ಏನೇ ಆಗ್ಲಿ ನೀರು ಬಿಡೊಲ್ಲಾರಿ: ಸರ್ವಪಕ್ಷ ಸಭೆಯಲ್ಲಿ ನಿರ್ಧಾರ

0
727

ಬೆಂಗಳೂರು: ೬ ದಿನಗಳ ತಲಾ ೬ ಟಿಎಂಸಿ ನೀರು ಬಿಡಬೇಕು ಹಾಗೂ ಕಾವೇರಿ ನಿರ್ವಹಣಾ ಮಂಡಳಿ ನೇಮಕ ಮಾಡುವ ಸುಪ್ರೀಂ ಕೊರ್ಟ್ ಆದೇಶವನ್ನು ಪಾಲಿಸದೆ ಇರಲು ಕರ್ನಾಟಕ ಸರ್ವಪಕ್ಷ ಸಭೆಯಲ್ಲಿ ಮತ್ತೊಮ್ಮೆ ನಿರ್ಣಯಿಸಲಾಗಿದೆ.

ಸುಪ್ರೀಂಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಶನಿವಾರ ಕರೆಯಲಾಗಿದ್ದ ಸಭೆಯಲ್ಲಿ  ಮೂರು ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಿ  ಅಭಿಪ್ರಾಯ ಸಂಗ್ರಹಿಸಲಾಯಿತು.
ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಮಧ್ಯಸ್ಥಿಕೆಗೆ ಬಿಜೆಪಿ ಸಂಸದರು ಓಲೈಸಲು ಒತ್ತಾಯಿಸಲಾಯಿತು.

  • ಸುಪ್ರೀಂಕೊರ್ಟ್ ಸೂಚನೆ ಮೇರೆಗೆ ತರಾತುರಿಯಲ್ಲಿ ಕೇಂದ್ರ ಸರಕಾರ ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ಮುಂದಾಗಿದ್ದು ಮಂಡಳಿಗೆ ರಾಜ್ಯದ ಪ್ರತಿನಿಧಿಗಳನ್ನು ನೇಮಕ ಮಾಡದೇ ಇರಲು ತಿರ್ಮಾನಿಸಲಾಯಿತು.
  • ಇದೇ ವೇಳೆ ಸಾಂವಿಧಾನಿಕ ಪೀಠದ ಮುಂದೆ ಹೋಗುವುದು ಹಾಗೂ  ಪರಿಶೀಲನಾ ಅರ್ಜಿ ಸಲ್ಲಿಸುವ ಬಗ್ಗೆ ಸರಕಾರದ ವಿವೇಚನೆಗೆ ಬಿಡಲಾಯಿತು.
  • ಇದೇ ವೇಳೆ ಬೆಳೆ ಪರಿಹಾರ ನೀಡುವ ಬದಲು ಬೆಳೆ ಉಳಿಸಿಕೊಳ್ಳಲು ಗದ್ದೆಗಳಿಗೆ ನೀರು ಹರಿಸಲು ಮನವಿ ಕೂಡ ಮಾಡಲಾಯಿತು.