಬೆಂಗಳೂರಿನ ಈ ಹತ್ತು ಇಂದಿರಾ ಕ್ಯಾಂಟೀನ್-ಗಳಲ್ಲಿ, ದಾಖಲೆಗಳಿಗೂ ಮತ್ತೆ ವಾಸ್ತವ್ಯದಲ್ಲಿ ಬೃಹತ್ ವ್ಯತ್ಯಾಸಗಳು ಕಂಡುಬಂದಿವೆ. ಒಂದು ಹೊತ್ತಿಗೆ 400 ಪ್ಲೇಟ್-ಗಳು ಕರ್ಚಾಗುತ್ತಿವೆ ಎಂದು ಲೆಕ್ಕ ಪುಸ್ತಕದಲ್ಲಿ ಇದ್ದರೆ, ವಾಸ್ತವ್ಯದಲ್ಲಿ ಕೇವಲ ೧೦೦-೧೨೦ ಇತ್ತಂತೆ.

ಸರ್ಕಾರ ಗುತ್ತಿಗೆದಾರರಿಗೆ ಪ್ರತಿ ಪ್ಲೇಟ್-ಗೆ 32 ರೂ. ನೀಡುತ್ತಿದೆ. ಅಂದರೆ ದಿನಕ್ಕೆ ಸರಿಸುಮಾರು 600-700 ಪ್ಲೇಟ್ ಗಳ ವ್ಯತ್ಯಾಸ ಕಂಡುಬರುತ್ತಿದೆ. ದಿನಕ್ಕೆ 18000-21000 ರೂ. ಎಂದುಕೊಂಡರು, ಕಳೆದ ಮೂರು ತಿಂಗಳ ಕಾಲ ಸುಮಾರು 150 ಕ್ಯಾಂಟೀನ್-ಗಳು ನಗರದಲ್ಲಿ ಕಾರ್ಯನಿರ್ವಹಿಸುತ್ತಿವೆ. ನಾವು ಈ ವ್ಯತ್ಯಾಸವನ್ನು ಒಟ್ಟುಗೂಡಿಸಿದಾಗ ಅಂಕಿಅಂಶಗಳು ಕೋಟಿಗಳಾಗಿರುತ್ತವೆ ಎಂದು ನ್ಯೂಸ್ ಎಕ್ಸ್ ಸಂಸ್ಥೆ ವರದಿ ಮಾಡಿದೆ.

ಈ ಎಲ್ಲ ತನಿಖೆಯ ಹಿಂದಿರುವುದು ಕರ್ನಾಟಕ ಕಾರ್ಮಿಕ ವೇದಿಕೆಯ, ಕನ್ನಡ ಚಳುವಳಿ ನಾಗೇಶ್ ಎಂಬುವವರು. ಇವರು ಬೆಂಗಳೂರು ಭ್ರಷ್ಟಾಚಾರ ನಿಗ್ರಹ ದಳದ DCP ಅವರಿಗೆ ಲಿಖತವಾಗಿ, ದಾಖಲೆ ಸಹಿತ ದೂರನ್ನು ನೀಡಿದ್ದಾರೆ. ಈ ದೂರಿನ ಅನುಸಾರ, ನಗರದಲ್ಲಿ ಒಟ್ಟು 100 ವಾರ್ಡ್ ಗಳಲ್ಲಿ ಇಂದಿರಾ ಕ್ಯಾಂಟೀನ್ ಕಾರ್ಯನಿರ್ವಹಿಸುತ್ತಿದೆ. ಹಸಿದ ಬಡವರ, ಕೂಲಿಕಾರ್ಮಿಕರ ಹೊಟ್ಟೆ ತುಂಬಿಸಲು ಈ ಯೋಜನೆಯನ್ನು ರೂಪಿಸಿರುವುದು ಸರಿಯಾಗಿದೆ. ಆದರೆ, ನಿತ್ಯ ಕ್ಯಾಂಟೀನ್ಗಳಲ್ಲಿ ಕೇವಲ 100 ರಿಂದ 150 ಪ್ಲೇಟ್ ಊಟವನ್ನು ಮಾತ್ರ ನೀಡಲಾಗುತ್ತದೆ ನಂತರ ಟೋಕನ್ ಮುಗಿಯಿತು ಎನ್ನುತ್ತಾರೆ, ಇದಲ್ಲದೆ ಇದಕ್ಕೆ ಗುತ್ತಿಗೆದಾರರು 400 ರಿಂದ 500 ಪ್ಲೇಟ್ ಊಟ ನೀಡಿದ್ದೇವೆ ಎಂದು ಬಿಲ್ ತೋರಿಸಿ ಸರ್ಕಾರದ ಕೋಟಿ-ಕೋಟಿ ಹಣವನ್ನು ಹಗಲು ದರೋಡೆ ಮಾಡುತ್ತಿದ್ದಾರೆ, ಈ ಕುರಿತು ಬಿಬಿಎಂಪಿ, ಸಿದ್ದರಾಮಯ್ಯ, ಕೆ.ಜೆ.ಜೋರ್ಜ್, ಸಂಪತ್ ರಾಜ್, ಮಂಜುನಾಥ್ ಪ್ರಸಾದ್, ಮನೋಜ್ ರಾಜ್ ವಿರುದ್ಧ ದೂರು ದಾಖಲಿಸಿದ್ದಾರೆ.

ಸರ್ಕಾರವು ಕೂಡಲೇ ಈ ವಿಚಾರದ ಬಗ್ಗೆ ಗಮನ ಕೊಟ್ಟು, ಸಂಪೂರ್ಣ ತನಿಖೆ ಮಾಡಿ, ಮೋಸಮಾಡುತ್ತಿರುವ ಗುತ್ತಿಗೆದಾರ ಹಾಗು ಭ್ರಷ್ಟ ಅಧಿಕಾರಿಗಳಿಗೆ ತಕ್ಕ ಶಿಕ್ಷೆ ವಿಧಿಸಬೇಕು. ಹಾಗೆಯೇ ಈ ರೀತಿ ಮುಂದೆ ಆಗದಂತೆ, ಡಿಜಿಟಲ್ ಟೋಕನ್ ಕೊಡುವ ಮುಖೇನ ಈ ರೀತಿ ಆಗುವ ಮೋಸವನ್ನು ತಡೆಯಬೇಕೆಂಬುದು ನಮ್ಮ ಆಶಯ.