ದೇಶದಲ್ಲೇ ವಿಚಿತ್ರ ದರೋಡೆ; ಗಂಡನೊಬ್ಬ ಪೊಲೀಸ್ ಇನ್ಸ್ ಪೆಕ್ಟರ್ ಆದ ಹೆಂಡತಿಯ ಯೂನಿಫಾರ್ಮ್ ಗರ್ಲ್‌ಫ್ರೆಂಡ್‌ಗೆ ನೀಡಿ ದರೋಡೆಗೆ ಇಳಿದ ಭೂಪ..

0
350

ದೇಶದಲ್ಲಿ ಕಳ್ಳತನ, ಕೊಲೆ, ಅತ್ಯಾಚಾರ ಸುಲಿಗೆಗಳು ಹೆಚ್ಚಾಗುತ್ತಿದ್ದು, ಅದರಲ್ಲಿ ಅರ್ಧದಷ್ಟು ಪ್ರಕರಣಗಳು ವಿಚಿತ್ರವಾಗಿವೆ. ಏಕೆಂದರೆ ಯಾರು ರಕ್ಷಣೆ ಮಾಡಬೇಕೂ ಅವರೇ ಈ ದಂದೆಗೆ ಇಳಿದಿದ್ದಾರೆ. ಇದರಲ್ಲಿ ಪೊಲೀಸ್ ಇಲಾಖೆಯೇ ಕಳ್ಳರನ್ನು ಬೆಳಸುತ್ತಿದೆ ಎನ್ನುವ ಮಾತುಗಳು ಹಲವು ದಿನಗಳಿಂದ ಕೇಳಿ ಬರುತ್ತಿದ್ದವು, ಆದರೆ ಅವುಗಳಿಗೆ ಹೇಗೆ ಪೊಲೀಸ್ ಅಧಿಕಾರಿಗಳು ಶಾಮಿಲು ಇದ್ದಾರೆ ಎನ್ನುವುದು ಕೂಡ ಗುಪ್ತವಾಗಿತ್ತು. ಕೆಲವರಂತೂ ಯಾವ ನಗರದಲ್ಲಿ ಯಾವ ಕಳ್ಳ ಕೆಲಸ ಮಾಡುತ್ತಾನೆ ಸಂಜೆ ವೇಳೆಗೆ ಎಷ್ಟು ತರುತ್ತಾನೆ ಎನ್ನುವುದು ಕೂಡ ಕೆಲವರಿಗೆ ಗೊತ್ತಿರುವ ವಿಷಯ ಎಂದು ವಸ್ತು ಕಳೆದುಕೊಂಡ ಜನರು ಹೇಳಿಕೊಳ್ಳುತ್ತಿದ್ದರು ಇದಕ್ಕೆ ಸಕ್ಷಿಯಾಗುವಂತ ಘಟನೆಯೊಂದು ನಡೆದಿದ್ದು ಇಡಿ ದೇಶದಲ್ಲಿ ಚರ್ಚೆಗೆ ಗ್ರಾಸವಾಗಿದೆ.

Also read: ಜೈಲೂಟ, ಸಹ ಕೈದಿಗಳ ಸ್ನೇಹಕ್ಕೋಸ್ಕರ, ಬಿಡುಗಡೆಯಾದರು ಪುನಃ ಅಪರಾಧ ಮಾಡಿ ಜೈಲು ಸೇರಿತ್ತಿರುವ ವಿಚಿತ್ರ ವ್ಯಕ್ತಿಗೆ ಜೈಲೇ ಸ್ವರ್ಗವಂತೆ!!

ಏನಿದು ಪೊಲೀಸ್ ಕತೆ?

ಹೌದು ಮನೆಯಲ್ಲಿ ಒಬ್ಬರು ಪೊಲೀಸ್ ಇದ್ದರೆ ಇಡಿ ಮನೆಯಲ್ಲಿರುವ ಎಲ್ಲರಿಗೂ ಅಧಿಕಾರವಿರುತ್ತೆ ಎನ್ನುವಂತೆ ಇಲ್ಲೊಂದು ಘಟನೆ ನಡೆದಿದ್ದು ಈ ವ್ಯಕ್ತಿಯ ಮಾಸ್ಟರ್ ಮೈಂಡ್ ಯಾವ ಉಗ್ರರಿಗೂ ಕಡಿಮೆ ಇಲ್ಲ ಎನ್ನುವ ಮಾತುಗಳು ಕೇಳಿ ಬರುತ್ತಿದ್ದು, ಈ ವ್ಯಕ್ತಿಯ ಪತ್ನಿ ಪೊಲೀಸ್ ಆಗಿದ್ದು, ಅವಳ ಸಮವಸ್ತ್ರವನ್ನು ತನ್ನ ಗರ್ಲ್ ಫ್ರೆಂಡ್‍ಗೆ ನೀಡಿ ದರೋಡೆ ಮಾಡಿಸುತ್ತಿದ್ದ ಅಚ್ಚರಿಯ ಪ್ರಕರಣ ಬೆಳಕಿಗೆ ಬಂದಿದೆ. ಮಹಿಳಾ ಪೊಲೀಸ್ ಇನ್ಸ್ ಪೆಕ್ಟರ್ ಪತಿ ಹಾಗೂ ಆತನ ಗರ್ಲ್ ಫ್ರೆಂಡ್ ಇಬ್ಬರೂ ಸೇರಿ ಪೊಲೀಸ್ ಎಂದು ಹೇಳಿಕೊಂಡು ದರೋಡೆ ಮಾಡುತ್ತಿದ್ದ ಘಟನೆ ಮಧ್ಯಪ್ರದೇಶದ ಇಂದೋರ್ ನಲ್ಲಿ ನಡೆದಿದೆ.

Also read: ಕಾಗೆ’ಗಳಿಗೂ ಬಂತು ಡಿಮ್ಯಾಂಡ್; ಉತ್ತರಕ್ರಿಯೆ ಕಾಗೆ ನೀಡುವ ಬ್ಯುಸಿನೆಸ್-ಗೆ ಭಾರಿ ಬೇಡಿಕೆ..

ಇದೀಗ ಪೊಲೀಸ್ ಪೇದೆ ಪತಿ ಹಾಗೂ ಆತನ ಗರ್ಲ್ ಫ್ರೆಂಡ್ ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದ್ದು, ಆರೋಪಿ ಮಹಿಳೆಯು ಪೊಲೀಸ್ ಎಂದು ಪೋಸ್ ನೀಡಿ ದರೋಡೆ ಮಾಡುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ತನ ಪ್ರಿಯತಮೆ ಸಬ್ ಇನ್ಸಪೆಕ್ಟರ್‌ ವೇಷ ಧರಿಸಿ ಜನರನ್ನು ಲೂಟಿ ಹೊಡೆಯುತ್ತಿದ್ದಳು ಎಂದು ತಿಳಿದುಬಂದಿದೆ. ಇವರು ನಕಲಿ ಗುರುತಿನ ಪತ್ರವನ್ನು ಪೊಲೀಸರು ವಶ ಪಡಿಸಿಕೊಂಡಿದ್ದು, ಅವರ ಗುರುತು ಸೇರಿದಂತೆ ಹೆಚ್ಚಿನ ಮಾಹಿತಿಯನ್ನು ಪೊಲೀಸರು ಹೊರ ಹಾಕಿಲ್ಲ.

ಆಶ್ಚರ್ಯವೆಂದರೆ, ಆಕೆಯ ಬಾಯ್ ಫ್ರೆಂಡ್ ಸ್ವತಃ ತನ್ನ ಪತ್ನಿಯ ಪೊಲೀಸ್ ಸಮವಸ್ತ್ರವನ್ನು ನೀಡಿ ದರೋಡೆ ಮಾಡಿಸುತ್ತಿದ್ದ ಎಂದು ತಿಳಿದು ಬಂದಿದೆ. ಆರೋಪಿಗಳಿಂದ ನಕಲಿ ಪೊಲೀಸ್ ಐಡಿಯನ್ನು ವಶಪಡಿಸಿಕೊಳ್ಳಲಾಗಿದ್ದು, ಮಹಿಳಾ ಆರೋಪಿಯ ವಿವರವನ್ನು ಪೊಲೀಸರು ಬಹಿರಂಗಪಡಿಸಿಲ್ಲ. ಈ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈಗಾಗಲೇ ಇವರಿಂದ ನೂರಾರು ಜನರು ಮೋಸ ಹೋಗಿದ್ದು ಲಕ್ಷಾಂತರ ರೂ ಹಣವನ್ನು ಸುಲಿಗೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.