ಪದವಿ ಪೂರ್ವ ಶಿಕ್ಷಣ ಇಲಾಖೆಯು 2017-18 ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಅಂತಿಮ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಇದರಿಂದ ವಿದ್ಯಾರ್ಥಿಗಳಿಗೆ ತಮ್ಮ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಲು ಸಮಯ ನಿಗದಿ ಪಡಿಸಿಕೊಳ್ಳಬಹುದಾಗಿದೆ. ಈ ವರ್ಷದ ಅಂತಿಮ ವೇಳಾಪಟ್ಟಿಯನ್ನು ಬುಧವಾರ ಪ್ರಕಟಿಸಿದ್ದು, ಮಾ.1ರಿಂದ 17ರವರೆಗೆ ಪರೀಕ್ಷೆ ನಡೆಯಲಿದೆ.
ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಅಂತಿಮ ವೇಳಾಪಟ್ಟಿ ಈ ಕೆಳಗಿನಂತಿದೆ:
ದಿನಾಂಕ ವಿಷಯ
1-3-2018 – ಅರ್ಥಶಸ್ತ್ರ ಭೌತವಿಜ್ಞಾನ.
2-3-2018 – ಮಾಹಿತಿ ತಂತ್ರಜ್ಞಾನ, ರಿಟೇಲ್, ಆಟೋಮೊಬೈಲ್, ಹೆಲ್ತ್ ಕೇರ್ ಬ್ಯೂಟಿ ಮತ್ತು ವೆಲ್ನೆಸ್.
3-3-2018 – ಮನಃಶಾಸ್ತ್ರ, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ವಿಜ್ಞಾನ.
5-3-2018 – ವ್ಯವಹಾರ ಅಧ್ಯಯನ, ಜೀವವಿಜ್ಞಾನ.
6-3-2018 – ಉರ್ದು, ಸಂಸ್ಕೃತ.
7-3-2018 – ಭೂಗರ್ಭ ವಿಜ್ಞಾನ, ರಾಜ್ಯ ಶಸ್ತ್ರ.
8-3-2018 – ಐಚ್ಚಿಕ ಕನ್ನಡ, ಲೆಕ್ಕ ಶಸ್ತ್ರ, ರಸಾಯನ ಶಸ್ತ್ರ.
9-3-2018 – ತರ್ಕ ಶಸ್ತ್ರ ಶಿಕ್ಷಣ, ಗೃಹ ವಿಜ್ಞಾನ.
10-3-2018 – ಇತಿಹಾಸ, ಸಂಖ್ಯಾಶಾಸ್ತ್ರ.
12-3-2018 – ಬೇಸಿಕ್ ಮಾಥ್ಸ್, ಗಣಿತ, ಸಮಾಜ ಶಸ್ತ್ರ.
13-3-2018 – ಭೂಗೋಳ ಶಸ್ತ್ರ, ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ.
14-3-2018 – ಕನ್ನಡ.
15-3-2018 – ಹಿಂದಿ.
16-3-2018 – ತಮಿಳು, ತೆಲುಗು, ಮಲಯಾಳಂ, ಮರಾಠಿ, ಅರೇಬಿಕ್, ಫ್ರೆಂಚ್.
17-3-2018 – ಇಂಗ್ಲಿಷ್.
ಎಲ್ಲ ಪರೀಕ್ಷೆಗಳು ಬೆಳಗ್ಗೆ 10.15 ರಿಂದ ಮಧ್ಯಾಹ್ನ 1.30 ರ ವರೆಗೆ ನಡೆಯಲಿವೆ.
ಪದವಿ ಪೂರ್ವ ಶಿಕ್ಷಣ ಇಲಾಖೆಯು, ಅಕ್ಟೋಬರ್ನಲ್ಲಿ ತಾತ್ಕಾಲಿಕ ವೇಳಾಪಟ್ಟಿ ಪ್ರಕಟಿಸಿ ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿತ್ತು, ನಂತರ ಈ ಸಲಹೆ ಮತ್ತು ಸೂಚನೆಗಳನ್ನು ಪರಿಗಣಿಸಿ, ಅಳವಡಿಸಿಕೊಂಡು ಅಂತಿಮ ವೇಳಾಪಟ್ಟಿ ಪ್ರಕಟಿಸಲಾಗಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕಿ ಸಿ.ಶಿಖಾ ತಿಳಿಸಿದ್ದಾರೆ.