ಉದ್ಯೋಗದಲ್ಲಿನ ಸಮಸ್ಯೆಯೇ? ಜ್ಯೋತಿಷ್ಯ ಶಾಸ್ತ್ರದಲ್ಲಿದೆ ನೋಡಿ ಸರಳ ಪರಿಹಾರ; ನೀವೂ ಇದನ್ನು ಅನುಸರಿಸಿ ನೋಡಿ ನಿರೀಕ್ಷೆಗೂ ಮೀರಿದ ಫಲ ಸಿಗುತ್ತೆ.!

0
1146

Astrology in kannada | kannada news

ಪ್ರತಿಯೊಬ್ಬರೂ ಉದ್ಯೋಗ ಮಾಡಿದರೆ ಹೊಟ್ಟೆಗೆ ಅನ್ನ, ನೆತ್ತಿಗೆ ಎಣ್ಣೆ ಸಿಗಲು ಸಾಧ್ಯ. ಅದಕ್ಕಾಗಿಯೇ ಜೀವನದಲ್ಲಿ ಒಳ್ಳೆಯ ಕೆಲಸ ಹಿಡಿಯುವುದು ಬಹುಮುಖ್ಯವಾಗಿರುತ್ತೆ, ಆದರೆ ಕೆಲವು ದೋಷಗಳಿಂದ ಉದ್ಯೋಗದಲ್ಲಿ ಹಲವು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಅದರಂತೆ ಕೆಲಸದಲ್ಲಿ ಮೂಡುವಂತಹ ಕೆಲವು ಕಠಿಣ ಸಮಸ್ಯೆಗಳು ನಮ್ಮ ಮನಸ್ಥಿತಿ ಹಾಳು ಮಾಡುವ ಸಾಧ್ಯತೆ ಇದೆ. ತಮ್ಮ ವರ್ಚಸ್ಸಿನಂತೆ ಉದ್ಯೋಗ ಪಡೆಯಲು ಫಲವಾಗಬಹುದು.ತಮಗಿರುವ ಜ್ಞಾನದಂತೆ ನಿರೀಕ್ಷಿತ ಉದ್ಯೋಗ ಸಿಗದೆ ಕಂಗಾಲಾಗಬಹುದು. ಉದ್ಯೋಗದಲ್ಲಿನ ಕಿರಿಕಿರಿ ಮನಶಾಂತಿ ಇಲ್ಲವಾಗಿಸಬಹುದು. ಇದಕ್ಕೆ ಜೋತಿಷ್ಯದ ಪ್ರಕಾರ ಪರಿಹಾರವನ್ನು ಕಂಡುಕೊಳ್ಳಬಹುದು.

ಹೌದು ನಾವು ಮಾಡುವ ಕಾಯಕ ನಮ್ಮ ಜೀವನದ ಏಳಿಗೆಗೆ, ಇಷ್ಟಾರ್ಥಸಿದ್ಧಿಗಳಿಗೆ ಮತ್ತು ಕುಟುಂಬದ ಬೇಕು-ಬೇಡಗಳ ಪೂರಕ ವ್ಯವಸ್ಥೆಗೆ ಕಾರಣವಾಗಿರುತ್ತದೆ. ಆದರೆ ಕೆಲಸದಲ್ಲಿ ಮೂಡುವಂತಹ ಕೆಲವು ಕಠಿಣ ಸಮಸ್ಯೆಗಳು ನಮ್ಮ ಮನಸ್ಥಿತಿ ಹಾಳು ಮಾಡುವ ಸಾಧ್ಯತೆ ಇದೆ. ಉದ್ಯೋಗದಲ್ಲಿ ಅನಗತ್ಯವಾಗಿ ಸಹೋದ್ಯೋಗಿಗಳಿಂದ ಕಿರಿಕಿರಿ ಹೆಚ್ಚಾಗಬಹುದು, ಅಥವಾ ನಾವು ಮಾಡುವ ಕೆಲಸಕ್ಕೆ ಸರಿಯಾದ ಮನ್ನಣೆ ಸಿಗದೇ ಇರಬಹುದು, ಹಾಗೂ ನಿಗದಿತ ಸಮಯದಲ್ಲಿ ನೀಡಿರುವ ಜವಾಬ್ದಾರಿಯನ್ನು ಪೂರೈಸುವಲ್ಲಿ ವಿಫಲವಾಗಬಹುದು, ಮತ್ತು ಪ್ರಮೋಷನ್ ಮತ್ತಿತರ ಸ್ಥಾನಗಳಲ್ಲಿ ಅಭಿವೃದ್ಧಿಯಾಗುವ ಬಯಕೆಗೆ ಕೆಲವರಿಂದ ಸಮಸ್ಯೆ ಬರಬಹುದು.

ಹೀಗೆ ಹತ್ತು ಹಲವಾರು ಕಾರಣಗಳಿಂದ ಕೆಲಸದ ವಿಷಯವಾಗಿ ಸಮಸ್ಯೆ ಇರಬಹುದು ಇಂತಹ ಸಂದಿಗ್ಧ ಸ್ಥಿತಿಗಳಿಗೆ ಉತ್ತಮವಾದ ಫಲಕಾರಿ ಕಾಣಲು ಜ್ಯೋತಿಷ್ಯ ಶಾಸ್ತ್ರದಲ್ಲಿ ಸರಳ ಪರಿಹಾರ ಕಂಡುಕೊಳ್ಳಬಹುದು.

source: getbackyourlostlove.files.wordpress.com

1. ಕೆಲಸದ ಸ್ಥಳದಲ್ಲಿ ಸಮಸ್ಯೆ ಇದ್ದರೆ ಹೆಬ್ಬೆರಳ ಗಾತ್ರಕ್ಕಿಂತಲೂ ಚಿಕ್ಕದಿರುವ ಗಣಪತಿಯ ವಿಗ್ರಹವನ್ನು ಮನೆಯಲ್ಲಿ 21ದಿನಗಳ ಕಾಲ ಪೂಜಿಸಿ. ನಂತರ ನಿಮ್ಮ ಕೆಲಸದ ಜಾಗದಲ್ಲಿ ಇಡುವುದು.

2. ಕೆಲಸ ಸಿಗದೇ ನೊಂದಿದ್ದರೆ ನೀವು ಗಾಯತ್ರಿ ಮಂತ್ರವನ್ನು ದಿನ 11 ಬಾರಿ ಜಪಿಸಬೇಕು ಹಾಗೂ ಪ್ರತಿ ಮಂಗಳವಾರ ಸುಬ್ರಹ್ಮಣ್ಯಸ್ವಾಮಿಯ ಆರಾಧನೆ ಮಾಡಿ.

3. ಒಳ್ಳೆಯ ಸ್ಥಾನ ಹಾಗೂ ಅಭಿವೃದ್ಧಿ ಪಡೆಯಲು ಮುಖ್ಯಪ್ರಾಣ ಆಂಜನೇಯಸ್ವಾಮಿಯ ದೇಗುಲಕ್ಕೆ 11 ಮಂಗಳವಾರ ನಡೆದುಕೊಳ್ಳಿ ಹಾಗೂ ಎಲೆಯ ಹಾರವನ್ನು ನೀಡುವುದು ಈ ಮೂರು ಪರಿಹಾರಗಳು ನಿಮ್ಮ ಜೀವನ ಬದಲಾಯಿಸಬಹುದು.

4. ಬಿದಿರಿನಿಂದ ಮಾಡಿರುವ ಕೊಳಲನ್ನು ತೆಗೆದುಕೊಂಡು ಅದರಲ್ಲಿ ಸಂಪೂರ್ಣವಾಗಿ ಸಕ್ಕರೆಯನ್ನು ತುಂಬಿಸಿ ಜನಸಂಚಾರವಿಲ್ಲದಿರುವ ಪ್ರದೇಶದಲ್ಲಿ ಅಥವಾ ಸ್ಮಶಾನದಲ್ಲಿ ಆ ವಸ್ತುವನ್ನು ಇಟ್ಟು ಹಿಂದಿರುಗಿ ನೋಡದೆ ಬರಬೇಕು ಈ ರೀತಿಯಾಗಿ ತಾವು ಅಮಾವಾಸ್ಯೆ ಅಥವಾ ಹುಣ್ಣಿಮೆಯ ದಿನ ಮಾಡಿದರೆ ಖಂಡಿತ ನಿಮ್ಮ ಕಾರ್ಯ ಯಶಸ್ಸಿನತ್ತ ಸಾಗುತ್ತದೆ.

ಉದ್ಯೋಗದ ಮೇಲೆ ಅಗ್ನೇಯ ದಿಕ್ಕಿನ ವಾಸ್ತು ಸಮಸ್ಯೆಗಳು;

  • ಈ ದಿಕ್ಕು ಜನರನ್ನು ಅತಿಯಾಗಿ ಆಲೋಚನೆ ಮಾಡುವಂತೆ ಮಾಡುವುದು. ಆದರೆ ಇದೆಲ್ಲವೂ ನೀರಿನಲ್ಲಿಟ್ಟ ಹೋಮದಂತೆ ಆಗುವುದು. ನಕಾರಾತ್ಮಕ ಶಕ್ತಿಗಳು ಪರಿಣಾಮ ಬೀರಿದಾಗ ಈ ದಿಕ್ಕನ್ನು ಚಿಂತೆಯ ದಿಕ್ಕು ಎಂದು ಪರಿಗಣಿಸಲಾಗುತ್ತದೆ.
  • ಈ ದಿಕ್ಕಿನಿಂದ ಬರುವಂತಹ ನಕಾರಾತ್ಮಕ ಶಕ್ತಿಗಳು ಉದ್ಯೋಗದಲ್ಲಿ ಸಮಸ್ಯೆ ಉಂಟು ಮಾಡಬಹುದು. ಇದರಿಂದ ವೃತ್ತಿ ಸಮಸ್ಯೆ ಅಥವಾ ಜಗಳ ಉಂಟಾಗಬಹುದು.
  • ಉದ್ಯೋಗ ಪಡೆಯಲು ಕೆಲವೊಂದು ಆರ್ಥಿಕ ಸಮಸ್ಯೆ ಇತ್ಯಾದಿಗಳು. ಈ ದಿಕ್ಕಿನಿಂದಾಗಿ ಹೃದಯದ ಸಮಸ್ಯೆಯು ಬರಬಹುದು ಮತ್ತು ಖಿನ್ನತೆಯು ಇದನ್ನು ಮತ್ತಷ್ಟು ಹೆಚ್ಚಾಗುವಂತೆ ಮಾಡಬಹುದು.
  • ಪತಿ ಹಾಗೂ ಪತ್ನಿ ಮಧ್ಯೆ ಜಗಳವು ಉಂಟಾಗಬಹುದು. ಈ ಜಗಳವು ತುಂಬಾ ತೀವ್ರ ಮಟ್ಟಕ್ಕೆ ತಲುಪಬಹುದು. ಇದರಿಂದ ಡೈವೋರ್ಸ್ ಅಥವಾ ಅನೈತಿಕ ಸಂಬಂಧ ಏರ್ಪಡಬಹುದು.