ಮೈತ್ರಿ ಸರ್ಕಾರದಲ್ಲಿ ದೊಡ್ಡ ಅಲೆಯೇ ಸೃಷ್ಟಿಯಾಗಿದ್ದು, ಅತೃಪ್ತ ಶಾಸಕರು ಈಗಾಗಲೇ ರಾಜೀನಾಮೆ ನೀಡಿದ್ದಾರೆ ಇವರನ್ನು ವರಿಸಲು ಕಾಂಗ್ರೆಸ್ ಜೆಡಿಎಸ್ ಪಕ್ಷದ ನಾಯಕರುಗಳು ಹಲವು ಅಸ್ತ್ರವನ್ನು ಬಳಸಿದರು ವಿಫಲರಾಗುತ್ತಿದ್ದಾರೆ. ಈ 13 ಶಾಸಕರ ಭವಿಷ್ಯ ಸ್ಪೀಕರ್ ಬಳಿ ಇದೆ. ಸ್ಪೀಕರ್ ಇವರ ರಾಜೀನಾಮೆ ಅಂಗೀಕಾರ ಮಾಡಿದ ಕ್ಷಣದಲ್ಲೇ ಸರ್ಕಾರ ಬೀಳಲಿದೆ. ಇಲ್ಲದಿದ್ದರೆ ಪಕ್ಷಾಂತರ ಕಾಯ್ದೆ ಅಡಿಯಲ್ಲಿ ಈ ಶಾಸಕರನ್ನು ಅನೂರ್ಜಿತಗೊಳಿಸಬಹುದಾಗಿದೆ. ಇಂದು ರಮೇಶ್ ಕುಮಾರ್ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಎನ್ನಲಾಗಿತ್ತು. ಆದರೆ, ಸ್ಪೀಕರ್ ರಮೇಶ್ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ ಎನ್ನಲಾಗುತ್ತಿದೆ. ಈ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.
ಹೌದು ರಮೇಶ್ ಕುಮಾರ್ ಅವರು ತಮಗೆ ಇರುವ ಕಾನೂನು ಬದ್ಧ ಅಧಿಕಾರವನ್ನು ಬಳಸಿ ಈ ಶಾಸಕರ ರಾಜೀನಾಮೆಯನ್ನು ತಿರಸ್ಕರಿಸಲಿದ್ದಾರೆಯೇ ಅಥವಾ ಅವರ ವಿರುದ್ಧ ಪಕ್ಷಾಂತರ ನಿಷೇಧ ಕಾಯ್ದೆಯಡಿ ಕ್ರಮ ತೆಗೆದುಕೊಳ್ಳಲು ಅದೇಶಿಸಲಿದ್ದಾರೆಯೇ ಅಥವಾ ರಾಜೀನಾಮೆಗಳನ್ನು ಅಂಗೀಕರಿಸಿ ಅವರ ಹಾದಿ ಸುಗಮಗೊಳಿಸಲಿದ್ದಾರೆಯೇ ಎಂಬ ಕುತೂಹಲ ಮೂಡಿದೆ. ರಾಜೀನಾಮೆ ನೀಡಿರುವ ಶಾಸಕರನ್ನು ವಿಚಾರಣೆಗೆ ಕರೆಯಿಸುವ ಅಧಿಕಾರ ಅವರಿಗಿದೆ. ಎಲ್ಲ ಶಾಸಕರನ್ನೂ ಪ್ರತ್ಯೇಕವಾಗಿ ಕರೆದು ವಿಚಾರಣೆ ನಡೆಸುತ್ತಾರೆಯೇ ಅಥವಾ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತಾರೆಯೇ ಎಂಬುದನ್ನು ನೋಡಬೇಕಿದೆ.
ಇದಕ್ಕೆ ಪ್ರತಿಕ್ರಿಯೆ ನೀಡಿದ ರಮೇಶ್ ಕುಮಾರ್ ಕೊಳಚೆ ಪ್ರದೇಶದಲ್ಲಿ ವಾಸ ಮಾಡುವವರಿಗೆ ಇಲ್ಲಿ ದುರ್ವಾಸನೆ ಇದೆ ಎಂದರೆ ಹೇಗಾಗುತ್ತದೆ. ನಾನಿರುವುದೇ ಸ್ಲಂನಲ್ಲಿ. ಹೀಗಾಗಿ ಸ್ಲಂನಲ್ಲಿ ಇದ್ದುಕೊಂಡು ಸುಗಂಧದ ಪರಿಮಳ ಬರಬೇಕು ಎಂದರೆ ಆಗುತ್ತಾ? ನನ್ನ ಸ್ಥಾನದಲ್ಲಿ ನಾನು ಹೇಗೆ ವರ್ತಿಸಬೇಕು. ಜನರು ಏನು ನಿರೀಕ್ಷೆ ಮಾಡುತ್ತಾರೆ, ಸಂವಿಧಾನ ಏನು ನಿರೀಕ್ಷೆ ಮಾಡುತ್ತೆ ಇಷ್ಟಕ್ಕೆ ನಾನು ಸೀಮಿತವಾಗಿರುತ್ತೇನೆ. ಸದ್ಯಕ್ಕೆ ಯಾವ ಶಾಸಕರು ಸಮಯ ಕೇಳಿಲ್ಲ. ಜನರ ಭಾವನೆಯನ್ನು ಮನಸ್ಸಿನಲ್ಲಿಟ್ಟುಕೊಂಡು ಕೆಲಸ ಮಾಡುತ್ತೇನೆ. ನಾನು ಯಾವುದೇ ಒತ್ತಡದಲ್ಲಿ ಇಲ್ಲ. ಯೋಚಿಸಿ ತಾಳ್ಮೆಯಿಂದ ನಿರ್ಧಾರ ತೆಗೆದುಕೊಳ್ಳುತ್ತೇನೆ ಮತ್ತು ಪಕ್ಷಾತೀತ ನಿರ್ಧಾರ ತೆಗೆದುಕೊಳ್ಳುತ್ತೇನೆ. ನಾನು ಕಾಂಗ್ರೆಸ್ನಲ್ಲಿ ಇಲ್ಲವಲ್ಲ’ ಎಂದು ಹೇಳಿದ್ದಾರೆ.
ಸಾರ್ವಜನಿಕರ ದೂರು ಆಲಿಸುತ್ತೇನೆ
Also read: ಮೈತ್ರಿ ಸರ್ಕಾರ ಪತನ; ದೋಸ್ತಿ ಸರ್ಕಾರದ 13 ಶಾಸಕರು ರಾಜೀನಾಮೆ? ಸರ್ಕಾರ ಉರುಳಿಸಲು ಕಾರಣವಾಯಿತಾ IMA ಪ್ರಕರಣ?
ಇಂದು ರಾಜೀನಾಮೆ ಕೊಡುವವರು ಇದ್ದರೂ ಕೊಡಲಿ. ಮೊದಲು ಸಾರ್ವಜನಿಕರ ದೂರು ಆಲಿಸುತ್ತೇನೆ. ಮತದಾರರ ಅಭಿಪ್ರಾಯವನ್ನೂ ಸಂಗ್ರಹಿಸುತ್ತೇನೆ. ಮತದಾರರ ಅಭಿಪ್ರಾಯ ಆಲಿಸಿ ನಿರ್ಧಾರ ತೆಗೆದುಕೊಳ್ಳುತ್ತೇನೆ. ಕಚೇರಿಗೆ ದೂರು ನೀಡಿದ್ದರೆ ಪರಿಶೀಲನೆ ಮಾಡುತ್ತೇನೆ. ಯಾರು ಬೇಕಾದರೂ ಬಂದು ಭೇಟಿ ಆಗಬಹುದು. ಜನರಿಗೆ ವೋಟು ಹಾಕುವ ಹಕ್ಕು ಕೊಟ್ಟಿದ್ದೇವೆ. ಆದ್ದರಿಂದ ಅವರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಿಲ್ಲ ಎಂದರೆ ಸಾಕಪ್ಪ ನಿಮ್ಮ ಕೆಲಸ ಎಂದು ಹೇಳುತ್ತಾರೆ. ಶಾಸಕರ ರಾಜೀನಾಮೆಯಿಂದ ನನಗೆ ಬೇಸರವಾಗುವುದಿಲ್ಲ. ಕೊಳಚೆ ಪ್ರದೇಶದಲ್ಲಿ ವಾಸ ಮಾಡುವವರಿಗೆ ಇಲ್ಲಿ ದುರ್ವಾಸನೆ ಇದೆ ಎಂದರೆ ಹೇಗಾಗುತ್ತದೆ. ನಾನಿರುವುದೇ ಸ್ಲಂನಲ್ಲಿ, ಹೀಗಾಗಿ ಸ್ಲಂನಲ್ಲಿ ಇದ್ದುಕೊಂಡು ಸುಗಂಧದ ಪರಿಮಳ ಬರಬೇಕು ಎಂದರೆ ಆಗುತ್ತಾ ಎಂದು ಪ್ರಶ್ನೆ ಮಾಡಿದ್ದಾರೆ.