ಕನ್ನಡದ ಬಿಗ್ಗ್ ಬಾಸ್ ಮನೆ ಇರುವ ಇನ್ನೊವೇಟಿವ್ ಫಿಲ್ಮ್ ಸಿಟಿಯ ಮೇಲೆ ಐ ಟಿ ದಾಳಿ..

0
713

ಪ್ರಭಾವಿಗಳ ಮನೆಯ ಮೇಲೆ ಐ ಟಿ ದಾಳಿ ನಡೆದು ಸುದ್ದಿಯಾದ ಕೆಲವೇ ತಿಂಗಳ ನಂತರ ಇದೀಗ ಕನ್ನಡದ ಬಿಗ್ಗ್  ಬಾಸ್ ಮನೆಯಿರುವ ಇನ್ನೊವೇಟಿವ್ ಫಿಲ್ಮ್ ಸಿಟಿಯ ಮೇಲೆ ಗುರುವಾರ ನವೆಂಬರ್ 16 ರಂದು ಐ ಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ..

6 ಜನ ಅಧಿಕಾರಿಗಳಿದ್ದ ತಂಡ ರೈಡ್ ಮಾಡಿ ಇನ್ನೋವೇಟಿವ್ ಫಿಲ್ಮ್ ಸಿಟಿಯ ಸಿ ಇ ಒ ಉಪಾಸನರನ್ನು ವಿಚಾರಣೆ ಮಾಡಿದ್ದಾರೆ..

500 ಎಕರೆ ವಿಸ್ತೀರ್ಣವಿರುವ ಇನ್ನೊವೇಟಿವ್ ಫಿಲ್ಮ್ ಸಿಟಿಯಲ್ಲಿ ಕಳೆದ ಮೂರು ಸೀಸನ್ ಗಳಿಂದ ಬಿಗ್ ಬಾಸ್ ನಡೆಯುತ್ತಿದೆ.. ಈ ಐ ಟಿ ದಾಳಿಯಿಂದಾಗಿ ಕನ್ನಡದ ಬಿಗ್ ಬಾಸ್ ಶೋ ಗಾಗಲಿ.. ನಡೆಸುತ್ತಿರುವ ಕಲರ್ಸ್ ವಾಹಿನಿಗಾಗಲಿ ಯಾವುದೇ ಅಡಚಣೆ ಉಂಟಾಗಿಲ್ಲ..

ಕಿಚ್ಚ ಸುದೀಪ್ ನಿರೂಪಕರಾಗಿ ನಡೆಸುತ್ತಿರುವ ಕನ್ನಡದ ಬಿಗ್ಗ್ ಬಾಸ್ ಶೋ.. ಮೊದಲೆರೆಡು ಸೀಸನ್ ಲೋನವಾಲದಲ್ಲಿ ನಡೆಯಿತು.. ಉಳಿದಂತೆ ಸೀಸನ್ ನನ್ನು ಒಳಗೊಂಡಂತೆ ಕಳೆದ ಮೂರು ಸೀಸನ್ ಗಳನ್ನು ಇನ್ನೊವೇಟಿವ್ ಫಿಲ್ಮ್ ಸಿಟಿಯಲ್ಲೆ ಭವ್ಯವಾದ ಸೆಟ್ ನಿರ್ಮಾಣ ಮಾಡಿ ನಡೆಸುತ್ತಾ ಬಂದಿದೆ..

ಪ್ರತಿಯೊಂದು ಸೀಸನ್ ನಲ್ಲೂ ಮನೆಯ ಡಿಸೈನ್ ಬದಲಾಯಿಸುತ್ತಾ ಆಕರ್ಶಿತವಾಗಿ ಕಾಣುವಂತೆ ಮಾಡಿರುವ ಕಲರ್ಸ್ ವಾಹಿನಿ ಎಂದಿನಂತೆ ಬಿಗ್ ಬಾಸ್ ನಿಂದ ಹೆಚ್ಚು ಟಿ ಆರ್ ಪಿ ಯನ್ನು ಪಡೆಯುತ್ತಿದೆ..