ವರ್ಷವಾಯಿತು ‘ಬಾರಿಸು ಕನ್ನಡ ಡಿಂಡಿಮವ’ ಹಾಡಿಗೆ

0
1915

ಈ ಕನ್ನಡದ ಹಾಡು ನಿಮ್ಮ ಮೈಜುಮ್ಮೆನಿಸುತ್ತೆ..! ಅನುಮಾನವೇ ಇಲ್ಲ..!

ಒಂದು ವರುಷದ ಹಿಂದೆ ರೋಮಾಂಚನ ಮೂಡಿಸಿದ್ದ , ಕನ್ನಡಿಗರ ಮನದಲ್ಲಿ ಚಿರಕಾಲ ಉಳಿಯುವ ಹಾಡಿದು.. ಎಷ್ಟೋ ಜನರಿಗೆ ತಾವು ಕೂಡ ಕನ್ನಡಿಗರೇ ಎಂದು ನೆನಪು ಮಾಡಿಕೊಟ್ಟ ಹಾಡು.. ಮತ್ತಷ್ಟು ಇಂಥ ಹಾಡುಗಳು ಬರಲಿ..ತಂಡಕ್ಕೆ ಶುಭವಾಗಲಿ

ಜನಜಂಗುಳಿಯಲಿ ರಾಷ್ಟ್ರಕವಿ ಕುವೆಂಪು ಅವರೊಂದಿಗೆ ಯುವಪೀಳಿಗೆಯ ಆಕಸ್ಮಿಕ ಅನುಸಂಧಾನ. ಕುವೆಂಪು ಅವರ ಪ್ರಸಿದ್ಧ ಗೀತೆ – ಬಾರಿಸು ಕನ್ನಡ ಡಿಂಡಿಮವ… ಗೀತೆಯನ್ನು ಹೊಸತಾಗಿ ಪ್ರಸ್ತುತ ಪಡಿಸಿದ್ದಾರೆ ಲೂಸಿಯಾ ಚಿತ್ರದಿಂದ ಖ್ಯಾತರಾದ ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ. ಕರ್ನಾಟಕ ಸರ್ಕಾರ ವಾರ್ತಾ ಇಲಾಖೆ ನಿರ್ಮಿಸಿರುವ ಈ ಹಾಡನ್ನು ನಿರ್ದೇಶಿಸಿದ್ದು ಸುನಿಲ್ ಆರ್. ಮೈಸೂರಿನ ಈ ಮಿತ್ರರು ಮಾಡಿರುವ ಈ ಪ್ರಯತ್ನವನ್ನು ಸಾಮಾಜಿಕ ತಾಣಗಳಲ್ಲಿ ಒಂದು ವರುಷದ ಹಿಂದೆ ಜನ ಕೊಂಡಾಡುತ್ತಿದ್ದರು. ಹಳೆಯ ಪ್ರಸಿದ್ಧ ಗೀತೆಯೊಂದಕ್ಕೆ ಹೊಸ ಮೆರುಗು ಕೊಡುವ ಈ ಪ್ರಯತ್ನವನ್ನು ನೋಡಿ

ಕೇಳಿ ಮತ್ತೊಮ್ಮೆ ಮೈಜುಮ್ಮೆನಿಸಿಕೊಳ್ಳಿ .! ಅನುಮಾನವೇ ಇಲ್ಲ..!