ಈ ವರ್ಷದ ಬಿಗ್ಗ್ ಬಾಸ್ ಗೆದ್ದಿರುವುದು ಯಾರು ಎಂದು ವಿಕಿಪೀಡಿಯನಲ್ಲಿ ಪ್ರಕಟವಾಗಿದೆ!! ನಿಮಗೆ ಯಾರು ಗೆಲ್ಲಬೇಕು?

0
1082

ಬಿಗ್ ಬಾಸ್ ಸೀಸನ್-5, ಕನ್ನಡಿಗರ ಅಚ್ಚು ಮೆಚ್ಚಿನ ಕಿರುತೆರೆ ರಿಯಾಲಿಟಿ ಕಾರ್ಯಕ್ರಮ. ಪ್ರತಿ ಬಾರಿಯೂ ಏನಾದರೊಂದು ವಿಶೇಷತೆಯಿಂದಲೇ ಸುದ್ದಿಯಾಗುವ ಈ ಶೋ ಈಗ ಕೊನೆಯ ಹಂತಕ್ಕೆ ಅಂದರೆ ಫಿನಾಲೆ ತಲುಪಿದೆ. ಆದರೆ, ಫಿನಾಲೆಗೂ ಮುಂಚೆಯೇ ಈ ಶೋ ನ ವಿಜೇತರನ್ನು ವಿಕಿಪೀಡಿಯಾದಲ್ಲಿ ಘೋಷಿಸಲಾಗಿದೆ.

ಹೌದು, ಪ್ರಸಿದ್ಧ ಸರ್ಚ್ ವೆಬ್-ಸೈಟ್ ಆದ ವಿಕಿಪೀಡಿಯ ಈ ಬಾರಿಯ ಬಿಗ್ ಬಾಸ್ ಸೀಸನ್ 5 ನ ವಿಜೇತರು, ಎರಡನೇ ಸ್ಥಾನ ಯಾರಿಗೆ ಸಿಕ್ಕಿದೆ, ಟಾಪ್ 3 ಹಂತಕ್ಕೆ ಹೋದವರು ಯಾರು ಎಂದೆಲ್ಲ ಮಾಹಿತಿಯನ್ನು ತನ್ನ ಸೈಟ್ ನಲ್ಲಿ ಘೋಷಿಸಿದೆ. ಅದು ಹೇಗೆ ಸಾಧ್ಯ, ಯಾರು ವಿಜೇತರು ಎಂದು ತಿಳಿಯಲು ಮುಂದೆ ಓದಿ.

ವಿಕಿಪಿಡಿಯಾದಲ್ಲಿ ಸದ್ಯ ಇರುವ ಮಾಹಿತಿಯ ಪ್ರಕಾರ ಜಯರಾಂ ಕಾರ್ತಿಕ್ ‘ಬಿಗ್ ಬಾಸ್ ಕನ್ನಡ-5’ ವಿಜೇತ. ಅಲ್ಲದೆ ಚಂದನ್ ಶೆಟ್ಟಿ, ಜಯರಾಂ ಕಾರ್ತಿಕ್ ಹಾಗೂ ದಿವಾಕರ್ ಹೊರಬಂದಿರುವುದು 106ನೇ ದಿನ ಅಂತ ನಮೂದಿಸಲಾಗಿದೆ. ಇದನ್ನು ನೋಡಿದರೆ ಇವರೆಲ್ಲ ಟಾಪ್ 3 ಕಂಟೆಸ್ಟೆಂಟ್ಸ್ ಎಂದರ್ಥ.

ಇನ್ನು ಚಂದನದ ಬೋಂಬೆ ನಿವೇದಿತಾ ಗೌಡ ಹಾಗೂ ಶ್ರುತಿ ಪ್ರಕಾಶ್ 105 ನೇ ದಿನ ಹೊರಬಂದಿದ್ದಾರೆ ಎಂದು ಸೈಟ್ ಪ್ರಕಟಿಸಿದೆ. ಆದರೆ, ವಿಕಿಪಿಡಿಯಾದಲ್ಲಿ ಯಾರು ಬೇಕಾದರೂ ಎಡಿಟ್ ಮಾಡಬಹುದು, ಮಾಹಿತಿ ತಿರುಚಬಹುದು ಅದಕ್ಕೆ ಈ ಮಾಹಿತಿ ಸುಳ್ಳು ಎಂದು ಹೇಳಲಾಗುತ್ತಿದೆ.

ಇನ್ನು ವೋಟಿಂಗ್ ಲೈನ್ ಎಂದು ಬೆಳಗ್ಗೆ 9 ಗಂಟೆಗೆ ಮುಚ್ಚಿವೆ ಹಾಗು ಇಂದು ಮಧ್ಯಾಹ್ನದ ಮೇಲೆ ಗ್ರ್ಯಾಂಡ್ ಫಿನಾಲೆ ಶೂಟಿಂಗ್ ನಡೆಯಲಿದೆ. ಹಾಗಾದರೆ ಈ ಮಾಹಿತಿಯನ್ನು ನಂಬಬೇಕೆ, ಬಿಡಬೇಕೆ ಎಂಬುದನ್ನು ಕಲರ್ಸ್ ಸೂಪರ್ ಚಾನೆಲ್ ಮತ್ತು ವಿಕಿಪೀಡಿಯ ವೆಬ್-ಸೈಟ್ ಸ್ಪಷ್ಟನೆ ನೀಡಬೇಕಿದೆ.