ಐ.ಪಿ.ಎಲ್. ಪಂದ್ಯಗಳಿಗೂ ತಟ್ಟಿದೆ ಕಾವೇರಿ ಬಿಸಿ, ಚೆನ್ನೈನಿಂದ ಶಿಫ್ಟ್-ಆದ ಐ.ಪಿ.ಎಲ್. ಪಂದ್ಯಗಳು!!

0
616

ಕಾವೇರಿ ಕನ್ನಡ ನಾಡಿನಲ್ಲಿ ಹರಿದ್ರೂ, ಹೆಚ್ಚು ಉಪಯೋಗವಾಗುವುದು ನೆರೆ ರಾಜ್ಯಕ್ಕೆ. ಕರ್ನಾಟಕ ಹಾಗೂ ತಮಿಳುನಾಡು ನಡುವಿನ ಕಾವೇರಿ ನಡುವಿನ ಹಗ್ಗಜಗ್ಗಾಟ ಇಂದು ನೆನ್ನೆಯದು ಅಲ್ಲವೇ ಅಲ್ಲ. ದಶಕಗಳ ಇತಿಹಾಸವನ್ನು ಈ ಪ್ರಕರಣ ಹೊಂದಿದೆ. ಸುಪ್ರೀಂ ಕೋರ್ಟ್​​ನಲ್ಲಿ ಈ ವಿವಾದ ಹಲವು ವರ್ಷಗಳಿಂದ ನಡೆಯುತ್ತಾ ಬಂದಿದ್ದು, ಎರಡೂ ರಾಜ್ಯಗಳನ್ನು ಸಮಾಧಾನ ಮಾಡುವುದು ಸಮಸ್ಯೆ ಆಗಿಯೇ ಉಳಿದಿದೆ.

ಇನ್ನು ಕಾವೇರಿ ನಿರ್ವಹಣಾ ಮಂಡಳಿ ರಚನೆಯ ವಿಳಂಬಕ್ಕೆ ತಮಿಳುನಾಡಿನಲ್ಲಿ ಪ್ರತಿಭಟನೆ ಜೋರಾಗಿದೆ. ಪಕ್ಷ ಬೇಧವನ್ನು ಮರೆತು, ನೀರಿಗಾಗಿ ಪ್ರತಿಭಟನೆ ನಡೆಯುತ್ತಿದೆ. ಅಲ್ಲದೆ ಹಲವು ಸಂಘಟನೆಗಳು ಸಹ ಈ ಪ್ರತಿಭಟನೆಗೆ ಬೆಂಬಲ ಸೂಚಿಸಿವೆ. ಅಂದಹಾಗೆ ಸಿನಿ ತಾರೆಯರು ಧರಣಿಗೆ ಕೈ ಜೋಡಿಸಿದ್ದು ಎಲ್ಲರಿಗೂ ಗೊತ್ತಿರುವ ವಿಚಾರವೆ ಆಗಿದೆ.

ಈ ಮಧ್ಯ ಐಪಿಎಲ್​ ಕಾವು ಸಹ ದಿನೇ ದಿನೇ ದೇಶದಲ್ಲಿ ಹೆಚ್ಚಾಗುತ್ತಿದೆ. ಇದಕ್ಕಾಗಿ ಅಭಿಮಾನಿಗಳು ಸಹ ಪ್ಲಾನ್ ಮಾಡಿಕೊಂಡಿದ್ದಾರೆ. 2 ವರ್ಷದ ನಿಷೇಧವನ್ನು ಪೂರ್ಣಗೊಳಿಸಿ ಲೀಗ್​ಗೆ ಎಂಟ್ರಿ ನೀಡಿದ ಸಿಎಸ್​​ಕೆಗೂ ಪ್ರತಿಭಟನೆಯ ಬಿಸಿ ತಟ್ಟಿದೆ. ಹೌದು.. ಮಂಗಳವಾರ ಚೆನ್ನೈ ಸೂಪರ್​ ಕಿಂಗ್ಸ್​ ಹಾಗೂ ಕೋಲ್ಕತಾ ನೈಟ್​ ರೈಡರ್ಸ್​ ನಡುವಣ ಪಂದ್ಯ ನಡೆದಿತ್ತು. ಈ ಪಂದ್ಯದಲ್ಲಿ ಚೆನ್ನೈ ಭರ್ಜರಿ ಜಯ ದಾಖಲಿಸಿ ತವರಿನಲ್ಲಿ ಶುಭಾರಂಭ ಮಾಡಿದೆ. ಆದ್ರೆ ಪಂದ್ಯದ ವೇಳೆ ನಡೆದ ಘಟನೆ ಅಭಿಮಾನಿಗಳಿಗೆ ಮುಜುಗರ ತಂದಿದೆ.

ಪಂದ್ಯ ನಡೆಯುವ ವೇಳೆ, ಮೈದಾನಕ್ಕೆ ಶೂ ಹಾಗೂ ಧ್ವಜವನ್ನು ಎಸೆದು ಆಕ್ರೋಶ ವ್ಯಕ್ತ ಪಡಿಸಲಾಗಿದೆ. ಅಲ್ಲದೆ ಗ್ಯಾಲರಿಯಲ್ಲಿ ಘೋಷಣೆಗಳನ್ನು ಕೂಗಿದ್ದಾರೆ. ಮೈದಾನದಲ್ಲಿ ಬಿದ್ದ ಶೂ ಅನ್ನು ಸಿಎಸ್​ಕೆ ಆಟಗಾರರು ಹೊರ ತರುತ್ತಿರುವ ದೇಶ್ಯಗಳು ಸಖತ್​ ವೈರಲ್​ ಆಗಿದೆ. ಕಾವೇರಿ ವಿಷಯಕ್ಕೆ ಚಿಪಾಕ ಅಂಗಳದ ಹೊರಗೆ ಪ್ರತಿಭಟನೆ ಜೋರಾಗಿತ್ತು. ಪ್ರತಿಭಟನೆ ನಡೆಸಿ, ಪಂದ್ಯಕ್ಕೆ ಅಡ್ಡಿ ಮಾಡಲು ಯತ್ನಿಸಿದ 780 ಪ್ರತಿಭಟನಾಕಾರರರನ್ನ ಚೆನ್ನೈ ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ ಮೈದಾನಕ್ಕೆ ಶೂ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆಯೂ ಪೊಲೀಸರು ಆರೋಪಿಗಳನ್ನು ಬಂದಿಸಿದ್ದಾರೆ. ಇದರ ಪರಿಣಾಮ ಐಪಿಎಲ್​​ನ ಮುಂದಿನ ಪಂದ್ಯಗಳು ಚೆನ್ನೈನಿಂದ ಶಿಫ್ಟ್​ ಆಗಿವೆ.