ತಮಿಳು ಮಲಯಾಳಂ ಸಿನಿಮಾಗಳಿಗೂ ಮೊದಲು ಕನ್ನಡ ಸಿನೆಮಾಗಳು ಹೊಸ ಅಲೆ ಪ್ರಾರಂಭಿಸಿದ್ದು

0
2385

ಕನ್ನಡ ಸಿನಿಮಾಗಳನ್ನು ಹಾಡಿ ಹೊಗಳಿದ ಸುಹಾಸಿನಿ, “ತಮಿಳು ಮಲಯಾಳಂ ಸಿನಿಮಾಗಳಿಗೂ ಮೊದಲು ಕನ್ನಡ ಸಿನೆಮಾಗಳಲ್ಲಿ ಹೊಸ ಅಲೆ ಪ್ರಾರಂಭವಾಗಿತ್ತು, ನನ್ನ ಪತಿಯಾದ ಮಣಿರತ್ನಮ್ ಅವರ ಮೊದಲ ಸಿನಿಮಾ ಕೂಡ ‘ ಪಲ್ಲವಿ ಅನುಪಲ್ಲವಿ’, ಅವರಿಗೆ ಮೊದಲ ಅವಕಾಶ ಕೊಟ್ಟಿದ್ದು ಕೂಡ ಕನ್ನಡ ಚಿತ್ರರಂಗ, ಹಾಗೆಯೇ ಕನ್ನಡ ನಟರೂ ಕೂಡ ತಮಿಳು ಚಿತ್ರರಂಗದ ಬಗ್ಗೆ ಒಳ್ಳೆಯ ಅಭಿಪ್ರಾಯ ಹೊಂದಿದ್ದಾರೆ, ಕನ್ನಡ ಜನರನ್ನು ಪ್ರೀತಿಸೋಣ ಸಾಮರಸ್ಯದಿಂದ ಬಾಳೋಣ” ಎಂದು ತಮಿಳಿಗರಿಗೆ ಕಿವಿ ಮಾತು ಹೇಳಿದ್ದಾರೆ.

ವೀಡಿಯೊ ನೋಡಿ ನಿಮಗೆ ತಿಳಿಯುತ್ತೆ

ಲೂಸಿಯಾ ಸಿನಿಮಾವನ್ನು ನೆನೆದ ಸುಹಾಸಿನಿ “ಕಲೆಗೆ ಬಾಷೆಯ ತೊಡಕು ಇರಕೂಡದು, ಇತ್ತೀಚೆಗೆ ಕನ್ನಡ ಚಿತ್ರರಂಗದಲ್ಲಿ ಒಳ್ಳೆಯ ಸಿನಿಮಾಗಳು ಬರುತಿದ್ದು, ತಮಿಳಿಗರು ಕನ್ನಡ ಸಿನಿಮಾಗಳನ್ನು ಆದಷ್ಟು ವೀಕ್ಷಿಸಬೇಕು ಹಾಗೆಯೇ ವಿತರಕರೂ ಕೂಡ ಕನ್ನಡ ಸಿನಿಮಾಗಳನ್ನು ತಮಿಳುನಾಡಿನಲ್ಲಿ ಬಿಡುಗಡೆಗೊಳಿಸುವಂತಾಗಲಿ” ಎಂದು ಪ್ರಾರ್ಥಿಸಿದರು.

“ಒಂದು ಬಾರಿ ಚಿತ್ರದುರ್ಗದಲ್ಲಿ ನೆಡೆದ ನೃತ್ಯ ಸ್ಪರ್ಧೆಯಲ್ಲಿ ಕರ್ನಾಟಕದ ವಿರುದ್ಧ ನಾವು ಸೋತು ಆಳುತ್ತಿದ್ದಾಗ ಕನ್ನಡಿಗರು ಸಂತೈಸಿ ‘ನಾಗರಹಾವು’ ಸಿನಿಮಾ ವೀಕ್ಷಿಸಲು ನನ್ನನ್ನು ಕರೆದುಕೊಂಡು ಹೋಗಿದ್ದರು, ಹಾಗ ತಿಳಿಯಿತು ಬಾಲಚಂದರ್ ಗೆ ಸಮನಾಗಿ ನಿಲ್ಲಬಲ್ಲ ಮತ್ತೊಬ್ಬ ನಿರ್ದೇಶಕ ಪುಟ್ಟಣ್ಣ ಅವರು” ಎಂದು ಅವರನ್ನು ಹೊಗಳಿದ್ದಾರೆ ಸುಹಾಸಿನಿ.

ತಮ್ಮ ಸುದೀರ್ಘ ಭಾಷಣದಲ್ಲಿ ಡಾ ರಾಜಕುಮಾರ್, ಆರತಿ, ಗಿರೀಶ್ ಕಾರ್ನಾಡ್, ಜಿ ವಿ ಅಯ್ಯರ್, ಬಿ.ವಿ ಕಾರಂತ್ ರನ್ನು ಸ್ಮರಿಸಿದ ಸುಹಾಸಿನಿ, ಭೂತಯನ್ನ ಮಗ ಅಯ್ಯು ಮತ್ತು ಬೆಂಕಿಯಲ್ಲಿ ಅರಳಿದ ಹೂ ಸಿನಿಮಾಗಳನ್ನು ಹಾಡಿ ಹೊಗಳಿದರು.

ತಮಿಳು ಸಿನಿಮಾ ಮತ್ತು ಕನ್ನಡ ಸಿನಿಮಾಗಳು ಭಾರತದ ಪ್ರಮುಖ ಚಿತ್ರರಂಗವಾಗಿವೆ, ನಾವೆಲ್ಲರೂ ಸೇರಿ ಭಾರತವನ್ನು ಪ್ರತಿನಿದಿಸಬೇಕೇ ಹೊರತು ಸಿನಿಮಾಗಳನ್ನು ನಿಷೇಧಿಸಿ ನಿರ್ಮಾಪಕರ ಹೊಟ್ಟೆಯ ಮೇಲೆ ಹೊಡೆಯುವುದು ಎಷ್ಟು ಸರಿ…? ಎಂದು ಪ್ರೆಶ್ನಿಸಿದರು.