ರಾಜ್ಯೋತ್ಸವ ದಿನದಂದು ಕನ್ನಡ ಧ್ವಜ ಹಾರಿಸಿಲ್ಲವೆಂಬ ಕಾರಣಕ್ಕೆ ಸನ್ಮಾನವನ್ನು ನಿರಾಕರಿಸಿದ ವಿದ್ಯಾರ್ಥಿ

0
259

ಕನ್ನಡಿಗರ ಹಬ್ಬ ಕನ್ನಡ ರಾಜ್ಯೋತ್ಸವ. 64ನೇ ಕನ್ನಡ ರಾಜ್ಯೋತ್ಸವವನ್ನು ರಾಜ್ಯದ ವಿವಿದ ಜಿಲ್ಲೆಯಲಿ ಹುಮ್ಮಸ್ಸಿನಿಂದ ಆಚರಿಸಲಾಗಿದೆ. ಭಾವೈಕ್ಯ ಸಾರುವ ಈ ನಾಡಹಬ್ಬವನ್ನು ಎಲ್ಲೆಡೆ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಇದರ ಜೊತೆಗೆ ಕನ್ನಡ ಬಾವುಟವನ್ನು ರಾಜ್ಯೋತ್ಸವದಂದು ಹಾರಿಸುವ ವಿಚಾರದ ಸಂಬಂಧ ಗೊಂದಲವೂ ಉಂಟಾಗಿ ಕೆಲವು ಜಿಲ್ಲೆಯಲ್ಲಿ ಕನ್ನಡಪರ ಹೋರಾಟಗಾರರು ಅಕ್ರೋಶ ವ್ಯಕ್ತ ಪಡಿಸಿದ್ದಾರೆ. ಸರ್ಕಾರದ ಆದೇಶದಂತೆ ಎಲ್ಲೆಡೆ ರಾಷ್ಟ್ರಧ್ವಜ ಹಾರಿಸಬೇಕೆಂಬ ನಿಯಮದಂತೆ, ಈ ಬಾರಿಯೂ ಅನೇಕ ಜಿಲ್ಲೆಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸಲಾಗಿದೆ. ಆದರೆ ಚಿಕ್ಕಮಂಗಳೂರಿನಲ್ಲಿ ಕನ್ನಡ ಬಾವುಟವನ್ನು ಹಾರಿಸಿಲ್ಲವೆಂಬ ಕಾರಣಕ್ಕೆ ಹೆಚ್ಚು ಅಂಕಗಳನ್ನು ಗಳಿಸಿದ್ದ ವಿದ್ಯಾರ್ಥಿ ಹಾಗೂ ಆತನ ಪೋಷಕರು ತಾಲೂಕು ಆಡಳಿತದಿಂದ ಕೊಡುತ್ತಿದ್ದ ಸನ್ಮಾನವನ್ನು ನಿರಾಕರಿಸಿದ್ದಾರೆ.

ಕನ್ನಡ ಧ್ವಜ ಹಾರಿಸಿಲ್ಲವೆಂದು ಸನ್ಮಾನವನ್ನೇ ನಿರಾಕರಿಸಿದ ವಿದ್ಯಾರ್ಥಿ

ಶೃಂಗೇರಿ ತಾಲೂಕು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಂಕೀರ್ತ್ ಕರುವಾನೆ ಪ್ರಶಸ್ತಿ ತಿರಸ್ಕರಿಸಿದ ಬಾಲಕ. ತಂದೆ ನವೀನ್ ಕರುವಾನೆ ಕೂಡ ತಮ್ಮ ಮಗನಿಗೆ ಪ್ರಶಸ್ತಿ ಬೇಡ ಎಂದು ನಿರಾಕರಿಸಿದ್ದಾರೆ. ವಿದ್ಯಾರ್ಥಿ ಸಂಕೀರ್ತ್ 10ನೇ ತರಗತಿ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ 125ಕ್ಕೆ 125 ಅಂಕ ಪಡೆದಿದ್ದ. ಇದೆ ಕಾರಣಕ್ಕೆ ತಾಲೂಕು ಆಡಳಿತ ಮಂಡಳಿ ಸನ್ಮಾನವನ್ನು ಏರ್ಪಡಿಸಿಲಾಗಿತ್ತು. ಆದರೆ ಕನ್ನಡ ರಾಜ್ಯೋತ್ಸವವಾದ ಇಂದು ನಮ್ಮ ಜಿಲ್ಲೆಯಲ್ಲಿ ಕನ್ನಡ ಧ್ವಜವನ್ನು ಹಾರಿಸಿಲ್ಲ ಎಂಬ ಕಾರಣಕ್ಕೆ ನಮಗೆ ಈ ಸನ್ಮಾನ ಬೇಡ ಎಂದು ನಿರಾಕರಿಸಿದ್ದಾರೆ.

ಸನ್ಮಾನ ನಿರಾಕರಿಸಿದ ನಂತರ ಮಾತನಾಡಿದ ಸಂಕೀರ್ತ್ ತಂದೆ “ನನ್ನ ಮಗ ಹೆಚ್ಚಿನ ಅಂಕ ಪಡೆಯಲು ಪ್ರಯತ್ನಿಸಿದ, ಸಹಕರಿಸಿದ ಎಲ್ಲಾ ಶಿಕ್ಷಕರು ಹಾಗೂ ಶಿಕ್ಷಣ ಸಂಸ್ಥೆಗಳಿಗೆ ಅಭಿನಂದಿಸುತ್ತೇನೆ. ಆದರೆ ನನ್ನ ಮಗನಿಗೆ ಈ ಸನ್ಮಾನ ಮಾಡುವುದು ಬೇಡ. ಯಾಕೆಂದರೆ ಕನ್ನಡಿಗರ ಹಬ್ಬ ಕನ್ನಡ ರಾಜ್ಯೋತ್ಸವದಂದು ಕನ್ನಡ ಬಾವುಟವನ್ನು ಹಾರಿಸಿಲ್ಲ ಇದು ನನ್ನ ಕುಟುಂಬಕ್ಕೆ ನೋವು ತಂದಿದೆ. ಹೀಗಾಗಿ ತಾಲೂಕು ಆಡಳಿತ ನೀಡುವ ಸನ್ಮಾನವನ್ನು ಸ್ವೀಕಾರ ಮಾಡುವುದಿಲ್ಲ” ಎಂದು ಹೇಳಿದ್ದಾರೆ.

ಕನ್ನಡ ಬಾವುಟ ಹಾರಿಸದ ಕುರಿತು ಪ್ರತಿಕ್ರಿಯಿಸಿದ ಸಚಿವ ಸಿ.ಟಿ.ರವಿ

ಚಿಕ್ಕಮಗಳೂರಿನ ನೇತಾಜಿ ಸುಭಾಷ್ ಚಂದ್ರ ಭೋಸ್ ಆಟದ ಮೈದಾನದಲ್ಲಿ ಕನ್ನಡ ರಾಜ್ಯೋತ್ಸವದಂದು ಸಚಿವ ಸಿ.ಟಿ.ರವಿ ಕನ್ನಡದ ಬಾವುಟವೇ ಇಲ್ಲದೆ ಹಾರಿಸಿದ್ದಾರೆ. ಇದೇ ವೇಳೆ, ಕನ್ನಡ ರಾಜ್ಯೋತ್ಸವದಂದು ಕನ್ನಡ ಬಾವುಟ ಹಾರಿಸದ ಕುರಿತು ಪ್ರತಿಕ್ರಿಯಿಸಿದ ಅವರು, ಸಾಂಸ್ಕøತಿಕವಾಗಿ ನಾನೂ ಕನ್ನಡ ಧ್ವಜವನ್ನು ಒಪ್ಪಿಕೊಂಡಿದ್ದೇನೆ ಮತ್ತು ಕನ್ನಡದ ಧ್ವಜವನ್ನು ಹಿಡಿದು ಕುಣಿದಿದ್ದೇನೆ. ಈ ಹಿಂದೆಯೂ ಕನ್ನಡ ಬಾವುಟವನ್ನು ಹಾರಿಸಿರಲಿಲ್ಲ ಎಂದು ಹೇಳಿದ್ದಾರೆ.