ಜ್ಯೋತಿಷ್ಯದ ಪ್ರಕಾರ ನಿಮ್ಮ ರಾಶಿಗಳಿಗೆ ಅನುಗುಣವಾಗಿ ಯಾವ ಉದ್ಯೋಗ ಸೂಕ್ತ ನೋಡಿ..

0
5490

ಪ್ರತಿಯೊಬ್ಬರೂ ಜೀವನೋಪಾಯಕ್ಕೆ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗ ಹುಡುಕುತ್ತಾ ಸಾಗುತ್ತಾರೆ. ಅದರಲ್ಲಿ ಕೆಲವೊಂದು ಸಕ್ಸಸ್ ಆಗಿ ಫಲ ಸಿಕ್ಕು ಜೀವನವನ್ನು ಸಂತೋಷದಿಂದ ಕಳೆದರೆ, ಇನ್ನೂ ಕೆಲವೊಂದು ಉದ್ಯೋಗಗಳು ಫಲ ನೀಡದೆ ಇದ್ದರು ಕೂಡ ಕಷ್ಟಪಟ್ಟು ಮುನ್ನುಗ್ಗುತ್ತಾ ಇರುತ್ತಾರೆ. ಕೆಲವೊಂದು ದಿನಗಳಲ್ಲಿ ಎಷ್ಟೇ ಕಷ್ಟ ಪಟ್ಟರೂ ಫಲ ಸಿಗುವುದಿಲ್ಲವೋ ಆಗ ಕುಸಿದು ಹೋಗುತ್ತಾರೆ, ಏನು ಮಾಡಲು ಅರಿಯದಂತಾಗಿ ಒದ್ದಾಡುತ್ತಾರೆ. ಈ ವಿಚಾರದಲ್ಲಿ ನಮಗೆ ಜ್ಯೋತಿಷ್ಯ ಶಾಸ್ತ್ರ ಬಹಳವಾಗಿ ಸಹಾಯಕ್ಕೆ ಬರುತ್ತದೆ ಎಂಬುದನ್ನು ನೆನಪಿಟ್ಟುಕೊಳ್ಳ ಬೇಕು.

Also read: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಚಿನ್ನದ ಆಭರಣಗಳನ್ನು ಹೇಗೆ ಧರಿಸಬೇಕೆಂದು ನಿಮಗೆ ತಿಳಿದಿದೆಯೇ..?

ಬಹಳ ಮುಖ್ಯವಾದ ಕೆಲಸ ಅಂದರೆ, ನಮ್ಮ ಜನ್ಮ ಸಮಯ, ದಿನ ಹಾಗೂ ಸ್ಥಳದ ಆಧಾರದಲ್ಲಿ ನಿಖರವಾದ ಜಾತಕ ಮಾಡಿಸಬೇಕು. ಆ ನಂತರ ಕೂಡಿ ಬರುವುದು ಉದ್ಯೋಗವೋ ಅಥವಾ ವ್ಯಾಪಾರವೋ ಎಂದು ತಿಳಿದುಕೊಳ್ಳ ಬೇಕು. ಹಾಗಾದ್ರೆ ಯಾವ ರಾಶಿಯವರಿಗೆ ಯಾವ ಉದ್ಯೋಗ ಸರಿ ಹೊಂದುತ್ತೆ ನೋಡಿ.

“ಜ್ಯೋತಿಷವೇ ಅಂತಿಮವಲ್ಲ. ಅದು ಕೇವಲ ಮಾರ್ಗದರ್ಶಿಯಷ್ಟೇ, ಆಯ್ಕೆ ನಿಮ್ಮದು”

ರಾಶಿಗಳಿಗೆ ಅನುಗುಣವಾಗಿ ಉದ್ಯೋಗ:

ಮೇಷ:
ಉದ್ಯೋಗದ ಕ್ಷೇತ್ರದಲ್ಲಿ ಉತ್ತಮ ಲಾಭ ಪಡೆಯುತ್ತಿರ. ಉದ್ಯೋಗದಲ್ಲಿ ಮೇಲಿನ ಹುದ್ದೆ ಸಿಗುತ್ತೆ. ನಿಮ್ಮ ನಿರ್ಧಾರಗಳು, ನಿರ್ಣಯಗಳನ್ನು ಸೂಕ್ತವಾಗಿದ್ದು ನಿಮ್ಮಗೆ ಸೂಕ್ತವಾದ ಉದ್ಯೋಗ ‘ಕಾನೂನು ಕ್ಷೇತ್ರ ಉತ್ತಮ ಆಯ್ಕೆ’ ಯಾಗಿದೆ ಅಂತ ಜ್ಯೋತಿಷ ಹೇಳುತ್ತೆ.

ವೃಷಭ:
ನೂತನ ಸಂಶೋಧನೆಯಲ್ಲಿ ಹೆಚ್ಚು ಆಸಕ್ತಿ ಇರುತ್ತದೆ. ಇದು ಸಂಶೋಧನೆ ಕ್ಷೆತ್ರವಾದರಿಂದ ನಿಮ್ಮ ಯೋಜನೆ ಮತ್ತು ಉದ್ಯೋಗದಲ್ಲಿ ಸ್ವಲ್ಪ ತಪ್ಪಿನ ಅನುಭವವಾಗಿ. ಅಲ್ಪಸ್ವಲ್ಪ ತೊಂದರೆ ಉಂಟಾಗಬಹುದು. ಇದಕ್ಕೆ ನಿಮ್ಮ ಆತ್ಮವಿಶ್ವಾಸವೆ ಯಶಸ್ವಿಗೆ ಕಾರಣ. ಸೂಕ್ತ ಉದ್ಯೋಗ; ವ್ಯಾಪಾರ, ಸರ್ವೇ ಹಾಗೂ ಸಂಶೋಧನ ಕ್ಷೇತ್ರ ಉತ್ತಮ ಆಯ್ಕೆಯಾಗಿದೆ.

ಕಟಕ:
ನಿಮ್ಮ ಜ್ಯೋತಿಷ ಪ್ರಕಾರ ಉತ್ತಮವಾದ ಹಣ ಸಿಗುತ್ತದೆ. ಅದೃಷ್ಟ ನಿಮ್ಮೊಂದಿಗಿದೆ. ಕೆಲವು ವದಂತಿಗಳಿಗೆ ಕಿವಿಗೊಡಬೇಡಿ. ಎಲ್ಲರಲ್ಲೂ ವಿಶ್ವಾಸವಿಡಿ. ಸಿನಿಮಾ, ಮನರಂಜನಾ ಕ್ಷೇತ್ರ ಉತ್ತಮ ಆಯ್ಕೆ.

ಸಿಂಹ:
ಹೆಚ್ಚಿನ ಅವಕಾಶಗಳು ಇದ್ದು ಅದರಂತೆ ಗುರಿ ಮುಟ್ಟುವ ಹಂಬಲ ನಿಮ್ಮಲ್ಲಿದೆ. ಮುಖ್ಯವಾಗಿ ಉತ್ತಮ ಹುಟ್ಟುತ್ತಾನೆ ನಾಯಕತ್ವ ಗುಣ ನಿಮ್ಮಲ್ಲಿದೆ. ಟೀಂ ಮ್ಯಾನೇಜನರ್‌ ಅಥವಾ ಲೀಡರ್‌ ಹೆಸರು ಬರುವ ಕ್ಷೆತ್ರವು ನಿಮ್ಮದಾಗಿದೆ.

ಕನ್ಯಾ:
ಇರುವ ಉದ್ಯೋಗದಲ್ಲಿ ಮೇಲಿನ ದರ್ಜೆಗೆರುವಿರಿ. ವ್ಯಾಪಾರ, ವ್ಯವಹಾರ ಕ್ಷೇತ್ರದಲ್ಲಿ ಉತ್ತಮ ಪ್ರಗತಿ ಕಾಣುವಿರಿ. ಬರವಣಿಗೆ, ಸಾಹಿತ್ಯ, ಪತ್ರಿಕೋಧ್ಯಮ ನಿಮ್ಮ ಪಾಲಿನ ಅದೃಷ್ಟವಾಗಿದೆ.

ತುಲಾ:
ಹೊಸತುಗಳ ನಿರೀಕ್ಷೆಯಲ್ಲಿರುವಿರಿ. ಸಕಾರಾತ್ಮಕ ಚಿಂತನೆಯಿಂದ ಉತ್ತಮ ಫಲವನ್ನು ಹೊಂದುವಿರಿ. ಸಾಮಾಜಿಕ, ಆರ್ಥಿಕ, ಕಾನೂನು ಕ್ಷೇತ್ರದಲ್ಲಿ ಉತ್ತಮ ಫಲವನ್ನು ಹೊಂದುವಿರಿ.

ವೃಶ್ಚಿಕ:
ನಿಮ್ಮ ಸಾಮರ್ತ್ಯ ಎಂತದು ಅಂದ್ರೆ ಉದ್ಯೋಗ ಯಾವುದಾದರು ಮುನ್ನುಗಿವ ಸಾಮರ್ಥ್ಯ‌ ನಿಮ್ಮದಾಗಿದು ವಿಪುಲವಾದ ಅವಕಾಶಗಳು ನಿಮಗೆ ಬಂದೊದಗಲಿವೆ. ವೈದ್ಯಕೀಯ, ಬೋಧನಾ ಕ್ಷೇತ್ರ ಅತ್ಯುತ್ತಮ.

ಧನು:
ನೀವು ಜೀವದಲ್ಲಿ ಅಂದುಕೊಂಡ ಎಲ್ಲ ಕೆಲಸಗಳು ಸರಾಗವಾಗಿ ಸಾಗುತ್ತೆ. ಮತ್ತು ಅದರ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಳ್ಳಬಹುದು. ಪಾಲುದಾರಿಕೆ ವ್ಯವಹಾರದಲ್ಲಿ ಉತ್ತಮ ಫಲವನ್ನು ಹೊಂದುವಿರಿ. ನಾಯಕತ್ವ ಗುಣ ಇರುವುದರಿಂದ ಎಂದಿಗೂ ಸೋಲುವ ಮಾತಿಲ್ಲ.

ಮಕರ:
ಯಾವುದೇ ಉದ್ಯೋಗವಾದರೂ ಗೆಲ್ಲುವ ಛಲ ನಿಮ್ಮದು ಆದರಿಂದ. ನಿಮ್ಮಲಿರುವ ದಾನದ ಗುಣವು ಜೀವನದ ತುಂಬ ಹರಸುತ್ತೆ. ಸೂಕ್ತವಾದ ಅತ್ಯುತ್ತಮ ಆಯ್ಕೆ ಎಂದರೆ ಟೀಂ ವರ್ಕ್‌, ಸ್ವಂತ ಯೋಚನೆಯಲ್ಲಿರುವ ಕೆಲಸವು ಯಶಸ್ವಿಯಲ್ಲಿ ಜರಗುತ್ತೆ.

ಕುಂಭ:
ನೀವು ಬಯಸಿದ ಔದ್ಯೋಗಿಕ ಕ್ಷೇತ್ರದಲ್ಲಿ ಹೆಚ್ಚು ಪರಿಣತಿ ಹೊಂದುವಿರಿ. ಸಕಾರಾತ್ಮಕ ಹಾಗೂ ಧನಾತ್ಮಕ ಚಿಂತನೆಗಳಿಂದ ಉತ್ತಮ ಫಲಿತಾಂಶವನ್ನು ನಿರೀಕ್ಷಿಸಬಹುದು. ಟಾರ್ಗೆಟ್ ಉದ್ದೇಶಿತ ಕ್ಷೇತ್ರವು ಒಳ್ಳೆಯದು.

ಮೀನ:
ನಿಮ್ಮ ವ್ಯಕ್ತಿತ್ವ ವಿಬ್ಬಿನ್ನವಾದದ್ದು ಆದರಿಂದ ನಿಮ್ಮ ವೃತ್ತಿಯಲ್ಲಿ ಕಲೆ, ಚಿತ್ರಕಲೆ, ವಾಣಿಜ್ಯ ಉತ್ತಮ ಆಯ್ಕೆ ಯಾಗಿದ್ದು ಮೇಲಧಿಕಾರಿಗಳ ನಿಮ್ಮ ಕೆಲಸವು ಅಚ್ಚುಮೆಚ್ಚಾಗಿದ್ದು ನೂತನ ಜವಾಬ್ದಾರಿಗಳು ನಿಮಗೆ ಸಿಗುತ್ತೆ.

Also read: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನಿಮ್ಮ ಹುಟ್ಟಿದ ತಿಂಗಳು ನಿಮ್ಮ ವ್ಯಕ್ತಿತ್ವದ ಬಗ್ಗೆ ಏನು ಹೇಳುತ್ತದೆ ಎಂಬುವುದು ನಿಮಗೆ ತಿಳಿದಿದೆಯೇ..?