ಇನ್ಮೇಲಿಂದ ಕರ್ನಾಟಕದಲ್ಲಿ ಎಲ್ಲಾ ಪೊಲೀಸ್ ಪರೇಡ್-ಗಳಲ್ಲಿ ಪರೇಡ್ ಕಮಾಂಡ್-ಗಳನ್ನು ಕನ್ನಡದಲ್ಲೇ ಹೇಳುತ್ತಾರೆ!!

0
828

ರಾಜ್ಯದಲ್ಲಿ ಇನ್ನು ಮುಂದೆ ಕರ್ನಾಟಕ ಪೊಲೀಸರು, ಕನ್ನಡ ಭಾಷೆಯಲ್ಲಿಯೇ ಕಮಾಂಡ್ ಅಥವಾ ಆಜ್ಞೆಯನ್ನು ಸ್ವೀಕರಿಸಲಿದ್ದಾರೆ. ಈ ವಿನೂತನ ಪ್ರಯೋಗವನ್ನು ಮತ್ತು ಕನ್ನಡ ಭಾಷೆಯ ಮೇಲೆ ಇರುವ ತಮ್ಮ ಪ್ರೀತಿಯನ್ನು ದಕ್ಷಿಣ ಕನ್ನಡ ಜಿಲ್ಲೆಯ ನೂತನ ಎಸ್ಪಿರವಿಕಾಂತೆಗೌಡ ಅವರು ಜಾರಿಗೆ ತರಲಿದ್ದಾರೆ.

ಹೌದು, ದಕ್ಷಿಣ ಕನ್ನಡ ಜಿಲ್ಲೆಯ ನೂತನ ಎಸ್ಪಿರವಿಕಾಂತೆಗೌಡ ಅವರು, ಕರ್ನಾಟಕ ಪೊಲೀಸರು ಇನ್ನು ಮುಂದೆ ಕನ್ನಡ ಭಾಷೆಯಲ್ಲಿಯೇ ಕಮಾಂಡ್ ಅಥವಾ ಆಜ್ಞೆಯನ್ನು ಸ್ವೀಕರಿಸಲಿದ್ದಾರೆ, ಈ ಬದಲಾವಣೆಯು 2016 ರಲ್ಲಿ ರಾಜ್ಯೋತ್ಸವ ಆಚರಣೆಯಲ್ಲಿ ಪರಿಚಯಿಸಲ್ಪಟ್ಟಿತು ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಕನ್ನಡದಲ್ಲಿ ಪರೇಡ್ ಆಜ್ಞೆಗಳನ್ನು ಪರಿಚಯಿಸುವ ಪ್ರಸ್ತಾಪವು ADGP ಆಡಳಿತ ನೇತೃತ್ವದ ಸಮಿತಿಗೆ ನೀಡಲಾಗಿದೆ,
ಅವರು ಕೂಡ ಈ ಸಮಿತಿಗೆ ಸದಸ್ಯರು. ಈ ಪ್ರಸ್ತಾಪವನ್ನು ಸರ್ಕಾರದ ಮುಂದೂಡುತ್ತೇವೆ ಮತ್ತು ಇನ್ನು ಮುಂದೆ ಕಮಾಂಡ್-ಗಳನ್ನು ಕನ್ನಡದಲ್ಲಿ ನೀಡಲಾಗುವುದು, ಬಹುಶಃ ಇದು ಮೊದಲ ಬಾರಿಗೆ ರಾಜ್ಯದ ಭಾಷೆಯಲ್ಲಿ ಆಜ್ಞೆಗಳನ್ನು ನೀಡಲಾಗುತ್ತಿದೆ ಎಂದು ಅವರು ಹೇಳಿದರು.

ಎಸ್ ಪಿ ಸಿ.ಎಚ್.ಸುಧೀರ್ ಕುಮಾರ್ ರೆಡ್ಡಿ, ಜನವರಿ 20 ರಂದು ಬೆಳಗಾವಿಗೆ ಅಕಾಲಿಕವಾಗಿ ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ, ಜಿಲ್ಲೆಯ ಪೊಲೀಸ್ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡ ಬಿ.ಆರ್. ರವಿಕಾಂತೆಗೌಡ ಅವರು, ಜನರ ಸ್ನೇಹಿ ಪೋಲಿಸ್ ಅವರ ಆದ್ಯತೆ ಎಂದು ಹೇಳಿದರು.

ಅಧಿಕಾರ ವಹಿಸಿಕೊಂಡ ನಂತರ ಅವರು ಜನರಿಗೆ ಕೆಲ ಕಿವಿಮಾತುಗಳನ್ನು ಹೇಳಿದ್ದಾರೆ. ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಸೋಶಿಯಲ್ ನೆಟ್ವರ್ಕ್ ಕ್ರೈಂ ನಿಂದ ದೂರ ಉಳಿಯಲು ಮತ್ತು ಸಾಮಾಜಿಕ ಮಾಧ್ಯಮವನ್ನು ದುರುಪಯೋಗಪಡಿಸಿಕೊಂಡವರ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.