ಜಿಯೋ ಪ್ರೈಮ್ ಆಫರ್ ದಿನಕ್ಕೆ ರೂ.10. ತಿಂಗಳಿಗೆ ರೂ.300

0
906

ರಿಲಯನ್ಸ್ ಜಿಯೋ ಅಧ್ಯಕ್ಷ ಮುಖೇಶ್ ಅಂಬಾನಿ ಮಂಗಳವಾರ ಉಚಿತ ಹ್ಯಾಪಿ ನ್ಯೂ ಇಯರ್ ಅಫರ್ ಮಾರ್ಚ್ 31 ರಂದು ಕೊನೆಗೊಳ್ಳುತ್ತದೆ ಎಂದು ಜಿಯೋ ಪ್ರೈಮ್ ಆಫರ್ ಜಾರಿಗೆ ಬರುಹುದೆಂದು ತಿಳಿಸಿದ್ದರು. ಈಗ ಹೊಸ ಆಫರ್ ಜಿಯೋದ ಆರಂಭಿಕ ಗ್ರಾಹಕರನ್ನು ಗುರಿಯಾಗಿಸಿದ್ದು ಅವರು ಒಂದು ಸಲಹ ಶುಲ್ಕವಾಗಿ ರೂ.99 ಪಾವತಿಸಿದಲ್ಲಿ ಮುಂದಿನ 12 ತಿಂಗಳುಗಳ ಕಾಲ ಉಚಿತ ಸೇವೆಯನ್ನು ಉಪಯೋಗಿಸಬಹುದಾದಿಗೆ.

ಜಿಯೋಗೆ 170 ದಿನಗಳಲ್ಲಿ 100 ಮಿಲಿಯಕ್ಕೂ ಅಧಿಕ ಗ್ರಾಹಕರು ದೊರೆತಿದ್ದಾರೆಂದು ಹೇಳಿದ ಅಂಬಾನಿ ಇದು ಭಾರತ ಹಾಗೂ ಭಾರತೀಯರ ಸಾಧನೆ ಎಂದು ಹೇಳಿಕೊಂಡರು.

ಜನವರಿ 2017ರಲ್ಲಿ ಜಿಯೋ ಗ್ರಾಹಕರು 100 ಕೋಟಿ ಜಿಬಿಯೋ ಅಧಿಕ ಡಾಟಾ ಉಪಯೋಗಿಸಿದ್ದಾರೆ. ಇದನ್ನು ಪರಿಗಣಿಸಿದರೆ ಪ್ರತಿ ದಿನಕ್ಕೆ 3.3 ಕೋಟಿಗೂ ಅಧಿಕ ಜಿಬಿ ಉಪಯೋಗದಲ್ಲಿ ಭಾರತ ನಂಬರ್ 1 ದೇಶವಾಗಿ ಹೊರಹೊಮ್ಮಿದೆ ಎಂದು ಅವರು ತಿಳಿಸಿದ್ದಾರೆ.

ಜಿಯೊ ಟ್ಯಾರಿಫ್ ಪ್ಲಾನುಗಳು ಎಪ್ರಿಲ್ 1ರಿಂದ ಜಾರಿಗೆ ಬರುವುದು ಹಾಗೂ ಯಾವುದೇ ಹಿಡ್ಡನ್ ಚಾರ್ಜಸ್ ಇರುವುದಿಲ್ಲವೆಂದು ಅವರು ತಿಳಿಸಿದ್ದಾರೆ. ಮಾರ್ಚ್ 31ರ ಮೊದಲು ಸೇರುವ ಸದಸ್ಯರಿಗೆ ಒಂದು ಸಲದ ಸದಸ್ಯತ್ವ ಶುಲ್ಕವಾಗಿ ರೂ. 99 ವಿಧಿಸಲಾಗುವುದು ನಂತರ ಜಿಯೋ ಪ್ರೈಮ್ ಸದಸ್ಯತ್ವವಾಗುದು ಎಂದು ಅವರು ಹೇಳಿದರು.

ಒಂದು ವರ್ಷದ ನಂತರ ಜಿಯೋ ಪ್ರೈಮ್ ಸದಸ್ಯರು ತಮ್ಮ ಸದಸ್ಯತ್ವವನ್ನು ದಿನಕ್ಕೆ ರೂ.10. ಅಥವಾ ತಿಂಗಳಿಗೆ ರೂ.300 ನೀಡಿ ಉಳಿಸಿಕೊಳ್ಳಬಹುದಾಗಿದೆ ಎಂದು ಅಂಬಾನಿ ಮಾಹಿತಿ ನೀಡಿದ್ದಾರೆ.