ಬೆಂಗಳೂರಿನಲ್ಲಿದೆ 400 ವರ್ಷ ಹಳೆಯ ಅದ್ಬುತ ಹಾಗೂ ನಿಗೂಢ ಶಿವನ ದೇವಾಲಯ   

0
5199

ಇಲ್ಲೇ ಬೆಂಗಳೂರಿನ ಕಾಡು ಮಲ್ಲೇಶ್ವರ ದೇವಸ್ಥಾನದ ಎದುರು ನಂದಿ ತೀರ್ಥ ಎಂಬ ಒಂದು ದೇವಾಲಯವಿದೆ . ಇದರ ಪೂರ್ಣ ಹೆಸರು ದಕ್ಷಿಣ ಮುಖ ನಂದಿ ತೀರ್ಥ ಕಲ್ಯಾಣಿ ಕ್ಷೇತ್ರ ಎಂದು.

1997 ರಲ್ಲಿ ಒಂದು ಕಾಲಿ ಜಾಗದಲ್ಲಿ ಒಂದು ಕಟ್ಟಡವನ್ನು ನಿರ್ಮಿಸುವ ಕಾರ್ಯ ಆರಂಭವಾಗುತ್ತದೆ . ಅಲ್ಲಿ ಮಣ್ಣು ತೆಗೆಯುವಾಗ ಈ ದೇವಸ್ಥಾನವನ್ನು ಆಕಸ್ಮಿಕವಾಗಿ ಅನ್ವೇಷಿಸಲಾಗುತ್ತದೆ.

ಆಗ ಪುರಾತತ್ವ ಇಲಾಖೆ ಈ ಅನ್ವೇಷಣೆ ಕಾರ್ಯವನ್ನು ಪೂರ್ಣ ಗೊಳಿಸಲು ಬರುತ್ತದೆ. ಆಗ ಅವರಿಗೆ ಒಂದು ಪರಿಪೂರ್ಣವಾಗಿ ಸಂರಕ್ಷಿಸಲ್ಪಟ್ಟ ಒಂದು ಕಲ್ಯಾಣಿ ಗೋಚರವಾಗಿದೆ . ಅದರ ಸುತ್ತ ಗ್ರನೈಟ್ನ ಮೆಟ್ಟಿಲುಗಳು ಹಾಗೂ ಕಂಬಗಳನ್ನು ಒಳಗೊಂಡ ಮಂಟಪಗಳು ಇತ್ತು.

ಇಲ್ಲೇ ಒಂದು ಶಿವ ಲಿಂಗವಿದೆ . ಅದಕ್ಕೆ ದಿನದ ಇಪ್ಪತ್ ನಾಲ್ಕು ಗಂಟೆಗಳು ಸ್ನಾನ , ಅದರ ಮೇಲಿರುವ ನಂದಿಯ ಬಾಯಿಂದ ಬೀಳುವ ನೀರಿನಿಂದ .

ಅಂದರೆ , ಪುರಾತತ್ವ ಇಲಾಖೆಯವರಿಗೆ ಮೊದಲು ನಂದಿ ಸಿಗುತ್ತದೆ , ಅದರ ಬಾಯಿಯನ್ನು ಸ್ವಚ್ಛಗೊಳಿಸಿದಾಗ , ಅಲ್ಲಿಂದ ಒಂದೇ ಸಮನೆ ನೀರು ಸುರಿಯಲು ಶುರುವಾಗುತ್ತದೆ . ಅದರ ಕೆಳಗಿನ ನೆಲವನ್ನು ಸ್ವಚ್ಛ ಗೊಳಿಸಿದಾಗ ಅಲ್ಲಿ ಒಂದು ಶಿವನ ಲಿಂಗ ಸಿಗುತ್ತದೆ . ನಂದಿಯ ಬಾಯಿಂದ ಬರುತ್ತಿರುವ ನೀರು ಸೀದಾ ಲಿಂಗದ ಮೇಲೆ ಬೀಳುತ್ತದೆ.

ಇವತ್ತಿಗೂ ಇದು ಹಾಗೆ ಇದೆ . ಕೆಲವರ ಪ್ರಕಾರ ಇದು ಸ್ಯಾಂಕೀ ಕೆರೆಯ ನೀರು . ಆದರೆ ಅದಕ್ಕೆ ಯಾವುದೇ ಪುರಾವೆಗಳಿಲ್ಲ . ಈ ನೀರಿನ ಮೂಲ ಇನ್ನೂ ತಿಳಿದಿಲ್ಲ .

ಎಷ್ಟೋ ಜನರ ಪ್ರಕಾರ ಇದೇ ವೃಷಭಾವತಿ ನದಿಯ ಉಗಮ ಸ್ಥಳ .

ಕೆಲವು ಮೂಲಗಳ ಪ್ರಕಾರ ಈ ದೇವಸ್ಥಾನ 7000 ವರ್ಷ ಹಳೆಯದು .

ಏನೇ ಆಗಲಿ ಒಮ್ಮೆ ಭೇಟಿ ಕೊಡಿ , ಈ ಅದ್ಭುತವನ್ನು ಕಣ್ಣಾರೆ ನೋಡಿ.