ಕರ್ನಾಟಕ ಸರ್ಕಾರ ಖಾಸಗಿ ಶಾಲೆಗಳ ಡೋನೇಷನ್ ಹಾವಳಿಗೆ ಕಡಿವಾಣ ಹಾಕಲಿದೆಯಾ? ಸರ್ಕಾರಿ ಶಾಲೆಗಳ ದುಸ್ಥಿತಿ ಮರೆತಿದ್ದಾರ??

0
728

ಸರ್ಕಾರ ಇತ್ತೀಚಿಗೆ ತರಲು ಇಚ್ಛಿಸಿದ್ದ ಖಾಸಗಿ ವೈದ್ಯಕೀಯ ಸಂಸ್ಥೆಗಳ (ತಿದ್ದುಪಡಿ) ಮಸೂದೆ ವಿರುದ್ಧ ವೈದ್ಯರ ಮುಷ್ಕರ ನಡೆದು ಇನ್ನು ದಿನಗಳು ಕಳೆದಿಲ್ಲ ಆಗಲೇ ಸರ್ಕಾರ ಇನ್ನೊಂದು ಮಸೂದೆ ಜಾರಿಗೆ ತರಲು ಮುಂದಾಗಿದೆ. ಸರ್ಕಾರದ ಮಸೂದೆ ಗೆ ಕೆಲ ಖಾಸಗಿ ಸಂಸ್ಥೆಗಳು ಸಹ ಬೆಂಬಲ ವ್ಯಕ್ತಪಡಿಸಿವೆ. ಯಾವುದು ಆ ಮಸೂದೆ ಅನ್ನೋದನ್ನ ನಾವು ನಿಮಗೆ ತಿಳಿಸ್ತೀವಿ.

ಸರ್ಕಾರ ಜಾರಿಗೆ ತರಲಿಚ್ಚಿಸಿರುವ ಮಸೂದೆಯೇ , ಖಾಸಗಿ ಶಿಕ್ಷಣ ಸಂಸ್ಥೆಗಳ ನಿಯಂತ್ರಣ ಮಸೂದೆ , ಹೌದು ಕೇವಲ ಎಲ್​ಕೆಜಿಗೆ ಮಗು ಸೇರಿಸಬೇಕೆಂದರು ರಾಜ್ಯದಲ್ಲಿ ಕೆಲ ಶಿಕ್ಷಣ ಸಂಸ್ಥೆಗಳು ೮೦ ಸಾವಿರ ದಿಂದ ೨ ಲಕ್ಷದವರೆಗೂ ಹಣ ಕೇಳುತ್ತಿವೆ. ಹೀಗೆ ಪೋಷಕರಿಂದ ಹಗಲು ದರೋಡೆಗಿಳಿದ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ನಿಯಂತ್ರಣ ಹಾಕಲು ಖಾಸಗಿ ಶಿಕ್ಷಣ ಸಂಸ್ಥೆಗಳ ನಿಯಂತ್ರಣ ಕಾಯ್ದೆ ಜಾರಿಗೆ ತರಲು ಸರ್ಕಾರ ಚಿಂತಿಸುತ್ತಿದೆ.

ಈ ಶಿಕ್ಷಣ ಕಾಯ್ದೆಯ ತಿದ್ದುಪಡಿಯನ್ನು ಕೇವಲ ಪೋಷಕರು ಮಾತ್ರವಲ್ಲದೆ , ಹಲವು ಖಾಸಗಿ ಶಾಲೆಗಳೇ ಬೆಂಬಲಿಸಲು ಮುಂದಾಗಿವೆ ಅಚ್ಚರಿ ಅನಿಸಿದರೂ ಇದು ನಿಜ , ಕಾರ್ಪೊರೇಟ್ ಶಾಲೆಗಳು ಮತ್ತು ಹೈಟೆಕ್ ಶಾಲೆಗಳು ವಸೂಲಿ ಮಾಡುತ್ತಿರೋ ಹಣದಿಂದ ಬಜೆಟ್ ಶಾಲೆ​ಗಳಿಗೆ ಕೆಟ್ಟ ಹೆಸರು ಬರುತ್ತಿದೆ ಎಂಬುದು ಖಾಸಗಿ ಶಾಲೆಗಳ ಅಭಿಪ್ರಾಯ.

ಸರ್ಕಾರ ಖಾಸಗಿ ಶಾಲೆಗಳ ವಿದೇಯಕದ ಅಷ್ಟು ಬೇಗ ಗಮನಹರಿಸಿದ ಹಾಗೆ , ಸರ್ಕಾರಿ ಶಾಲೆಗಳ ದುಸ್ಥಿತಿ ಬಗ್ಗೆ ಗಮನಹರಿಸಿದ್ದರೆ ಎಷ್ಟೋ ಒಳ್ಳೆಯದು. ಜನ ಕೂಡ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಹಾಕುವ ಪ್ರಮೇಯ ಬರುತ್ತಿರಲಿಲ್ಲ. ಈ ನಿಟ್ಟಿನಲ್ಲಿ ಸರ್ಕಾರ ಯೋಚಿಸಿದರೆ ಇಂತ ಅನೇಕ ಖಾಸಗಿ ಕಾಯ್ದೆಗಳನ್ನು ತರಲು ವೆಚ್ಚ ಮಾಡುವ ಜನರ ತೆರಿಗೆ ಹಣ , ಸಮಯ ಉಳಿಸಿದಂತಾಗುತ್ತದೆ.

ಶಿಕ್ಷಣ ಇಲಾಖೆ ಅಧಿಕಾರಿಗಳಿಗೂ ನಿಯಂತ್ರಿಸೋಕೆ ಸಾಧ್ಯವಾಗದ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು , ಕೇವಲ ವಿಧೇಯಕದ ಮೂಲಕ ಸರ್ಕಾರ ನಿಯಂತ್ರಿಸಲು ಸಾಧ್ಯವೇ ಎಂಬುದು ಹಲವರ ವಾದ.

ಒಟ್ಟಿನಲ್ಲಿ ಈ ವಿಧೇಯಕ ಜಾರಿಯಾದ್ರೆ ಸರ್ಕಾರ ಮಕ್ಕಳ ಪೋಷಕರ ಮೇಲಿರುವ ಹೊರೆಯನ್ನು ಕಡಿಮೆ ಮಾಡಿದಂತಾಗುತ್ತದೆ.