ಉಪೇಂದ್ರ ಅವರಿಗೆ ಮಾತ್ರವಲ್ಲ ಸೋನಿಯಾ ಗಾಂಧಿ ಬಂದರು ಸ್ವಾಗತ ಕೋರುತ್ತೇವೆ ಎಂದ ವಿಪಕ್ಷ ನಾಯಕ ಕೆ.ಎಸ್ ಈಶ್ವರಪ್ಪ…!

0
697

Kannada News | Karnataka News

ರಿಯಲ್ ಸ್ಟಾರ್ ಉಪೇಂದ್ರ ಚುನಾವಣೆಯ ಟಿಕೆಟ್ ಹಂಚಿಕೆ ವಿಚಾರದಲ್ಲಿ ಕೆಪಿಜೆಪಿ ಸಹ ಸಂಸ್ಥಾಪಕ ಮಹೇಶ್ ಗೌಡ ಜೊತೆ ಭಿನ್ನಾಭಿಪ್ರಾಯ ಮೂಡಿದ ಕಾರಣ ಉಪೇಂದ್ರ ತಾವೇ ಕಟ್ಟಿದ ಪಕ್ಷದಿಂದ ಹೊರಬರಲಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಬಿಜೆಪಿ ಹಿರಿಯ ನಾಯಕ ಈಶ್ವರಪ್ಪ ಏನು ಹೇಳಿದರು ಗೊತ್ತೇ.

ಬಿಜೆಪಿ ಪಕ್ಷದ ತತ್ವ, ಸಿದ್ಧಾಂತ ಒಪ್ಪಿಕೊಂಡು ಬರುವುದಾದರೆ ನಾವು ಎಲ್ಲರನ್ನು ಸ್ವಾಗತಿಸುವೆವು, ಅದು ರಿಯಲ್ ಸ್ಟಾರ್ ಉಪೇಂದ್ರ ಆಗಲಿ ಅಥವಾ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯೇ ಆಗಲಿ. ಉಡುಪಿಯಲ್ಲಿ ಮಾತನಾಡಿದ ಅವರು, ಉಪೇಂದ್ರ ಬಿಜೆಪಿ ಸೇರ್ಪಡೆಯಾಗುವ ಬಗ್ಗೆ ಇನ್ನು ಯಾವುದೇ ಮಾಹಿತಿ ಇಲ್ಲ ಎಂದರು.

ಕೆ.ಎಸ್ ಈಶ್ವರಪ್ಪನವರು, ಉಪೇಂದ್ರ ಕೆಪಿಜೆಪಿ ಬಿಟ್ಟು ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿ, ಈ ಕುರಿತು
ನಮಗೆ ಅವರು ಇನ್ನು ಸಂಪರ್ಕಿಸಿಲ್ಲ ಕೇವಲ ಮಾಧ್ಯಮಗಳಲ್ಲಿ ಬಿಜೆಪಿ ಸೇರುತ್ತಾರೆ ಎಂಬ ಸುದ್ದಿ ಇದೆ ಅಷ್ಟೇ. ನಮ್ಮ ಪಕ್ಷ ಎಲ್ಲರನ್ನು ಸ್ವಾಗತಿಸತ್ತದೆ ಎಂದರು.

ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಹ ಬಿಜೆಪಿ ಸೇರ್ಪಡೆಯಾಗಲು ಪ್ರಯತ್ನಿಸಿದ್ದರು. ಆದರೆ, ಅವರಿಗೆ ಉನ್ನತ ಸ್ಥಾನ ನೀಡಬೇಕು ಎಂದು ಮತ್ತು ಇನ್ನು ಹಲವು ಬೇಡಿಕೆ ಇಟ್ಟಿದ್ದರು. ಇವರ ಯಾವುದೇ ಬೇಡಿಕೆಗಳಿಗೆ ಪಕ್ಷದ ನಾಯಕರು ಮನ್ನಣೆ ನೀಡದ ಕಾರಣ ಅವರು ಜೆಡಿಎಸ್ ಪಕ್ಷಕ್ಕೆ ಕೈಕೊಟ್ಟು ಕಾಂಗ್ರೆಸ್ ಸೇರಿದರು ಎಂದರು.

ಭಾರತೀಯ ಜನತಾ ಪಾರ್ಟಿ ಒಂದು ಸಮುದ್ರ. ಈ ಸಮುದ್ರಕ್ಕೆ ಯಾವುದೇ ನೀರು ಹರಿದು ಬಂದರೂ ಸ್ವೀಕಾರ ಮಾಡುತ್ತದೆ. ಚಿತ್ರ ನಟ-ನಟಿಯರು ಮಾತ್ರವಲ್ಲ, ಕ್ರಿಮಿನಲ್ ಮುಕ್ಕದ್ದಮ್ಮೆ ಇಲ್ಲದ ಯಾರು ಬಂದರು ನಾವು ಸ್ವಾಗತಿಸುತ್ತೇವೆ. ಉಪೇಂದ್ರ ಪಕ್ಷ ಮುನ್ನಡೆಸುತ್ತರೋ ಅಥವಾ ಬಿಜೆಪಿಯ ಜೊತೆ ನಡೆಯುತ್ತಾರೋ ಇನ್ನು ಸ್ಪಷ್ಟವಾಗಿಲ್ಲ ಎಂದು ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಹೇಳಿಕೆ ನೀಡಿದ್ದಾರೆ.

Also Read: ಸೂಪರ್ ಸ್ಟಾರ್ ಉಪೇಂದ್ರರವರ ಪ್ರಜಾಕೀಯ ಪಕ್ಷದ ಮೊದಲ ಪ್ರಣಾಳಿಕೆಯನ್ನು ನೋಡಿ ದಂಗಾದ ಮೂರೂ ಪಕ್ಷಗಳು, ಹಾಗಾದರೆ ಆ ಪ್ರಣಾಳಿಕೆಯಲ್ಲಿ ಏನಿದೆ?