ಡಿ.ಕೆ.ಶಿವಕುಮಾರ್ ಅವರಿಗೆ ಕೆಪಿಸಿಸಿ ಪಟ್ಟ ಖಚಿತ; ಮಹಾರಾಷ್ಟ್ರ ಮಾದರಿಯಂತೆ ರಾಜ್ಯದಲ್ಲಿ ನಾಲ್ಕು ಮಂದಿ ಕಾರ್ಯಧ್ಯಕ್ಷ ನೇಮಕ.!

0
188

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಹಿರಿಯ ನಾಯಕ ಮಾಜಿ ಸಚಿವ ಡಿಕೆ.ಶಿವಕುಮಾರ್ ಹೆಸರು ಪೈನಲ್ ಆಗಿದೆ. ಕಾಂಗ್ರೆಸ್ ಹೈಕಮಾಂಡ್ ಯಾವುದೇ ಕ್ಷಣದಲ್ಲಿ ಈ ನೇಮಕಾತಿ ಘೋಷಿಸುವ ಸಾಧ್ಯೆತೆಗಳಿವೆ ಎಂಬುವಂತಹ ವಾತಾವರಣ ಇದೀಗ ಪಕ್ಷದಲ್ಲಿ ಸೃಷ್ಟಿಯಾಗಿದೆ. ಮೂಲಗಳ ಪ್ರಕಾರ ರಾಜ್ಯದಲ್ಲಿ ಮಹಾರಾಷ್ಟ್ರದಲ್ಲಿ ಐದು ಮಂದಿ ಕಾರ್ಯಧ್ಯಕ್ಷರನ್ನು ಕಾಂಗ್ರೆಸ್ ನೇಮಕ ಮಾಡಿದೆ ಐದು ಮಂದಿ ಕಾರ್ಯಧ್ಯಕ್ಷರ ಜೊತೆ ಕೆಪಿಸಿಸಿ ಅಧ್ಯಕ್ಷರನ್ನು ನೇಮಕ ಮಾಡಲು ಹೈಕಮಾಂಡ್ ಚಿಂತಿಸಿದ್ದು ಪ್ರಾಂತ್ಯವಾರು ಸಮುದಾಯದ ಆಧಾರದ ಮೇಲೆ ನೇಮಕವಾಗಲಿದೆ ಎನ್ನಲಾಗಿದೆ.

ಹೌದು ಕಾಂಗ್ರೆಸ್ ಹೈಕಮಾಂಡ್ ಆಂಧ್ರಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರನ್ನು ನೇಮಕ ಮಾಡಿ ಗುರುವಾರ ಘೋಷಣೆಮಾಡಿದೆ. ಈ ಮೂಲಕ ಇದರ ಬೆನ್ನಲ್ಲೇ ಕೆಪಿಸಿಸಿ ಅಧ್ಯಕ್ಷರನ್ನಾಗಿ ಡಿಕೆ.ಶಿವಕುಮಾರ್ ಅವರನ್ನು ಘೋಷಿಸುವ ಪೂರ್ವ ತಯಾರಿ ಆರಂಭಿಸಿದೆ. ಈ ಸುದ್ದಿ ಹರಡುತ್ತಿದ್ದಂತೆಯೇ ಅಭಿಮಾನಿಗಲು, ಹರಡುತ್ತಿದ್ದಂತೆಯೇ ಅಭಿಮಾನಿಗಳು ಹಿಂಬಾಲಕರಿಂದ ಶಿವಕುಮಾರ್ ಅವರಿಗೆ ಭಾರೀ ಅಬಿನಂದನೆ ಸಲ್ಲಿಕೆಯೂ ಈಗಾಗಲೇ ಆರಂಭವಾಗಿದೆ. ಸಿದ್ದರಾಮಯ್ಯ ಅವರು ನಿನ್ನೆಯಷ್ಟೇ ದೆಹಲಿಗೆ ಭೇಟಿ ನೀಡಿದ್ದು, ಕೆಪಿಸಿಸಿ ಅಧ್ಯಕ್ಷ ಸ್ಥಾನ ಕುರಿತಂತೆಯೂ ಚರ್ಚೆ ನಡೆಸಿದ್ದಾರೆಂದು ಹೇಳಲಾಗುತ್ತಿದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನದ ಕುರಿತು ರಾಜ್ಯದ ಹಲವು ನಾಯಕರ ಅಭಿಪ್ರಾಯವನ್ನು ಹೈಕಮಾಂಡ್ ಸಂಗ್ರಹಿಸಿದ್ದು.

ಸಿದ್ದರಾಮಯ್ಯ ಅವರು ಸಲ್ಲಿಸಿರುವ ಮೌಖಿಕ ವರದಿಯಿಂದ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕುರಿತು ಶೀಘ್ರದಲ್ಲಿಯೇ ಕಾಂಗ್ರೆಸ್ ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎಂದು ವರದಿಗಳು ತಿಳಿಸಿವೆ. ಡಿ.ಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿ ಆಯ್ಕೆ ಬಹುತೇಕ ಖಚಿತ ಎನ್ನಲಾಗಿದ್ದು ಉತ್ತರ ಕರ್ನಾಟಕದಿಂದ ಲಿಂಗಾಯತ ಸಮುದಾಯದ ಈಶ್ವರ ಖಂಡ್ರೆ, ಮುಂಬೈ ಕರ್ನಾಟಕದಿಂದ ಎಸ್ಟಿ ಸಮುದಾಯದ ಸತೀಶ್ ಜಾರಕಿಹೊಳಿ, ಮೈಸೂರು ಭಾಗಕ್ಕೆ ಎಸ್ಸಿ ಸಮುದಾಯದಿಂದ ಧ್ರುವ ನಾರಯಣ್ ಅಥವಾ ಮಹಾದೇವಪ್ಪ ಕರಾವಳಿ ಕರ್ನಾಟಕ ಭಾಗದಿಂದ ಮುಸ್ಲಿಂ ಕೋಟಾದಡಿ ಯುಟಿ ಖಾದರ್ ಅವರನ್ನ ಕಾರ್ಯಧ್ಯಕ್ಷರನ್ನಾಗಿ ಆಯ್ಕೆ ಮಾಡಬಹುದು ಎಂದು ಕಾಂಗ್ರೆಸ್ ಮೂಲಗಳು ಹೇಳಿವೆ. ಪ್ರತಿಪಕ್ಷ ಹಾಗೂ ಶಾಸಕಾಂಗ ನಾಯಕನಾಗಿ ಸಿದ್ದರಾಮಯ್ಯ ಮುಂದುವರಿಕೆ ಸಾಧ್ಯತೆ ಇದ್ದು ಒಂದು ವೇಳೆ ಶಾಸಕಾಂಗ ಪಕ್ಷದ ನಾಯಕ ಬದಲಿಯಾದರೆ ಅದು ಪರಮೇಶ್ವರ ಅಥವಾ ಎಂ.ಬಿ ಪಾಟೀಲ್ ಅವರಿಗೆ ನೀಡುವ ಸಾಧ್ಯತೆಯಿದೆ.

ಯಾವುದೇ ಲಾಬಿ ಮಾಡಿಲ್ಲ; ಎಂಬಿ ಪಾಟೀಲ್​ ಸ್ಪಷ್ಟನೆ

ಕೆಪಿಸಿಸಿ ಹುದ್ದೆಗಾಗಿ ಯಾವುದೇ ಲಾಬಿಯನ್ನು ನಾನು ಮಾಡಿಲ್ಲ. ನಾನಾಗಲೀ, ಈಶ್ವರ್​ ಖಂಡ್ರೆಯಾಗಲಿ ಹುದ್ದೆ ನಿಭಾಯಿಸುತ್ತೇವೆ ಎಂದಿದ್ದೇವೆ. ಲಿಂಗಾಯತರಿಗೆ ಸ್ಥಾನ ನೀಡಿ ಎಂದು ಕೋರಿಲ್ಲ ಎಂದು ಕಾಂಗ್ರೆಸ್​ ನಾಯಕ ಎಂಬಿ ಪಾಟೀಲ್ ಸ್ಪಷ್ಟಪಡಿಸಿದರು. ಈ ಕುರಿತು ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷರ ಹುದ್ದೆ ಆಯ್ಕೆ ವಿಚಾರದಲ್ಲಿ ಹೈ ಕಮಾಂಡ್​ ನಿರ್ಧಾರವೇ ಅಂತಿಮವಾಗಿದ್ದು, ಇಂದು ನಾಳೆಯೊಳಗೆ ಯಾರನ್ನು ಆಯ್ಕೆ ಮಾಡಲಿದೆ. ಎಲ್ಲದಕ್ಕೂ ಕಾದು ನೋಡೋಣ, ಮುಂಚೆ ಹೇಳಲು ಆಗಲ್ಲ . ನನ್ನ ಅಭಿಪ್ರಾಯ ಸೋನಿಯಾ ಗಾಂಧಿಗೆ ತಿಳಿಸಿದ್ದೇನೆ ಎಂದರು.

ಕಬ್ಬಾಳಮ್ಮಗೆ ಪೂಜೆ ಸಲ್ಲಿಸಿದ ಡಿಕೆಶಿ ತಾಯಿ

ಡಿ.ಕೆ.ಶಿವಕುಮಾರ್ ಅವರ ತಾಯಿ ಗೌರಮ್ಮ ಅವರು ಇಂದು ಬೆಳಗ್ಗೆಯೇ ಕಬ್ಬಾಳಮ್ಮನ ದೇವಾಲಯಕ್ಕೆ ತೆರಳು ವಿಶೇಷ ಪೂಜೆ ಸಲ್ಲಿಸಿದ್ದಾರೆ. ತಮ್ಮ ಮಗ ರಾಜ್ಯ ಕಾಂಗ್ರೆಸ್ ಅಧ್ಯಕ್ಷನಾಗುವ ಕಾಲ ಸನ್ನಿಹಿತವಾಗಿದೆ ಎಂದು ಡಿ.ಕೆ.ಶಿವಕುಮಾರ್ ಹೆಸರಲ್ಲಿ ವಿ‍ಶೇಷ ಪೂಜೆ ಮಾಡಿಸಿದ್ದಾರೆ.