ನಿಖಿಲ್‌ ಗೆಲುವಿಗೆ 150 ಕೋಟಿ ಹಂಚಿಕೆ ಆಡಿಯೋದ ಸತ್ಯಾಂಶ ಬಹಿರಂಗ; ಚುನಾವಣಾ ದಿನವೇ ತಪ್ಪೊಪ್ಪಿಕೊಂಡ ಜೆಡಿಎಸ್ ಮುಖಂಡರು?

0
495

ಮಂಡ್ಯದಲ್ಲಿ ಚುನಾವಣೆ ಸದ್ದು ಇನ್ನು ಜೋರಾಗಿದ್ದು ಈಗಾಗಲೇ ಮತದಾನ ನಡೆಯುತ್ತಿದೆ. ಈ ಬೆನ್ನೆಲೆಯಲ್ಲೇ ನಿಖಿಲ್ ಕುಮಾರಸ್ವಾಮಿಯವರನ್ನು ಗೆಲ್ಲಿಸಲು 150 ಕೋಟಿ ಹಣ ಕರ್ಚು ಮಾಡಲಾಗಿದೆ ಎನ್ನುವ ಆಡಿಯೋದ ಸತ್ಯ ಈಗ ಹೊರ ಬಿದಿದ್ದೆ ಎನ್ನುವ ವಿಚಾರಗಳು ಕೇಳಿ ಬರುತ್ತಿವೆ. ವಿಚಾರಣೆಯ ವೇಳೆ, ಆಡಿಯೋದಲ್ಲಿರುವ ಧ್ವನಿ ನಮ್ಮದೇ, ನಮ್ಮ ಸಂಭಾಷಣೆಯ ವೇಳೆ ಇತರ ಮುಖಂಡರೂ ನಮ್ಮ ಜೊತೆಗಿದ್ದರು ಎಂದು ಇಬ್ಬರು ಮುಖಂಡರು ತಪ್ಪೊಪ್ಪಿಕೊಂಡಿದ್ದಾರೆ ಎನ್ನುವ ಸುದ್ದಿಯನ್ನು ಕೆಲವು ಮಾಧ್ಯಮಗಳು ವರದಿ ಮಾಡಿವೆ.

Also read: ಮಾರ್ಗದರ್ಶಿ ಸೂತ್ರಗಳನ್ನು ಪಾಲಿಸದೆ ಪ್ರಧಾನಿ ನರೇಂದ್ರ ಮೋದಿ ಅವರ ಹೆಲಿಕಾಪ್ಟರ್ ಪರಿಶೀಲನೆ; ಕರ್ನಾಟಕ ಮೂಲದ ಐಎಎಸ್ ಅಧಿಕಾರಿ ಅಮಾನತು.

ಹೌದು ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ನಿಖಿಲ್‌ ಕುಮಾರಸ್ವಾಮಿ ಗೆಲುವಿಗೆ 150 ಕೋಟಿ ರು. ವೆಚ್ಚ ಮಾಡುವ ಸಂಬಂಧ ವೈರಲ್‌ ಆಗಿದ್ದ ಆಡಿಯೋಗೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಆಡಿಯೋ ಸಂಭಾಷಣೆ ನಡೆಸಿದ ಜೆಡಿಎಸ್‌ ನಾಯಕರನ್ನು ವಿಚಾರಣೆ ನಡೆಸಿದ್ದಾರೆ. ಹಾಲಿ ಸಂಸದ ಶಿವರಾಮೇಗೌಡ ಪುತ್ರ ಚೇತನ್‌ ಗೌಡ ಮತ್ತು ಪಿ.ರಮೇಶ್‌ ಅವರನ್ನು ಇತ್ತೀಚೆಗೆ ಕರೆದು ವಿಚಾರಣೆ ನಡೆಸಿ ಮಾಹಿತಿ ಪಡೆದುಕೊಂಡಿದ್ದಾರೆ ಎಂದು ಹೇಳಲಾಗಿದೆ. ಇಬ್ಬರನ್ನು ಮುಖಾಮುಖಿ ಮಾಡಿಸಿ ವಿಚಾರಣೆ ನಡೆಸಿದಾಗ ಸಂಭಾಷಣೆ ತಮ್ಮದೇ ಎಂದು ಒಪ್ಪಿಕೊಂಡಿದ್ದಾರೆ. ಸ್ಟಾರ್‌ ಹೊಟೇಲ್‌ವೊಂದರಲ್ಲಿ ಡಿನ್ನರ್‌ ವೇಳೆ ನಡೆದ ಮಾತುಕತೆ ಆದಾಗಿದ್ದು, ಈ ವೇಳೆ ಕೆಲವು ನಾಯಕರು ಸಹ ಜೊತೆ ಇದ್ದರು ಎಂದು ರಮೇಶ್‌ ಒಪ್ಪಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಧ್ವನಿ ತಮ್ಮದೇ ಎಂದ ನಾಯಕರು?

Also read: ಮಂಡ್ಯದ ಚುನಾವಣೆಯಲ್ಲಿ ಹಣದ ಸದ್ದು; ಜೆಡಿಎಸ್ ನಿಂದ ಚುನಾವಣೆಗೆ 150 ಕೋಟಿ ಹಂಚಿಕೆ? ಜೆಡಿಎಸ್ ಕಾರ್ಯಕರ್ತರ ಆಡಿಯೋ ಲೀಕ್..

ಮಂಡ್ಯದಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಗೆಲ್ಲಿಸಲು ಸುಮಾರು 150 ಕೋಟಿ ರೂ.ಗಳನ್ನು ಖರ್ಚು ಮಾಡಲಾಗುತ್ತಿದೆ ಎಂಬ ಮಾಹಿತಿಯುಳ್ಳ ಸ್ಫೋಟಕ ಆಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ, ಜೆಡಿಎಸ್ ಪಕ್ಷಕ್ಕೆ ತೀವ್ರ ಮುಜುಗರವನ್ನುಂಟು ಮಾಡಿತ್ತು. ಶಿವರಾಮೇಗೌಡ ಅವರ ಪುತ್ರ ಚೇತನ್ ಮತ್ತು ಜೆಡಿಎಸ್ ಕಾರ್ಯಕರ್ತ ಪಿ ರಮೇಶ್ ಎಂಬುವವರ ನಡುವಿನ ಸಂಭಾಷಣೆಯ ಆಡಿಯೋ ಇದು ಎನ್ನಲಾಗುತ್ತಿದ್ದು, ಈ ಆರೋಪವನ್ನು ಚೇತನ್ ಗೌಡ ತಳ್ಳಿಹಾಕಿದ್ದರು. ಆಡಿಯೋಕ್ಕೆ ಸಂಬಂಧಪಟ್ಟಂತೆ ಚುನಾವಣಾ ಆಯೋಗ ಆಡಿಯೋ ಸಂಭಾಷಣೆ ತಮ್ಮದೇ ಎಂದು ಒಪ್ಪಿಕೊಂಡಿದ್ದರೂ ಸಹ ವಿಧಿವಿಜ್ಞಾನ ಪ್ರಯೋಗಾಲಯದ ವರದಿಯು ಅಧಿಕೃತವಾದ ದಾಖಲೆಯಾಗಲಿದೆ ಎಂದ ಉದ್ದೇಶದಿಂದ ಈ ಕ್ರಮಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ.

ಪ್ರತಿ ಬೂತ್ ಗೆ 5 ಲಕ್ಷ ರೂ.ವರೆಗೆ ಖರ್ಚು?

Also read: ರಾಜಕೀಯ ಪಕ್ಷಗಳಿಗೆ ಸುಪ್ರೀಂ ಆದೇಶ; ಮೇ 30 ರ ಒಳಗೆ ಎಲ್ಲಾ ದೇಣಿಗೆ ಹಣದ ವಿವರಗಳನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಲು ಸೂಚನೆ..

ಆಡಿಯೋದಲ್ಲಿ, ಜೆಡಿಎಸ್ ಅಭ್ಯರ್ಥಿಯನ್ನು ಗೆಲ್ಲಿಸಲು ಪ್ರತಿ ಬೂತ್ ಗೆ 5 ಲಕ್ಷ ರೂ.ವರೆಗೆ ಖರ್ಚು ಮಾಡಲು ಈ ಆಡಿಯೋದಲ್ಲಿ ಸಂಭಾಷಣೆ ನಡೆದಿದೆ. ಆದರೆ ಈ ಕುರಿತು ಪ್ರತಿಕ್ರಿಯೆ ನೀಡಿದ ಶಿವರಾಮೇಗೌಡರು, ಇದರಲ್ಲಿರುವುದು ನನ್ನ ಮಗನ ಧ್ವನಿಯಲ್ಲ, ಇದು ವಿರೋಧಿಗಳ ಕುತಂತ್ರ ಎಂದಿದ್ದರು. ಸುಮಲತಾ ಸಿನಿಮಾ ಕ್ಷೇತ್ರದಿಂದ ಬಂದವರು. ಅವರಿಗೆ ಮಿಮಿಕ್ರಿ ಮಾಡಿಸಿ ಆಡಿಯೋ ಮಾಡಿಸೋದೇನು ಕಷ್ಟದ ಕೆಲಸವಲ್ಲ. ಆದರೆ ನಾನು ನೇರವಾಗಿ ಯಾರ ಮೇಲೂ ಆರೋಪ ಮಾಡಲ್ಲ. ಚುನಾವಣೆಯೊಳಗೆ ಇನ್ನೂ ಎಷ್ಟು ಆಡಿಯೋ ಹೊರಬರಬೇಕೋ! ಈ ಆಡಿಯೋದಲ್ಲಿರುವುದು ಖಂಡಿತ ನನ್ನ ಮಗನ ಧ್ವನಿಯಲ್ಲ ಎಂದು ಶಿವರಾಮೇಗೌಡರು ಆರೋಪಿಸಿದ್ದರು.

ಆಯೋಗಕ್ಕೆ ಸುಮಲತಾ ಪ್ರತಿಕ್ರಿಯೆ

Also read: ಮೋದಿ ವಿರುದ್ದ ಮಾತನಾಡಲು ಹೋಗಿ ಪಾಕಿಸ್ತಾನವನ್ನು ಹಾಡಿ ಹೊಗಳಿದ ಕೈ ಶಾಸಕ; ಆಡಿಯೋ ಬಗ್ಗೆ ಜಾಲತಾಣದಲ್ಲಿ ಬಾರಿ ಚರ್ಚೆ..

ಪಕ್ಷೇತರ ಅಭ್ಯರ್ಥಿಯಾಗಿರುವ ನನಗೆ ಮೈತ್ರಿ ಸರ್ಕಾರದಿಂದ ಹಲವು ತೊಂದರೆಗಳು ಮಾಡಲಾಗಿದೆ. ಅದರಂತೆ ನನ್ನನ್ನು ಸೋಲಿಸಲು ಸಾಕಷ್ಟು ತಂತ್ರಗಳು ನಡೆಯುತ್ತಿವೆ. ಆಡಿಯೋದಲ್ಲಿ ಹೇಳಲಾದ ವಿಷಯದ ಬಗ್ಗೆ ನನಗೆ ಮೊದಲೇ ಸಂಶಯವಿತ್ತು. ಸಾಕಷ್ಟು ಅಕ್ರಮ ನಡೆಯುತ್ತಿದೆ ಎಂಬ ಅನುಮಾನವಿತ್ತು. ಆದ್ದರಿಂದ ನಾನು ಈ ಬಗ್ಗೆ ಚುನಾವಣಾ ಆಯೋಗದ ಬಳಿ ಪ್ರಸ್ತಾಪಿಸಿದ್ದೆ ಎಂದು ಸುಮಲತಾ ಪ್ರತಿಕ್ರಿಯೆ ನೀಡಿದ್ದರು.

ಈ ಎಲ್ಲ ವಿಚಾರವನ್ನು ಪರಿಗಣಿಸಿದ ಚುನಾವಣಾ ಆಯೋಗ ಹಾಲಿ ಸಂಸದ ಶಿವರಾಮೇಗೌಡ ಪುತ್ರ ಚೇತನ್‌ ಗೌಡ ಮತ್ತು ಪಿ.ರಮೇಶ್‌ ಅವರನ್ನು ಇತ್ತೀಚೆಗೆ ಕರೆದು ವಿಚಾರಣೆ ನಡೆಸಿ ಮಾಹಿತಿ ಪಡೆದುಕೊಂಡಿದ್ದಾರೆ ಎಂದು ಹೇಳಲಾಗಿದೆ. ಇಬ್ಬರನ್ನು ಮುಖಾಮುಖಿ ಮಾಡಿಸಿ ವಿಚಾರಣೆ ನಡೆಸಿದಾಗ ಸಂಭಾಷಣೆ ತಮ್ಮದೇ ಎಂದು ಒಪ್ಪಿಕೊಂಡಿದ್ದಾರೆ. ಸ್ಟಾರ್‌ ಹೊಟೇಲ್‌ವೊಂದರಲ್ಲಿ ಡಿನ್ನರ್‌ ವೇಳೆ ನಡೆದ ಮಾತುಕತೆ ಆದಾಗಿದ್ದು, ಈ ವೇಳೆ ಕೆಲವು ನಾಯಕರು ಸಹ ಜೊತೆ ಇದ್ದರು ಎಂದು ರಮೇಶ್‌ ಒಪ್ಪಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.