ಯೂಟ್ಯೂಬ್ ನಲ್ಲಿ ಧೂಳೆಬ್ಬಿಸುತ್ತಿದೆ ಚಿತ್ರದುರ್ಗ ಹುಡುಗರ KA 16 ಹಾಡು, ಇದರಲ್ಲಿ ಏನು ವಿಶೇಷತೆ ಇದೆ ಗೊತ್ತೇ?

0
2324

ಚಿತ್ರದುರ್ಗವು ಕರ್ನಾಟಕದ ಕೋಟೆ ನಗರವೆಂದೇ ಹೆಸರುವಾಸಿಯಾಗಿದೆ. ಇದು ಕರ್ನಾಟಕದ ಶ್ರೀಮಂತ ಇತಿಹಾಸ ಮತ್ತು ಸಂಪ್ರದಾಯದಲ್ಲಿ ತನ್ನದೇ ಆದ ಹೆಗ್ಗುರುತು ಮೂಡಿಸಿದೆ. ಇತಿಹಾಸದ ಜೊತೆ-ಜೊತೆಗೆ ಸಾಹಿತ್ಯ ಮತ್ತು ಸಂಸ್ಕೃತಿಯ ಮಿಶ್ರಣವಾಗಿದೆ ಈ ನಗರ.

ಈಗ ಕರ್ನಾಟಕದ ಹೆಮ್ಮೆಯ ನಗರ, ವೀರ ಮದಕರಿ ನಾಯಕರಾಳಿದ ನಗರ, ಒನಕೆ ಓಬ್ಬವ್ವಳ ನಗರವೆಂದೇ ವಿಶ್ವವಿಖ್ಯಾತಿ ಹೊಂದಿರುವ ಚಿತ್ರದುರ್ಗದ ಪ್ರಕೃತಿ ಸೌಂದರ್ಯ ಮತ್ತು ಅಲ್ಲಿನ ವಿಶೇಷತೆಗಳನ್ನು ವಿವರಿಸಲು ಚಿತ್ರದುರ್ಗದ ಏನ್. ವಿನಾಯಕರವರು KA 16 ಎಂಬ ಮ್ಯೂಸಿಕ್ ಆಲ್ಬಮ್ ಅನ್ನು Youtube ನಲ್ಲಿ ಬಿಡುಗಡೆ ಮಾಡಿದ್ದಾರೆ.

ಈ ಆಲ್ಬಮ್ ಹಾಡನ್ನು ಚಿತ್ರದುರ್ಗದ ಸೌಂದರ್ಯವನ್ನು ಪ್ರದರ್ಶಿಸುವ ಉದ್ದೇಶದಿಂದ ಮಾಡಲಾಗಿದೆ. ಹಾಡು, ಸಾಹಿತ್ಯ, ಕೋರಿಯೋಗ್ರಫಿ, ಸಂಗೀತ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ತುಂಬಾ ಪ್ರೊಫೆಶೆನಲ್ ಆಗಿ ಮೂಡಿ ಬಂದಿರುವ ಈ ಹಾಡನ್ನು, ಕೇವಲ ಐದೇ ಐದು ದಿನಗಳಲ್ಲಿ 76 ಸಾವಿರಕ್ಕೂ ಅಧಿಕ ಜನ ನೋಡಿದ್ದಾರೆ, 4 ಸಾವಿರ ಜನ ಈ ಹಾಡನ್ನು ತುಂಬಾ ಹೊಗಳಿದ್ದಾರೆ.

ಇನ್ನು ದುರ್ಗದ ಹುಡುಗರ ಈ KA 16 ಆಲ್ಬಮ್ ಹಾಡನ್ನು ಏನ್.ವಿನಾಯಕ ಅವರು ನಿರ್ದೇಶನ ಮಾಡಿದ್ದಾರೆ. ಕ್ಯೂಬ್ ಹರೀಶ್ ಮತ್ತು ವಿಕಿ ಅವರ ಸಂಗೀತ ನಿರ್ದೇಶನ, ಅಭಿಷೇಕ್ ಎಂ ಮುರುಡ ಅವರು ಸಾಹಿತ್ಯ ನೀಡಿ, ಹಾಡನ್ನು ಹಾಡಿದ್ದಾರೆ. ಕೃಷ್ಣಾಸುಜನ್ ಅವರ ಎಡಿಟಿಂಗ್, ಅಜಯ್ ಅವರ ಲಿರಿಕ್ಸ್, ಸಿದ್ದು ಮತ್ತು ಕ್ರಿಸ್ತ ವಿವೇಕ್ ಈ ಆಲ್ಬಮ್ ಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.

ಅರ್ಶಿತ್ ಶೆಟ್ಟಿ, ಜಾವೀದ್ ಡಿಜೆ, ಮುರಳಿ ಫ್ಲ್ಯೂಟ್ ಝೀಶನ್, ಇಮ್ರಾನ್ ಮತ್ತು ಕೊತಿರಾಜ ಈ ಹಾಡಿಗೆ ಸಕತ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ಚಿತ್ರದುರ್ಗದ ಬಗ್ಗೆ ಹೊಸದಾಗಿ ಟ್ರೆಂಡಿಯಾಗಿ, ಈಗಿನ ಯುವ ಜನರಿಗೆ ಮುಟ್ಟುವ ಹಾಗೆ ಇರುವ ಈ ಆಲ್ಬಮ್ ಹಾಡನ್ನು ನೋಡಲು Youtube ನಲ್ಲಿ KA 16 ಎಂದು ಟೈಪ್ ಮಾಡಿ.