ಶಾಂತಿ ಸೌಹಾರ್ದ್ಯಕ್ಕೆ ಹೆಸರುವಾಸಿಯಾದ ಕರ್ನಾಟಕದಲ್ಲಿ ಅಶಾಂತಿಯ ಬೀಜ ಬಿತ್ತುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಕ್ರಮದ ವಿರುದ್ಧ ಐಪಿಎಸ್ ಅಧಿಕಾರಿಯೊಬ್ಬರು ಗುಡುಗಿದ್ದಾರೆ. ಸರ್ಕಾರ ಹಾಗು ರಾಜಕಾರಣಿಗಳಿಗೆ ತಕ್ಕ ಪಾಠ ಕಲಿಸಲು ದೂರು ಪತ್ರ ಬರೆದಿದ್ದಾರೆ.
ಹೌದು, ಸರ್ಕಾರ ಐಪಿಎಸ್ ಅಧಿಕಾರಿಗಳೊಂದಿಗೆ ನಡೆದುಕೊಳ್ಳುತ್ತಿರುವ ರೀತಿ, ರಾಜಕಾರಣಿಗಳು ಪೋಲೀಸರ ಮೇಲೆ ಹೇರುತ್ತಿರುವ ಒತ್ತಡದಿಂದ ಬೇಸತ್ತು ಐಪಿಎಸ್ ಸಂಘದ ಅಧ್ಯಕ್ಷರಾಗಿರುವ ಎಡಿಜಿಪಿ ಆರ್ ಪಿ ಶರ್ಮಾ ಅವರು ಐಪಿಎಸ್ ಅಧಿಕಾರಿಗಳ ಸಂಘ ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ರತ್ನಪ್ರಭಾ ಅವರಿಗೆ ಪತ್ರ ಬರೆದಿದ್ದಾರೆ.
ಎಡಿಜಿಪಿ ಆರ್ ಪಿ ಶರ್ಮಾ ಅವರು ಇತ್ತೀಚಿಗೆ ನಡೆದ ಘಟನೆಗಳನ್ನು ಪತ್ರದಲ್ಲಿ ವಿವರಿಸಿ, ಯಾವ ರೀತಿ ಐಪಿಎಸ್ ಅಧಿಕಾರಿಗಳನ್ನು ಮತ್ತು ಇತರೆ ಪೊಲೀಸರನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ. ಕೆಲವು ಸೂಕ್ಷ್ಮ ತನಿಖೆ ವೇಳೆ ರಾಜಕಾರಣಿಗಳು ಹಸ್ತಕ್ಷೇಪ ಮಾಡುತ್ತಾರೆ. ಅಲ್ಲದೇ ತನಿಖೆಯ ದಿಕ್ಕು ತಪ್ಪಿಸಿ ರಾಜಕೀಯವಾಗಿ ಬಳಸಿಕೊಳ್ಳಲಾಗುತ್ತಿದೆ.
ಕಳೆದ ವಾರ ಲೋಕಾಯುಕ್ತ ನ್ಯಾ. ವಿಶ್ವನಾಥ್ ಶೆಟ್ಟಿ ಮೇಲೆ ಚಾಕು ಇರಿತ ಪ್ರಕರಣ, ಐಪಿಎಸ್ ಅಧಿಕಾರಿಗಳ ಪದೇ ಪದೇ ವರ್ಗಾವಣೆ, ಪೊಲೀಸರ ವರ್ಗಾವಣೆ, ಮೈಸೂರು ಐಎಎಸ್ ಆಧಿಕಾರಿ ರಶ್ಮಿ ಮೇಲೆ ಕಚೇರಿಯಲ್ಲೆ ಹಲ್ಲೆ ಪ್ರಕರಣ, ಮೈಸೂರು ಡಿಸಿ ಶಿಖಾ ಅವರ ಮೇಲಿನ ದಾಳಿ ಹಾಗೂ ಈ ಸಂಬಂಧ ಎಫ್ಐಆರ್ ದಾಖಲಿಸಿಕೊಳ್ಳಲು ತಡ ಮಾಡಿರುವ ಘಟನೆ, ಯುಬಿ ಸಿಟಿ ಬಳಿ ದಾಳಿ ಪ್ರಕರಣ, ಸರ್ಕಾರಿ ಕಚೇರಿಗೆ ಬೆಂಕಿ ಹಚ್ಚಲು ಯತ್ನಿಸಿದ ರಾಜಕಾರಣಿ ಪ್ರಕರಣಗಳನ್ನು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಬೆಂಗಳೂರು ಆರು ಮಂದಿ ಆಯುಕ್ತರನ್ನು ಬದಲಾಗಿದ್ದಾರೆ. ಐಪಿಎಸ್ ಅಧಿಕಾರಿಗಳಿಗೆ ಸೇವೆ ಸಲ್ಲಿಸಲು ಸ್ವತಂತ್ರ್ಯ ನೀಡಬೇಕು. ಚುನಾವಣೆಗು ಮೊದಲು ಪೊಲೀಸ್ ಆಧಿಕಾರಿಗಳು ಹಾಗೂ ಮಾಜಿ ಪೊಲೀಸರನ್ನು ಸೇರಿಸಿ ಸಭೆ ಮಾಡಬೇಕು ಎಂದು ಪತ್ರದ ಮೂಲಕ ಕೋರಿಕೊಂಡಿದ್ದಾರೆ.
Also Read: ನಿಮ್ಮ ಮೆದುಳು ಎಂಥ ವಿಸ್ಮಯಕಾರಿ ಕೆಲಸಗಳನ್ನು ಮಾಡುತ್ತೆ ಗೊತ್ತ??