ಮುಖ್ಯ ಕಾರ್ಯದರ್ಶಿ ರತ್ನಪ್ರಭಾರವರಿಂದ ಜನ ಸ್ಪಂದನಾ ಕಾರ್ಯಕ್ರಮ, ಜನರ ಕುಂದುಕೊರತೆಗಳಿಗೆ ಆಸರೆಯಾಗಲಿದೆಯೇ?

0
674

‘ಜನ ಸೇವೆಯೇ ನನ್ನ ಮೊದಲ ಆದ್ಯತೆ’ ಜನರಿಗೆ ಭ್ರಷ್ಟಾಚಾರ ಮುಕ್ತ ಹಾಗು ಪಾರದರ್ಶಕ ಸೇವೆ ನೀಡುವುದೆ ನಮ್ಮ ಮೊದಲ ಗುರಿ ಎಂಬ ಸಂದೇಶವನ್ನು ರಾಜ್ಯ ಸರ್ಕಾರದ ನೂತನ ಮುಖ್ಯ ಕಾರ್ಯದರ್ಶಿ ಹಾಗು ಜನಪ್ರಿಯ ಮಹಿಳಾ ಐಎಎಸ್ ಅಧಿಕಾರಿ ಕೆ. ರತ್ನಪ್ರಭ ಅವರು ಮಾಧ್ಯಮ-ಗೋಷ್ಠಿಯಲ್ಲಿ ಹೇಳಿದರು.

ಇನ್ನು ಇವರ ಬಗ್ಗೆ ಹೇಳಬೇಕಾದರೆ, ಕೆ. ರತ್ನಪ್ರಭಾ ಅವರು 1981 ರ ಕರ್ನಾಟಕ ವೃಂದದ ಐಎಎಸ್‌ ಅಧಿಕಾರಿ. ಹೈದೆರಾಬಾದ್-ನ ಸೈಂಟ್‌ ಜಾರ್ಜ್‌ ಗ್ರಾಮರ್‌ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿದ ನಂತರ, ನಗರದ ಕೊಠಿ ಮಹಿಳಾ ಕಾಲೇಜಿನಲ್ಲಿ ಪದವಿ ಪೂಣಗೊಳಿಸಿ. ಪ್ರಸಿದ್ಧ ಓಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಆಂಗ್ಲ ಭಾಷೆ ಮತ್ತು ಸಮಾಜ ಶಾಸ್ತ್ರ ವಿಷಯಗಳಲ್ಲಿ ಎಂ.ಎ ಸ್ನಾತಕೋತ್ತರ ಪದವಿ ಪಡೆದರು. ನಾಗರಿಕ ಸೇವೆಯಲ್ಲಿ ಇವರಿಗೆ ಸುಮಾರು 36 ವರ್ಷಗಳ ಅನುಭವ ಇದೆ. ಕೈಗಾರಿಕೆ, ಐಟಿ, ಇ–ಆಡಳಿತ, ಸಾಮಾಜಿಕ ಕ್ಷೇತ್ರಗಳಿಗೆ ಸಂಬಂಧಿಸಿದ ಇಲಾಕೆಗಳಲ್ಲಿಯು ಕಾರ್ಯನಿರ್ವಸಿದ ಅನುಭವವಿದೆ.

ರಾಜ್ಯ ಸರ್ಕಾರದ ಅತ್ಯುನ್ನತ ಹುದ್ದೆಗೇರಿದ್ದರಿಂದ ಸಂತೋಷವಿದೆ, ಜನ ಸ್ಪಂದನ ಮತ್ತು ಜನ ಸಂಪರ್ಕಕ್ಕೆ ನನ್ನ ಮೊದಲ ಆದ್ಯತೆ. ರಾಜ್ಯದಲ್ಲಿ ಮಹಿಳೆಯರ ಸುರಕ್ಷತೆಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಡಿಜಿಪಿ ಅವರ ಜತೆ ಮಾತನಾಡಿದ್ದೇನೆ. ಸಾರ್ವಜನಿಕರ ಕಷ್ಟಗಳನ್ನು ಕೇಳಲು ಮತ್ತು ಅವುಗಳನ್ನು ಕೊಡಲೇ ಪರಿಹರಿಸಲು ಒಂದು ಹೊಸ ವ್ಯವಸ್ಥೆಯನ್ನು ರೂಪಿಸುತ್ತೇನೆ, ಜನತಾ ದರ್ಶನ ನಡೆಸುವ ಆಲೋಚನೆ ಇದೆ ಎಂದರು.

ಸುಭಾಷ್‌ ಚಂದ್ರ ಖುಂಟಿ ಅವರಿಂದ ಸಂಜೆ ಅಧಿಕಾರ ಸ್ವೀಕರಿಸುವಾಗ ಮುಖ್ಯ ಕಾರ್ಯದರ್ಶಿ ಕಚೇರಿ ಒಳಗೆ ರತ್ನಪ್ರಭ ಅವರ ಬಂಧುಗಳು ಮತ್ತು ಅಭಿಮಾನಿಗಳು ಸೇರಿದ್ದರು. ಅಧಿಕಾರ ಸ್ವೀಕಾರ ಪತ್ರಕ್ಕೆ ಸಹಿ ಹಾಕುವಾಗ ‘ರತ್ನಪ್ರಭ ಜಿಂದಾಬಾದ್‌’ ಎಂಬ ಘೋಷಣೆಗಳು ಕೇಳಿ ಬಂದವು. ಬೀದರ್‌ನಿಂದ ಚಾಮರಾಜನಗರದವರೆಗೆ ರಾಜ್ಯದ ಎಲ್ಲ ಕಡೆಗಳಿಂದಲೂ ಬಡವರು, ಮಹಿಳೆಯರು, ಯುವಕರು ಶುಭ ಕೋರಿದ್ದಾರೆ, ಈ ಹುದ್ದೆಗೆ ಆಯ್ಕೆ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನನ್ನ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದರು.

ಅಂದಹಾಗೆ ರತ್ನಪ್ರಭಾ ಅವರು ಮುಖ್ಯ ಕಾರ್ಯದರ್ಶಿಯಾಗಿ ನಾಲ್ಕು ತಿಂಗಳು ಕಾರ್ಯ ನಿರ್ವಹಿಸಲಿದ್ದಾರೆ. ಮಾರ್ಚ್‌ ಅಂತ್ಯಕ್ಕೆ ಅವರು ನಿವೃತ್ತಿ ಹೊಂದಲಿದ್ದಾರೆ. ಅಷ್ಟರೊಳಗೆ ಅವರು ಇತಿಹಾಸ ಸೃಷ್ಟಿಸುವಂತಹ ಕೆಲಸಗಳನ್ನು ಮಾಡಲಿ ಎಂಬುದು ಅಭಿಮಾನಿಗಳ ಆಶಯವಾಗಿದೆ.