ಸ್ವರ್ಗವನ್ನೂ ನಾಚಿಸುವಂತಿದೆ ಈ 8 ಜಗತ್ಪ್ರಸಿದ್ದ ದ್ವೀಪಗಳು…!!

0
2104

1. ಆಸ್ಟ್ರೇಲಿಯಾ
ಇದನ್ನು ಖಂಡ, ದೇಶ ಹಾಗೂ ದ್ವೀಪವೆಂದೂ ಕರೆಯುತ್ತಾರೆ. ಒಟ್ಟಿನಲ್ಲಿ ಆಸ್ಟ್ರೇಲಿಯಾ ಒಂದು ಅಸಾಮಾನ್ಯ ಸಂಯೋಜನೆ! ಇದು ಅಸಂಖ್ಯಾತ ಪ್ರವಾಸಿಗರು ಹಾಗೂ ಪ್ರಯಾಣಿಕರಿಗೆ ಇದೊಂದು ಕನಸಿನ ಭೂಮಿ. ವನ್ಯಜೀವಿ, ಇತಿಹಾಸ, ಸಂಸ್ಕøತಿ ಮುಂತಾದ ವಿಷಯಗಳಲ್ಲಿ ಆಸಕ್ತಿ ಇರುವವರಿಗಂತೂ ಆಸ್ಟ್ರೇಲಿಯಾ ಅದ್ಭುತ ತಾಣ. ಅದಿಲ್ಲದೆ ಸುಮ್ಮನೆ ನೋಡಿ ಮನಸ್ಸಿನ ತುಂಬಾ ಸಂತ ತುಂಬಿಕೊಳ್ಳಲೂ ಕೂಡ ಅಡ್ಡಿಯಿಲ್ಲ.

2. ಪಿಲಿಪೈನ್ಸ್
ಯಾವುದಾದರೂ ಒಂದು ದ್ವೀಪಕ್ಕೆ ಹೋಗಿ ಬರುವುದೇ ಅದ್ಭುತ ಅನುಭವ. ಆದರೆ ಈ ದೇಶದಲ್ಲಿ ಏಳು ಸಾವಿರಕ್ಕೂ ಹೆಚ್ಚಿನ ದ್ವೀಪಗಳಿವೆಯಂತೆ! ಅಂದ ಮೇಲೆ ಇದನ್ನು ದ್ವೀಪದ ನಾಡು ಎನ್ನಲಡ್ಡಿಯಿಲ್ಲ. ಒಂದೊಂದು ದ್ವೀಪವೂ ಅಷ್ಟೇ ಬೆರಗು ಹುಟ್ಟಿಸುವಂತಿದ್ದು, ನಂಬಲಾರದಷ್ಟು ಸುಂದರವಾಗಿದೆಯಂತೆ! ಇಲ್ಲಿನ ಹವಾಮಾನವೂ ಅಷ್ಟೇ ಚೆನ್ನಾಗಿದ್ದು ವರ್ಷವಿಡೀ ಅಲ್ಲಿಗೆ ಭೇಟಿ ನೀಡಿ ಎಂಜಾಯ್ ಮಾಡಬಹುದು. ಪ್ರವಾಸೀ ಆಕರ್ಷಣೆ ಇರುವ ಸ್ಥಳಗಳಿಗೆ ಭೇಟಿ ನೀಡಿ, ಸ್ಪೈಸಿ ಆಹಾರ ಸೇವಿಸುತ್ತಾ ಖುಷಿ ಪಡಬಹುದು. ಇಲ್ಲಿರುವ ಕೆಲವು ಸ್ಥಳಗಳಲ್ಲಿ ಚಾಕೊಲೇಟ್ ಹಿಲ್ಸ್, ಪ್ಯುರೆಟ್ರೋ ಗೆಲೆರಾ, ಮೆಯಾನ್ ವಾಲ್ಕೆನೋ, ಡೊನ್‍ಸಾಲ್, ಟುಬ್ಬಾತಹಾ ರೀಫ್ ಮುಂತಾದ ಹಲವು ಸ್ಥಳಗಳನ್ನು ನೋಡಲು ಮರೆಯಬೇಡಿ.

3.ಮಾಲ್ಟ
ಯುರೋಪಿನ ದಕ್ಷಿಣ ಭಾಗದಲ್ಲಿರುವ ಮಾಲ್ಟದಲ್ಲಿ ಅದ್ಭುತ ಹವಾಮಾ£ದ ಜೊತೆಗೆ ಅಷ್ಟೇ ಚೆನ್ನಾದ ಸಂಸ್ಕøತಿ, ಇತಿಹಾಸವಿದೆ. ಇಲ್ಲಿನ ಮೆಡಿಟರೇನಿಯನ್ ಕಡಲತೀರದಲ್ಲಿ ಸನ್‍ಬಾತ್, ಈಜುತ್ತ, ಪ್ರಕೃತಿ ವೀಕ್ಷಿಸುತ್ತ ಚೆಂದದ ಫೋಟೋ ತೆಗೆದುಕೊಳ್ಳಬಹುದು. ಹೊಸದನ್ನು ಹುಡುಕುವವರಿಗೆ ಇಲ್ಲಿ ನೋಡಲು, ಖುಷಿ ಪಡಲು ಸಾಕಷ್ಟು ಅವಕಾಶಗಳಿವೆ.

4.ಮಾಲ್ಡೀವ್ಸ್
ಐಷಾರಾಮಿ ಸ್ಥಳ ಎಂದೇ ಪ್ರಖ್ಯಾತವಾಗಿರುವ ಮಾಲ್ಡೀವ್ಸ್‍ನಲ್ಲಿ ಸುಂದರ ರೆಸಾರ್ಟ್, ಅದ್ಭುತ ಕಡಲತೀರಗಳು, ಪ್ರಾಚೀನ ಹವಳದ ದಿಬ್ಬಗಳು .ನಯನಮನೋಹರವಾಗಿದ್ದು ರಜಾದಿನಗಳನ್ನು ಕಳೆಯಲು ಉತ್ತಮ ಸ್ಥಳ. ಈ ದ್ವೀಪ ರಾಷ್ಟ್ರವು ಇಂಡಿಯನ್ ಓಷನ್‍ನ ಮಧ್ಯದಲ್ಲಿದ್ದು ಜೀವನದಲ್ಲಿ ಒಮ್ಮೆ ನೋಡಿದರೆ ಮರೆಯಲಾಗದಂತಹ ಸ್ಥಳ.

5. ಕ್ಯೂಬಾ
ಕ್ಯೂಬಾ ಜೀವನದಲ್ಲೊಮ್ಮೆ ನೋಡಲೇಬೇಕಾದ ಸ್ಥಳ. ಇಲ್ಲಿನ ಸ್ಫಟಿಕದಂತಹ ಶುಭ್ರ ನೀರು, ಹಿಮ ಬಿಳಿ ಮರಳಿನ ಕಡಲತೀರಗಳು, ಹವಳದ ದಿಬ್ಬಗಳು, ಅಸಂಖ್ಯಾತ ಆಕರ್ಷಣೀಯ ವಿಷಯಗಳು ಜೊತೆಗೆ ಹಲವಾರು ಸ್ಮರಣೀಂಯ ವಿಷಯಗಳು ದೊರೆಯುವ ಪುಟ್ಟ ಪುಟ್ಟ ಅಂಗಡಿಗಳನ್ನು ನೋಡುತ್ತ ಮರುಳಾಗುತ್ತೀರಿ.

6. ಫಿಜಿ
ಜಗತ್ತಿನ ಎಷ್ಟೋ ಅದ್ಭುತಗಳನ್ನು ಕಂಡ ಕಣ್ಣುಗಳನ್ನೂ ಪರವಶಗೊಳಿಸುವ ಸ್ಥಳ ಫಿಜಿ. ವಿಶ್ವದ ಯಾವುದೇ ಮೂಲೆಯ ಸರ್ಫರ್ಸ್‍ಗಳು ಇಷ್ಟಪಡುವ ಫಿಜಿ ಪರವಶಗೊಳಿಸುವ ಸೊಬಗನ್ನು ಪಡೆದಿದೆ. ದೊಡ್ಡ ದೊಡ್ಡ ಅಲೆಗಳು, ಹಿತವಾದ ಹವಾಗುಣವಿದ್ದು ಸರ್ಫಿಂಗ್ ಆಟವನ್ನು ಖುಷಿಯಿಂದ ಎಂಜಾಯ್ ಮಾಡಬಹುದು. ಬೀಚ್‍ನಲ್ಲಿ ಕುಳಿತು ಜಲಪಾತದ ಸೊಬಗನ್ನು ಸವಿಯಬಹುದು. ಜೀವನದಲ್ಲಿ ಒಮ್ಮೆ ನೋಡಲೇಬೇಕಾದ ಅದ್ಭುತ ದೇಶಗಳಲ್ಲಿ ಫಿಜಿಯೂ ಒಂದು.

7. ಜಪಾನ್
ವಿಭಿನ್ನ ಸಂಸ್ಕೃತಿ ಹಿನ್ನೆಲೆಯ ಜನರ ಸಹಿಷ್ಣುತೆಯ ಸಹಬಾಳ್ವೆಯನ್ನು ನೋಡಲು ಜಪಾನಿಗೆ ಬರಬೇಕು. ಇಲ್ಲಿನ ವಾತಾವರಣ ಯಾವುದೇ ಕಾರಣಕ್ಕೂ ಬೇಜಾರು ಪಡಿಸುವುದೇ ಇಲ್ಲ. ಟೋಕಿಯೋ ಅಂತೂ ನೋಡಲೇಬೇಕಾದ ಸ್ಥಳ. ಕ್ಲಬ್ಸ್, ಪಬ್ಸ್, ರೆಸ್ಟಾರೆಂಟ್‍ಗಳಲ್ಲಿ ರಾತ್ರಿ ಕಳೆದು-ಶಾಪಿಂಗ್ ಸೆಂಟರ್‍ಗಳು, ಮ್ಯೂಸಿಯಂಗಳು ಮತ್ತು ಗ್ಯಾಲರಿಗಳಲ್ಲಿ ಹಗಲು ಕಳೆಯುವಲ್ಲಿ ಹೊತ್ತು ಕಳೆದುದರ ಪರಿವೆಯೇ ಇರುವುದಿಲ್ಲ.

8. ಗ್ರೀಸ್
ಅಸಾಧಾರಣ ವಾಸ್ತುಶಿಲ್ಪ, ಸಾಹಿತ್ಯ, ಕಲೆಯಿಂದ ಒಡಗೂಡಿದ ಅನನ್ಯ ದೇಶ ಗ್ರೀಸ್. ಅದ್ಭುತ ಪ್ರಕೃತಿ, ಕಡಲತೀರಗಳು, ಸಮುದ್ರ ಹಾಗೂ ರುಚಿಕರ ಆಹಾರ ಇಲ್ಲುಂಟು. ಇಲ್ಲಿ 1,400ಕ್ಕೂ ಹೆಚ್ಚಿನ ದ್ವೀಪಗಳಿದ್ದು, ಅವುಗಳಲ್ಲಿ 169 ದ್ವೀಪಗಳಲ್ಲಿ ಜನವಸತಿಗಳಿವೆ. ಬೇಸಿಗೆಕಾಲದಲ್ಲಿ ಭೇಟಿ ನೀಡಲು ಗ್ರೀಸ್ ಸೂಕ್ತ ಸ್ಥಳ. ಸಂತೋರಿನಿ, ಕಾರ್ಫು, ಮೈಕೊನಾಸ್ ದ್ವೀಪಗಳಿಗೆ ಭೇಟಿ ನೀಡಿ, ಇಲ್ಲಿನ ಸ್ಥಳೀಯ ಆಹಾರದ ರುಚಿ ನೋಡಿ.ಇವುಗಳನ್ನು ಕಣ್ದಣಿಯ ನೋಡಿದಾಗಲೇ ಅದರ ಸೌಂದರ್ಯ ಪೂರ್ಣ ಅರ್ಥವಾಗುವುದು. ಅಂದುಕೊಂಡ ತಕ್ಷಣ ಸಮಯ, ಹಣದ ಅಭಾವದಿಂದ ಆಗದೇ ಇರಬಹುದು. ನೋಡಲೇಬೇಕೆಂಬ ಕನಸಿದ್ದರೆ ಜೀವನದಲ್ಲಿ ಎಂದಾದರೂ ಒಮ್ಮೆ ಅದು ಸಾಧ್ಯವಾಗಬಹುದು. ಆಶಯಗಳು ಎಂದಾದರೂ ವಾಸ್ತವವಾಗಬಹುದು.