ಜಗತ್ತಿನಲ್ಲೇ ಬಿಸಿನೆಸ್-ನಲ್ಲಿ ಅತ್ಯಂತ ಯಶಸ್ವಿ ಸಮುದಾಯವಾದ ಯಹೂದೀ(ಇಸ್ರೇಲ್)ಗಳ ಬಿಸಿನೆಸ್ ತಂತ್ರಗಳನ್ನು ತಿಳಿದುಕೊಂಡು ನೀವೂ ಯಶಸ್ವಿಯಾಗಿ!!

0
829

ಶ್ರೀಮಂತರಾಗುವ ಆಸೆ ಪ್ರತಿಯೋಬ್ಬರಲ್ಲಿವೂ ಇರುತ್ತೆ, ಆದರೆ ಅದಕ್ಕೆ ಬೇಕಾದ ಶ್ರಮದ ಜೊತೆಗೆ ಕೆಲವು ಸೂತ್ರಗಳು ಅನುಸರಿಸಬೇಕಾಗುತ್ತೆ. ಆದರೆ ಕೆಲವರು ಹಿಂದೆ- ಮುಂದೆ ವಿಚಾರಿಸದೇ ಹಣದ ಹೂಡಿಕೆ ಮಾಡಿ ಇರುವ ನೆಮ್ಮದಿ ಮತ್ತು ಹಣವನ್ನು ಕಳೆದುಕೊಳ್ಳುತ್ತಾರೆ. ಆದರೆ ಮತ್ತೆ ಕೆಲವರಿಗೆ ಹಣ ಹೂಡಿಕೆ ಮಾಡಿದರೂ ವಾಪಸ್ ಬರುತ್ತದೆ ಎಂಬ ನಂಬಿಕೆಯು ಇರುವುದಿಲ್ಲ. ಅದರಲ್ಲಿ ಬಹುತೇಕರು ದುಡ್ಡಿಲ್ಲ ಅಂತಾ ಕೊರಗುತ್ತಾ ಕೂರುತ್ತಾರೆ. ಅದಕ್ಕಾಗಿ ಈ ಕ್ಷಣದಿಂದಲೇ ಕೆಲಸ ಮಾಡಲು ಶುರುಮಾಡಬೇಕು. ವರ್ಕಹೋಲಿಕ್ ಮೆಂಟ್ಯಾಲಿಟಿಯನ್ನು ಬೆಳೆಸಿಕೊಳ್ಳಬೇಕು. ಆಲಸಿತನವನ್ನು ಸಾಯಿಸಿ ಮೈಮುರಿದು ದುಡಿಯಬೇಕು. ಅದಕ್ಕಾಗಿ ಯಹೂದಿಗಳ ಈ 10 ಸೂತ್ರಗಳನ್ನು ಅನುಸರಿಸಿದರೆ ಶ್ರೀಮಂತರಾಗಲು ಸಾದ್ಯವಾಗುತ್ತೆ.

1. ನಿಮ್ಮನ್ನು ನೀವು ಅರಿತುಕೊಳ್ಳುವುದು ಮುಖ್ಯ:

ಯಾವುದೇ ವ್ಯವಹಾರ ಬಿಸಿನೆಸ್ ಮಾಡಿ ಹಣ ಸಂಪಾದನೆ ಮಾಡಿ ಶ್ರೀಮಂತರಾಗಬೇಕು ಎನ್ನುವರು ಮೊದಲು ನಿಮ್ಮನ್ನು ನೀವು ತಿಳಿದುಕೊಳ್ಳುವುದು ತುಂಬಾ ಮುಖ್ಯ. ಜನರು ಸಾಮ್ಯತೆ ಇದ್ದರೆ ಮಾತ್ರ ನಿಮ್ಮೊಂದಿಗೆ ವ್ಯವಹಾರ ಮಾಡಲು ಬಯಸುತ್ತಾರೆ. ಅದರಂತೆ ನಿಮ್ಮ ಕೆಲಸದ ಮೇಲೆ ನಿಮಗೆ ಜವಾಬ್ದಾರಿ ಹೆಚ್ಚುತ್ತೆ. ಯಾವುದೇ ವ್ಯವಹಾರ ಮಾಡುವ ವ್ಯಕ್ತಿಯಲ್ಲಿ ನಂಬಿಕೆ, ನಿರ್ಣಯ, ವ್ಯಕ್ತಿತ್ವ, ದೃಢ ನಿರ್ಧಾರ, ಸ್ಥಿರತೆಯನ್ನು ಬಯಸುತ್ತಾರೆ. ಶಿಸ್ತು ಮತ್ತು ಶ್ರದ್ಧೆಯನ್ನು ಹೊಂದಿರುವ ಜನರೊಂದಿಗೆ ವ್ಯವಹಾರ ಮಾಡುತ್ತಾರೆ.

2. ಹಾಸಿಗೆ ಇದ್ದಷ್ಟೇ ಕಾಲು ಚಾಚಿ:

ಮೊದಲಿನಿಂದ ಕೇಳಿಕೊಂಡ ಬಂದ ಗಾದೆಯಂತೆ ಬದುಕಿದರೆ ಈಗಿನ ಕಾಲದಲ್ಲಿ ಜೀವನ ಮಾಡುವುದು ಶ್ರಿಮಂತರಾಗುವುದು ಅಷ್ಟು ಸುಲಭದ ಕೆಲಸವಲ್ಲ, ಹಾಸಿಗೆ ಇದ್ದಷ್ಟೇ ಕಾಲು ಚಾಚಿ ಒದ್ದಾಡುವ ಬದಲು, ಹಾಸಿಗೆಯನ್ನು ಉದ್ದ ಮಾಡಿ ನಂತರ ಬೇಕಾದಂತೆ ಕಾಲು ಚಾಚಿ ಮಲಗುವ ಜಾಣತನವನ್ನು ನಾವು ಕಲಿಯಬೇಕು. ನಿಮ್ಮ ದಿನನಿತ್ಯದ ಖರ್ಚುಗಳನ್ನು ಕಡಿಮೆ ಮಾಡಿ ಕೊರಗುವುದಕ್ಕಿಂತ ನಿಮ್ಮ ಆದಾಯವನ್ನು ಹೆಚ್ಚಿಸಲು ಸ್ವಲ್ಪ ಹೆಚ್ಚಿಗೆ ಕೆಲಸ ಮಾಡಬೇಕು.

3. ವ್ಯವಹಾರದಲ್ಲಿ ಪ್ರಾಮಾಣಿಕವಾಗಿ ಮತ್ತು ನೈತಿಕತೆ ಬೆಳಸಿಕೊಳ್ಳಿ:

ಜನರು ಬಯಸುವ ಅಥವಾ ಅಗತ್ಯವಿರುವ ಉತ್ಪನ್ನ ಅಥವಾ ಸೇವೆಯನ್ನು ನೀಡಬೇಕು. ಇದರಿಂದ ಉತ್ತಮ ಜಗತ್ತನ್ನು ನಿರ್ಮಿಸಲು ಸಾಧ್ಯ. ಜೊತೆಗೆ ನಿಮ್ಮ ಉತ್ಪನ್ನ ಅಥವಾ ಸೇವೆ ಜನರನ್ನು ಹೆಚ್ಚು ಸಂತೋಷಪಡಿಸುತ್ತದೆ ಎಂದು ಯಹೂದಿಗಳ ಸೂತ್ರ ತಿಳಿಸುತ್ತೇ. ಅದರಂತೆ ನೀವು ಮೌಲ್ಯಯುತವಾದ ವ್ಯವಹಾರವನ್ನು ಮಾಡಿದರೆ, ಹಣವು ಅದಾಗಿಯೇ ನಿಮ್ಮತ್ತ ಹುಡುಕಿಕೊಂಡು ಬರುತ್ತದೆ ಎಂಬುದು ಇವರ ನಂಬಿಕೆ.

4. ಸಕ್ರಿಯವಾಗಿ ಸಂಪರ್ಕವನ್ನು ಬೆಳೆಸಿಕೊಳ್ಳಿ:

ನೀವು ಸಾಧ್ಯವಾದಷ್ಟು ಜನರನ್ನು ಭೇಟಿ ಮಾಡುವುದು ಮುಖ್ಯ. ಇತರ ಜನರೊಂದಿಗೆ ಸಕ್ರಿಯವಾಗಿ ತೊಡಗಿಸಿಕೊಳ್ಳುವುದರಿಂದ ಮಾತ್ರ, ಸಂಪತ್ತಿನ ಸಂದರ್ಭಗಳನ್ನು ಸೃಷ್ಟಿಸಬಹುದು ಎಂಬುದು ಯಹೂದಿಗಳ ತತ್ವವಾಗಿದೆ. ಜನರು ಸಂಬಂಧ ಹೊಂದಿರುವ ಇತರರೊಂದಿಗೆ ಮಾತ್ರ ವ್ಯವಹಾರ ಮಾಡಲು ಒಲವು ತೋರುತ್ತಾರೆ ಎಂಬುದು ಇವರ ಧ್ಯೇಯವಾಗಿದೆ. ಅದರಂತೆ ನೀವು ಅಡ್ಡ ದಾರಿ ಮೂಲಕ ನಕಲಿ ಸಂಬಂಧಗಳು ಹೊಂದಿದ್ದರೆ ಅವು ನಿಮ್ಮನ್ನು ಜೀವನದಲ್ಲಿ ಎಲ್ಲಿಗೂ ಕರೆದೊಯ್ಯುವುದಿಲ್ಲ. ಹಾಗಾಗಿ ಪ್ರಾಮಾಣಿಕ ಸಂಬಂಧ ಹೊಂದಿರಿ.

5. ಮೆದುಳನ್ನು ಸಹ ದಂಡಿಸಿ:

ದೇಹವನ್ನು ದಂಡಿಸುವುದರ ಜೊತೆಗೆ ಸ್ವಲ್ಪ ಮೆದುಳನ್ನು ಸಹ ದಂಡಿಸಬೇಕು. ಆನೆಯಾಗಿ ಕಬ್ಬನ್ನು ತಿನ್ನುವುದಕ್ಕಿಂತ ಇರುವೆಯಾಗಿ ಅನಾಯಾಸದಿಂದ ಸಕ್ಕರೆ ತಿನ್ನುವುದು ಹೇಗೆ ಎಂಬುದರ ಬಗ್ಗೆ ಯೋಚಿಸಬೇಕು. ಕ್ವಾಂಟಿಟಿಗಿಂತ ಕ್ವಾಲಿಟಿಗಾಗಿ ಕೆಲಸ ಮಾಡಬೇಕು. ದಿನದಲ್ಲಿ ಎಷ್ಟು ಗಂಟೆ ಕೆಲಸ ಮಾಡಿದಿರಿ ಎಂಬುದು ಮುಖ್ಯವಲ್ಲ. ಎಷ್ಟು ಎಕ್ಸಲೆಂಟಾಗಿ ಕೆಲಸ ಮಾಡಿದಿರಿ ಎಂಬುದು ಮುಖ್ಯ.

6. ಪರಿಪೂರ್ಣವಾಗಲು ಪ್ರಯತ್ನಿಸಬೇಡಿ:

ಜೀವನ, ಹೂಡಿಕೆ ಮತ್ತು ವ್ಯವಹಾರವು ಎಂದಿಗೂ ಪರಿಪೂರ್ಣವಾಗುವುದಿಲ್ಲ. ದಾರಿಯುದ್ದಕ್ಕೂ ಹಲವು ಸಮಸ್ಯೆಗಳು ಮತ್ತು ಅಪೂರ್ಣತೆಗಳು ಇರುತ್ತವೆ. ಆದ್ದರಿಂದ ಇದರ ಬಗ್ಗೆ ಹೆಚ್ಚು ಚಿಂತಿಸದೇ ಮುಂದುವರಿಯಿರಿ. ಅದರಂತೆ ಜೀವನದಲ್ಲಿ ನಾಯಕನಾಗಿರಿ, ಯಹೂದಿಗಳ ಸಂಪ್ರದಾಯವು ಚಿಕ್ಕಂದಿನಿಂದಲೇ ನಾವೆಲ್ಲರೂ ನಾಯಕರೆಂಬ ಮನೋಭಾವವನ್ನು ಕಲಿಸುತ್ತದೆ. ಯಹೂದಿ ಸಂಪ್ರದಾಯದ ಪ್ರಕಾರ ನಾಯಕನಾದವನು ಅನುಯಾಯಿಗಳನ್ನು ಹೊಂದಿರುವವನು. ನೀವು ಅನುಯಾಯಿಗಳು ಇಲ್ಲದೆ ನಾಯಕನಾಗಲು ಸಾಧ್ಯವಿಲ್ಲ.

7. ಹಣದ ಮಹತ್ವ ಅರಿತುಕೊಳ್ಳಿ:

ಯಾವುದೇ ವ್ಯವಹಾರ ಅಥವಾ ಹಣ ಎಂಬುದು ನಂಬಿಕೆಯ ಮೇಲೆ ನಿರ್ಮಿಸಲಾದ ವ್ಯಾಪಾರದ ಸರಳ ವ್ಯವಸ್ಥೆಯಾಗಿದೆ. ವಿಶ್ವಾಸಾರ್ಹವಲ್ಲದ ಯಾವುದೇ ರಾಷ್ಟ್ರಗಳು ದುರ್ಬಲ ಹಣವನ್ನು ಹೊಂದಿರುತ್ತವೆ. ಆದ್ದರಿಂದ ಹಣವು ನೀವು ಇತರರಿಗಾಗಿ ಏನು ಮಾಡಿದ್ದೀರಿ ಎಂಬುದರ ಭೌತಿಕ ನಿರೂಪಣೆಯಾಗಿದೆ. ಹೆಚ್ಚು ಹಣ ಹೊಂದಿದ್ದೀರಿ ಎಂದಾದರೆ ನೀವು ಹೆಚ್ಚು ಬದಲಾವಣೆ ತಂದಿದ್ದೀರಿ ಎಂದರ್ಥ. ಅದಕ್ಕಾಗಿ ಸರಿಯಾದ ಮಹತ್ವ ಅರಿತುಕೊಳ್ಳುವುದು ಉತ್ತಮ.

8. ಬರೀ ದುಡ್ಡಿಗಾಗಿ ಕೆಲಸ ಮಾಡಬೇಡಿ:

ಜನರು ತಾವು ಮಾಡುವ ಕೆಲಸವು ಹಣಕ್ಕೆ ಸೀಮಿತವಾಗಿರಬೇಕು ಎಂದು ಕೆಲಸ ಮಾಡುತ್ತಾರೆ. ಆದರೆ ನೈಜ ಕತೆ ಏನೆಂದರೆ ಆತ್ಮತೃಪ್ತಿ ಖುಷಿಗಾಗಿ ಕೆಲಸ ಮಾಡಿ. ನಿಮಗೆ ಇಷ್ಟವಿರುವ ಕೆಲಸವನ್ನೇ ಮಾಡಿ. ಇಷ್ಟವಿಲ್ಲದ ಕೆಲಸವನ್ನು ಕಾಟಾಚಾರಕ್ಕೆ ಮಾಡಿ ಎನರ್ಜಿ ಜೊತೆಗೆ ಟೈಮ್ ವೆಸ್ಟ್ ಮಾಡಬೇಡಿ. ನಿಮ್ಮ ಕೆಲಸವನ್ನು ನೀವು ಪ್ರೀತಿಸಿದರೆ, ದುಡ್ಡು ನಿಮ್ಮನ್ನು ಪ್ರೀತಿಸುತ್ತದೆ. ಮಲ್ಟಿಪಲ್ ಮೂಲಗಳಿಂದ ನಿಮಗೆ ದುಡ್ಡು ಬರುವ ರೀತಿ ನಿಮ್ಮ ಜೀವನವನ್ನು ರೂಪಿಸಿಕೊಳ್ಳಿ. ನೀವು ಬಿಲೆನಿಯರ ಆಗಲು ನಿಮಗೆ ಒಂದು ಬ್ರಿಲಿಯಂಟ್ ಐಡಿಯಾ ಸಾಕು.

9. ಬದಲಾವಣೆಗಳನ್ನು ಸ್ವೀಕರಿಸಿ

ಸರಳವಾಗಿ ನಾಯಕನಾದವನು ಬದಲಾವಣೆಗಳನ್ನು ಸ್ವೀಕರಿಸಬೇಕು. ವ್ಯವಹಾರದಂತೆ ಜಗತ್ತು ಕ್ರಿಯಾತ್ಮಕವಾಗಿದೆ, ಹಾಗಾಗಿ ಬದಲಾವಣೆಗೆ ಮುಕ್ತ ಮನಸ್ಸನ್ನು ಇಟ್ಟುಕೊಳ್ಳಿ ಇದರಿಂದ ಸಮೃದ್ಧಿಯನ್ನು ತರುತ್ತದೆ. ಒಂದು ವೇಳೆ ಬದಲಾವಣೆಯನ್ನು ಸ್ವೀಕರಿಸದಿದ್ದರೆ, ಅಲ್ಪಾವಧಿಯಲ್ಲಿ ಪ್ರಕ್ಷುಬ್ದತೆಯನ್ನು ಉಂಟುಮಾಡಬಹುದು.

10. ದಾನ ಮಾಡಬೇಕು:

ದಾನ ಮಾಡುವುದು ವ್ಯಕ್ತಿಯ ಅಭಿವೃದ್ಧಿಗೆ ಒಂದು ಮೆಟ್ಟಿಲು ಅಂತಲೇ ಹೇಳಬಹುದು. ಅದಕ್ಕಾಗಿಯೇ ಶ್ರೀಮಂತ ಯಹೂದಿಗಳು ತಮ್ಮ ಹಣದಲ್ಲಿ ಶೇಕಡಾ 10ರಷ್ಟನ್ನು ದತ್ತಿ ಅಥವಾ ಇತರ ವಿಧಾನಗಳಿಗೆ ನೀಡಬೇಕು ಎಂಬ ಸೂತ್ರವನ್ನು ಅನುಸರಿಸುತ್ತಾರೆ. ಇದು ತರ್ಕಬದ್ಧವಲ್ಲದಿದ್ದರೂ ನಿಮ್ಮ ಹಣವನ್ನು ನೀವು ಬಿಟ್ಟುಕೊಟ್ಟಾಗ, ಹೆಚ್ಚಿನದು ನಿಮಗೆ ಹಿಂತಿರುಗುತ್ತದೆ. ಅದಕ್ಕಾಗಿ ಪ್ರತಿಯೊಬ್ಬರೂ ಹಣ ತಮ್ಮ ಜೀವನದಲ್ಲಿ ಈ ಸೂತ್ರಗಳನ್ನು ಅನುಸರಿಸಿದರೆ ಸರಳವಾಗಿ ಶ್ರೀಮಂತರಾಗಬಹುದು.

Also read: ಬಿಜಿನೆಸ್-ನಲ್ಲಿ ಯಶಸ್ವಿಯಾಗಲು ಮಾರವಾಡಿಗಳ ಆದಾಯ ಮೂಲಗಳನ್ನ ತಿಳಿದರೆ ನೀವೂ ಕೂಡ ಯಾವುದೇ ನಷ್ಟವಿಲ್ಲದೆ ಯಶಸ್ವಿಯಾಗಬಹುದು.!