ಹಲಸಿನ ಸೀಸನ್ ಮುಗಿಯೋದ್ರೊಳಗೆ ಅದರ ಲಾಭ ಪಡ್ಕೊಳ್ಳಿ!!!

0
1636

ಹಣ್ಣು ಬೀಜ ಎಲೆ ತೊಗಟೆ ಬೇರು ಇವು ಹಲಸಿನಲ್ಲಿರುವ ಔಷಧೋಪಯೋಗಿ ಭಾಗಗಳು.

1. ಚೀನಾದಲ್ಲಿ ಹಲಸಿನ ಹಣ್ಣನ್ನು ಶಕ್ತಿ ವರ್ಧಕ ಟಾನಿಕ್ ಆಗಿ ಬಳಸುತ್ತಾರೆ.

2. ಹಲಸಿನ ಹಣ್ಣು ಮದ್ಯ ಸೇವನೆಯ ದುಷ್ಪರಿಣಾಮಗಳನ್ನು ಕಡಿಮೆಗೊಳಿಸುವುದಾಗಿ ಸಂಶೋಧನೆಗಳಿಂದ ತಿಳಿದು ಬಂದಿದೆ.

3. ಹಲಸಿನ ಬೀಜಗಳನ್ನು ಹುರಿದು ಬೆಲ್ಲದ ಜೊತೆ ಸೇವಿಸಿದರೆ ವೀರ್ಯ ವೃದ್ಧಿ.

4. ಹಲಸಿನ ಎಲೆಗಳನ್ನು ಸುಟ್ಟು ಕರಕಲುಮಾಡಿ ಕೊಬ್ಬರಿ ಎಣ್ಣೆ ಜೊತೆ ಮಿಶ್ರ ಮಾಡಿ ಹಚ್ಚಿದರೆ ಗಾಯಗಳು ಒಣಗುತ್ತವೆ.

5. ಹಣ್ಣಿನ ಸೋನೆಯನ್ನು ಒಣಗಿಸಿದಾಗ ಅದರಲ್ಲಿ ಆರ್ಟೊಸ್ಟಿರೋನ್ ಎಂಬ ರಾಸಾಯನಿಕವು ದೊರೆಯುತ್ತದೆ.

6. ಹಾವು ಕಡಿತದ ವಿಷ ನಿವಾರಣೆಗಾಗಿ ಒಣಗಿದ ಸೋನೆ ಹಾಗು ವಿನೇಗರ ಅನ್ನು ಮಿಶ್ರಮಾಡಿ ಬಳಸುತ್ತಾರೆ.

7. ಜ್ವರ ಹಾಗು ಭೇದಿಯ ಸಂದರ್ಭಗಳಲ್ಲಿ ಹಲಸಿನ ಬೇರಿನ ಕಷಾಯವನ್ನು ಸೇವಿಸಿದರೆ ಒಳ್ಳೆಯದು.

8. ಹಲಸಿನ ಎಲೆಯನ್ನು ಬಿಸಿ ಮಾಡಿ ಕುರು, ಗಡ್ಡೆ ಮುಂತಾದುವುಗಳ ಮೇಲೆ ಕಟ್ಟಿದರೆ ಅವು ಬೇಗ ಒಡೆಯುತ್ತದೆ.

9. ಇದು ಪುರುಷರ ಹಾರ್ಮೋನ್ ಆಗಿರುವ ಆಂಡ್ರೋಜೆನ್ ನಂತೆ ಕಾರ್ಯವೆಸಗುತ್ತದೆ

Also Read: ಕಣ್ಣು ನೋವಿಗೆ ಇಲ್ಲಿವೆ ನೋಡಿ ಟಿಪ್ಸ್ ಗಳು…!

Watch: