ಪ್ರತಿಭಟನಾಕಾರರು ಬರುತ್ತಾರೆ, ಹೋಗುತ್ತಾರೆ. ಗೋಮಾಳ ಜಾಗದಲ್ಲೇ ಏಸು ಪ್ರತಿಮೆಯಾಗುತ್ತದೆ; ಡಿ.ಕೆ. ಶಿವಕುಮಾರ್.!

0
235

ಕನಕಪುರದಲ್ಲಿ ಏಸುಕ್ರಿಸ್ತನ ಪ್ರತಿಮೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದನ್ನು ವಿರೋಧಿಸಿ ಇಂದು ಹಿಂದೂ ಜಾಗೃತಿ ವೇದಿಕೆ ವತಿಯಿಂದ ‘ಕನಕಪುರ ಚಲೋ’ ನಡೆಸಲಾಗುತ್ತಿದೆ. ಸಾವಿರಾರು ಸಂಖ್ಯೆಯ ಪ್ರತಿಭಟನಾಕಾರರು ರಸ್ತೆಗಿಳಿದಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್ ಪ್ರತಿಭಟನಾಕಾರರು ಬರುತ್ತಾರೆ, ಹೋಗುತ್ತಾರೆ. ಅದರಿಂದ ಏಸು ಪ್ರತಿಮೆ ನಿರ್ಮಾಣಕ್ಕೆ ಏನೂ ತೊಂದರೆಯಾಗಲ್ಲ. ಕನಕಪುರದಲ್ಲಿ ಶಾಂತಿ ಕಾಪಾಡಬೇಕೆಂದು ನಾನು ಹೇಳಿದ್ದೇನೆ. ನಮ್ಮಲ್ಲಿಂದ ಒಂದು ನರಪಿಳ್ಳೆಯೂ ಪ್ರತಿಭಟನಾ ಸ್ಥಳಕ್ಕೆ ಹೋಗುವುದಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿ ವರದಿ ಕೊಟ್ಟಿದಾರೆ. ಸಂಪುಟ ಸಭೆಯಲ್ಲೇ ಎಲ್ಲವೂ ಕ್ಲಿಯರ್ ಆಗುತ್ತದೆ ಎಂದು ಹೇಳಿದ್ದಾರೆ.


Also read: ಮೋದಿ ಸರ್ಕಾರ ಎರಡನೇ ಕಂತಿನಲ್ಲಿ ರಾಜ್ಯಕ್ಕೆ ನೀಡಿದ ಪರಿಹಾರವೆಷ್ಟು? ಸ್ಪಷ್ಟತೆ ಇಲ್ಲದ ಯಡಿಯೂರಪ್ಪ ಸರ್ಕಾರಕ್ಕೆ ಕೇಂದ್ರದ ಮೇಲೆ ಮೂಡಿದೆ ಅನುಮಾನ.!

ಹೌದು ಕನಕಪುರ ಚಲೋಗೆ ಬಂದಿರುವ ಕಲ್ಲಡ್ಕ ಪ್ರಭಾಕರ್ ಭಟ್ ಯಾರೆಂದು ನನಗೆ ಗೊತ್ತಿಲ್ಲ. ಅಧಿಕಾರಕ್ಕಾಗಿ ಈ ರೀತಿಯ ಹೋರಾಟ ಮಾಡುತ್ತಿದ್ದಾರೆ. ಗೋಮಾಳದಲ್ಲೇ ಏಸು ಪ್ರತಿಮೆ ನಿರ್ಮಾಣವಾಗುವುದರಲ್ಲಿ ಅನುಮಾನ ಬೇಡ, ಬಿಜೆಪಿ ಅಧಿಕಾರದಲ್ಲಿರೋದ್ರಿಂದ ಕೆಲವರು ಹೋಗುತ್ತಾರೆ. ರಾಜಕಾರಣದಲ್ಲಿ ಪ್ರತಿಭಟನಾಕಾರರು ಇರಬೇಕು. ಆಗ ನಾವು ಎಚ್ಚರಿಕೆಯಿಂದ ಕೆಲಸ ಮಾಡಬೇಕಾಗುತ್ತದೆ. ಪ್ರತಿಭಟನಾಕಾರರಿಗೆ ಒಳ್ಳೆಯದಾಗಲಿ ಎಂದಿದ್ದಾರೆ. ನಮ್ಮ ಕಾಂಗ್ರೆಸ್ ಶಾಸಕರು ಅವರಿಗೆ ಅಧಿಕಾರ ಕೊಟ್ಟಿದ್ದಾರೆ. ಮಾನವ ಧರ್ಮಕ್ಕೆ ಜಯವಾಗಲಿ. ಧರ್ಮದಿಂದಲೇ ವಿಶ್ವಕ್ಕೆ ಶಾಂತಿ. ಜಾತಿ, ಧರ್ಮ ಅನ್ನೋದೆಲ್ಲಾ ನನಗೆ ಲೆಕ್ಕಕ್ಕಿಲ್ಲ. ನನ್ನದೇ ಆದ ತತ್ವ, ನಿಷ್ಠೆಯಿಂದ ಕೆಲಸ ಮಾಡುತ್ತಿದ್ದೇನೆ. ಪಾಪ ಅವರಿಗೇನೋ ಅಜೆಂಡಾ ಇರಬೇಕು. ಅದಕ್ಕೆ ಇಲ್ಲಿ ಪ್ರತಿಭಟನೆ ಮಾಡೋಕೆ ಬಂದಿದ್ದಾರೆ. ಅವರಿಗೆ ಒಳ್ಳೆಯದಾಗಲಿ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಬಿಜೆಪಿ ಪ್ರತಿಭಟನೆ ಕಂಡು ಗಡಗಡ ನಡುಗುತ್ತಿದ್ದೇನೆ”


Also read: ಹೈಕಮಾಂಡ್ ಸೂಚನೆಯಂತೆ 9 ಶಾಸಕರಿಗೆ ಮಾತ್ರ ಮಂತ್ರಿ ಸ್ಥಾನ? ಮಂತ್ರಿಗಿರಿ ಕೊಡಿಸಿ ಎಂದು ಸ್ವಾಮೀಜಿಗಳಿಗೆ ದುಂಬಾಲು ಬಿದ್ದ ಎಂಟಿಬಿ, ವಿಶ್ವನಾಥ್​.!

ಕನಕಪುರ ಚಲೋ ನೋಡಿ ಬಿಜೆಪಿ ಪ್ರತಿಭಟನೆಯಿಂದ ನನಗೆ ನಡುಕ ಶುರುವಾಗಿದೆ. ಈಗಲೂ ನಡುಗುತ್ತಿದ್ದೇನೆ. ಅವರಿಗೇ ಹೆದರಿ ಮನೆಯಿಂದ ಹೊರಗಡೆ ಬಂದೆ. ಮಾಗಡಿ ರಸ್ತೆಯಲ್ಲಿ ನಾಡಪ್ರಭು ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಕ್ರೈಸ್ತರು 5 ಎಕರೆ ಜಮೀನು ನೀಡಿದ್ದಾರೆ. ರಾಜಕಾರಣ ಮಾಡಬೇಕೆಂದು ಬಿಜೆಪಿಗರು ಹೀಗೆ ಮಾಡುತ್ತಿದ್ದಾರೆ. ಅವರ ಬಳಿ ಅಧಿಕಾರ ಇದೆ ಮಾಡಲಿ. ಎಲ್ಲಿಂದ ಎಷ್ಟು ಜನ ಬಂದಿದ್ದಾರೆ ಎಂಬುದು ನನಗೆ ಗೊತ್ತಿದೆ. ಯಾರು ಜನರನ್ನು ಕರೆಸಿದ್ದಾರೆ ಎನ್ನುವುದು ನನ್ನ ಗಮನಕ್ಕೆ ಬಂದಿದೆ. ಅವರಿಗೆ ಮಂತ್ರಿಯಾಗಬೇಕು ಎನ್ನುವ ಆಸೆಯಿಂದ ಹೀಗೆ ಮಾಡುತ್ತಿದ್ದಾರೆ ಮಾಡಲಿ ಬಿಡಿ. ರಾಮನಗರ, ಕನಕಪುರ, ಚನ್ನಪಟ್ಟಣದಿಂದ ಎಷ್ಟು ಗಾಡಿಗಳಲ್ಲಿ ಜನ ಬಂದಿದ್ದಾರೆ ಎಂಬ ಬಗ್ಗೆ ರಾಮನಗರದ ಮಾಜಿ ಸಚಿವರೇ ನನಗೆ ಮಾಹಿತಿ ನೀಡಿದ್ದಾರೆ. ಏನೋ ಮಾಡಿಕೊಂಡು ಹೋಗುತ್ತೇವೆ ತಪ್ಪಾಗಿ ತಿಳಿಯಬೇಡಿ ಎಂದಿದ್ಧಾರೆ. ಸಿ.ಪಿ ಯೋಗೇಶ್ವರ್​​ ನನಗೆ ಫೋನ್​​ ಮಾಡಿದ್ರು. ಎಲ್ಲಿಂದ ಎಷ್ಟು ಜನ ಬರುತ್ತಿದ್ದಾರೆ ಎಂದು ಹೇಳಿದ್ದರು. ಅವರಿಗೆ ಮಂತ್ರಿ ಆಗಬೇಕೆಂಬ ಆಸೆ ಇದೆ, ಆಗಲಿ ಬಿಡಿ ಎಂದರು. ಇನ್ನು ರಾಜಕಾರಣದಲ್ಲಿ ನಮ್ಮ ನೆರಳನ್ನೂ ನಂಬಬಾರದು. ರಾತ್ರಿ ಆದರೆ ನಮ್ಮ ನೆರಳೇ ನಮ್ಮೊಂದಿಗಿರಲ್ಲ.


Also read: ರ್‍ಯಾಪಿಡೋ ಬೈಕ್ ಸೇವೆಯ ನೇಪದಲ್ಲಿ ನಡೆಯುತ್ತಿದ್ದಿಯಾ ಹುಡುಗಿಯರನ್ನು ಅಪಹರಿಸುವ ಯತ್ನ? ಇಂತಹ ಆಪತ್ತಿನಲ್ಲಿ ಸಿಕ್ಕು ಸಿನಿಮಯ ರೀತಿಯಲ್ಲಿ ತಪ್ಪಿಸಿಕೊಂಡ ಯುವತಿ.!

ನನ್ನ ಕಾರ್ಯಕರ್ತರಿಗೆ ಹೇಳಿದ್ದೇನೆ. ಯಾರು ಏನೇ ಮಾತಾಡಿದರು ಸುಮ್ಮನಿರಬೇಕು. ಎಷ್ಟೇ ಬೈದರು ಸುಮ್ಮನೆ ಕೇಳಿಸಿಕೊಳ್ಳಬೇಕು. ಯಾರು ಗಲಾಟೆ ಮಾಡಬೇಡಿ. ಅವರು ಏನು ಬೇಕಾದರೂ ಮಾಡಿಕೊಳ್ಳಲಿ ಎಂದು ಹೇಳಿದ್ದೇನೆ ಎಂದರು ಡಿಕೆಶಿ ಅವರು ಹೇಳಿದ್ದಾರೆ.’ಕನಕಪುರ ಚಲೋ’ಗೆ ಕರೆ ನೀಡಲಾಗಿದ್ದು, ಬೆಂಗಳೂರು, ರಾಮನಗರ, ಮಂಡ್ಯ, ಮೈಸೂರು, ತುಮಕೂರಿನಿಂದ 10 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಭಾಗಿಯಾಗುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಕಪಾಲಬೆಟ್ಟದ ಬಳಿ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಕನಕಪುರ ನಗರದಲ್ಲಿ ಬೃಹತ್ ಪ್ರತಿಭಟನೆ ಹಿನ್ನೆಲೆ ಕಪಾಲಬೆಟ್ಟ, ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ವಹಿಸಲಾಗಿದೆ. ಪೊಲೀಸರು ಇಂದು ಕಪಾಲ ಬೆಟ್ಟಕ್ಕೆ ಹೋಗುವವರಿಗೆ ಸಂಪೂರ್ಣ ನಿಷೇಧ ಹೇರಿದ್ದಾರೆ. ಭದ್ರತೆಗೆ 1 ಸಾವಿರಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದೆ.