ಕೋಟಿಗೊಂದು ಲವ್ ಸ್ಟೋರಿ ಖ್ಯಾತಿಯ ಜಗ್ಗು ಸಿರ್ಸಿ ಅವರ ಮತ್ತೊಂದು ಚಿತ್ರ ಪಡುವಾರಳ್ಳಿ ಪಾಂಡವರು in 1989 …!

0
1044

ಜಗ್ಗು ಶಿರ್ಸಿ ನಿರ್ದೇಶನದ “ಪಡುವಾರಳ್ಳಿ ಪಾಂಡವರು ಇನ್ 1989” ಸಿನಿಮಾಕ್ಕೆ ಹೊಸ ನಾಯಕ ನಟನ ಅನ್ವೇಷಣೆ.
ಕೋಟಿಗೊಂದ್ ಲವ್ ಸ್ಟೋರಿ ಸಿನಿಮಾದ ಮುಲಕ ಭರವಸೆಯ ನಿರ್ದೇಶಕನಾಗಿ ಗುರುತಿಸಿಕೊಂಡ ‘ಜಗ್ಗು ಶಿರ್ಸಿ’ಯವರ ಮುಂದಿನ ಚಿತ್ರ “ಪಡುವಾರಳ್ಳಿ ಪಾಂಡವರು ಇನ್ 1989”.
ಈ ಚಿತ್ರಕ್ಕೆ ನುರಿತ ತಂತ್ರಜ್ಞರನ್ನೊಳಗೊಂಡ ನವ ಕಲಾವಿದರ ತಂಡವನ್ನು ಕಟ್ಟಿಕೊಂಡು ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ಸತತ ಒಂದು ತಿಂಗಳು ಕಾಲ ಪಾತ್ರಕ್ಕೆ ತಕ್ಕ ಕಲಾವಿದರ ಆಯ್ಕೆಗಾಗಿ ಶ್ರಮ ವಹಿಸಿದ್ದಾರೆ.


ಸಿನಿಮದ ನಾಯಕ “ವಿನ್ನು ವೆಂಕಟೇಶ್” ಇವರು ಮುಂಬೈನ ಪ್ರತಿಷ್ಠಿತ “ಅನುಪಮ್ ಖೇರ್ ಆಕ್ಟ್ರಾಸ್ ಪ್ರಿಪೆರ್ ಸ್ ಇನ್ಸ್ಟಿಟ್ಯೂಟ್” ಲ್ಲಿ ತರಬೇತಿ ಪಡೆದು ನಾಯಕ ನಟನಾಗಲು ಎಲ್ಲಾ ರೀತಿಯ ಅರ್ಹತೆಯನ್ನು ಹೊಂದಿದ್ದಾನೆ, ಮಾರ್ಷಲ್ ಆರ್ಟ್, ಡಾನ್ಸ್, ಅಭಿನಯವನ್ನು ಕರಗತ ಮಾಡಿಕೊಂಡಿದ್ದಾನೆ.
ಜಗ್ಗು ಶಿರ್ಸಿಯವರು ಪಾತ್ರಕ್ಕೆ ತಕ್ಕ ಹೊಸ ನಾಯಕನ ಹುಡುಕಾಟದಲ್ಲಿ ಇದ್ದಾಗ ಖುದ್ದಾಗಿ ‘ಅನುಪಮ್ ಖೇರ್’ ಅವರೆ ಇವರನ್ನು ಪರಿಚಯಿಸಿದ್ದಾರೆ.


ಚಿತ್ರದಲ್ಲಿ 5 ಹಾಡುಗಳಿದ್ದು ‘ಭಕ್ಕೇಶ್ ರೋನಡ್ & ಪಂಚಮ್ ಜೀವಾ’ರವರ ಸಂಗೀತ ಸಂಯೋಜನೆಯಲ್ಲಿ ಈಗಾಗಲೇ ರಾಜೇಶ್ ರಾಮನಾಥ್ ಸ್ಟುಡಿಯೋದಲ್ಲಿ ಸಂಗ್ ರೆಕಾರ್ಡಿಂಗ್ ಮುಗಿದಿದ್ದು 2 ದಿನಗಳ ಕಾಲ ನೂರಾರು ಕಲಾವಿದರೊಂದಿಗೆ ಟಿಸರ್ ಸೂಟ್ ಸಹ ಮಾಡಲಾಗಿದೆ.
1976 ರಲ್ಲಿ ಕನ್ನಡ ಚಿತ್ರರಂಗದಲ್ಲಿ ಸಂಚಲನ ಮೂಡಿಸಿ ಯಶಸ್ವಿ ಯಾದ “ಪಡುವರಹಳ್ಳಿ ಪಾಂಡವರು” ಸಿನಿಮಾವನ್ನು “ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್” ರವರು ನಿರ್ದೇಶನ ಮಾಡಿದ್ದು ಆ ಸಿನಿಮಾ ಚರಿತ್ರೆ ಯಾಗಿ ಚಿತ್ರಪ್ರೇಮಿಗಳ ಮನಸ್ಸಲ್ಲಿ ಇಂದಿಗೂ ಉಳಿದಿದೆ. ಈ ಚಿತ್ರದಲ್ಲಿ ಅಭಿನಯಿಸಿದ “ರೆಬಲ್ ಸ್ಟಾರ್ ಅಂಬರೀಶ್, ರಾಮಕೃಷ್ಣ, ಜೈಜಗದೀಶ್, ಮುಸುರಿ ಕ್ರಷ್ಷಮೂರ್ತಿ, ಧೀರೇಂದ್ರ ಗೋಪಾಲ್, ಮತ್ತು ಕ್ರಷ್ಣ ” ಇವರೆಲ್ಲರಿಗೂ ಚಿತ್ರರಂಗದಲ್ಲಿ ಬದ್ರ ಭುನಾದಿ ಹಾಕಿಕೊಟ್ಟ ಸಿನಿಮಾ ಇದಾಗಿದ್ದು ಇಂತಹ ಅದ್ಭುತವಾದ ಸಿನಿಮಾದ ಶೀರ್ಷಿಕೆಯನ್ನಿಟ್ಟುಕೊಂಡು ಮತ್ತೆ “ಮುಸುರಿ ಕ್ರಷ್ಣಮೂರ್ತಿ ಫಿಲಮ್ ಪ್ರಸೆಂಟ್ ಸ್” ಲ್ಲಿ ‘ಪುಟ್ಟಣ್ಣ ಕಣಗಾಲ್’ ರವರ ಆಶೀರ್ವಾದದೊಂದಿಗೆ “ಜಗ್ಗು ಶಿರ್ಸಿ”ಯವರು ನಿರ್ದೇಶನ ಮಾಡಲು ಹೊರಟಿದ್ದಾರೆ. ಛಾಯಾಗ್ರಾಹಕ-ಮುಸುರಿ ಗುರುಧತ್, ನಿರ್ವಹಣ ವಿನ್ಯಾಸ-ಎಮ್.ರಂಗನಾಥ್ ಆಲೂರ್, ಸಂಕಲನ-ವೈ.ಎಸ್.ಶ್ರೀಧರ್, ವಸ್ತ್ರ ವಿನ್ಯಾಸ-ಬಿ.ಬಿ.ಪೂರ್ಣಿಮಾ ಶಿರ್ಸಿ, ಮ್ಯಾನೇಜರ್-ಬಸವರಾಜ್.ಎಮ್.ಬಿ,& ಶತೀಶ್ ಕುಲಾಲ್, ಸಹ ನಿರ್ದೇಶಕರು- ಧನು, ಮಹಾಸತಿ, ಮಹಾಂತೇಶ್, ಶ್ಯಾಮ್ ರವರು ಕಾರ್ಯ ನಿರ್ವಹಿಸುತ್ತಿದ್ದಾರೆ, ಸಿನಿಮಾದ ಪೋಸ್ಟ್ ಪ್ರೊಡಕ್ಸನ್ ಮತ್ತು ಕ್ಯಾಮರಾ ಸಲಕರಣೆಗಳನ್ನು ಡಿ.ಸಿ.ಸಿ. ಸ್ಟುಡಿಯೋ ಒದಗಿಸುತ್ತಿದೆ.


ಹಿರಿಯ ಕಲಾವಿದರು-ಜಯಸಿಂಹ ಮುಸುರಿ, ಸ್ವಸ್ತಿಕ್ ಶಂಕರ್, ವಿಜಯ್ ಲಕ್ಷ್ಮಿ ಹೆಗಡೆ, ಕ್ರಷ್ಣ, ಅಮೋಘ್, ಇವರೊಂದಿಗೆ
ಹೊಸ ಪ್ರತಿಭೆಗಳು-ವಿನ್ನು ವೆಂಕಟೇಶ್, ಮಹಾಸತಿ ಹೊನ್ನಾವರ, ಆಶಾ ಭಂಡಾರಿ, ಕವಿತಾ, ಅಭಿನಯಿಸುತ್ತಿದ್ದಾರೆ.
ಸದ್ಯದಲ್ಲೇ ಚಿತ್ರತಂಡ ಸಿನಿಮಾದ ‘ಶೀರ್ಷಿಕೆ ಮತ್ತು ಟೀಸರ್’ ನ್ನು ಬಿಡುಗಡೆ ಮಾಡಿ ಚಿತ್ರೀಕರಣಕ್ಕೆ ಹೊರಡುವ ಸಿದ್ದತೆಯಲ್ಲಿದ್ದಾರೆ. ಸತತ 80 ದಿನಗಳ ಕಾಲ ‘ಜೋಗ್ ಫಾಲ್ಸ್ ‘ ಸುತ್ತ ಮುತ್ತ ಚಿತ್ರೀಕರಣ ಮಾಡಲಿದ್ದಾರೆ. ಎಂದು ನಿರ್ದೇಶಕ ‘ಜಗ್ಗು ಶಿರ್ಸಿ’ಯವರು ನಾವು ಮಾಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ