2025ರ ಕರ್ನಾಟಕ ಕನಸಿನ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ, ಅಲ್ಲಿಯವರೆಗೂ ಅವರೇ ಸಿ.ಎಂ. ಆಗಿರುತ್ತಾರೆಯೇ?

0
421

Kannada News | Karnataka News

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ರಾಜ್ಯದ ಜನರಿಗೆ ಎಂದರೊಂದು ಭಾಗ್ಯ ಯೋಜನೆಗಳನ್ನು ನೀಡುತ್ತಿದೆ. ಈಗ ಸಿಎಂ 2025 ರ ವೇಳೆಗೆ ರಾಜ್ಯವನ್ನು, ದೇಶದಲ್ಲಿಯೇ ಒಂದು ಮಾದರಿ ರಾಜ್ಯವನ್ನಾಗಿ ಪರಿವರ್ತಿಸಲು ಒಂದು ಹೊಸ ಯೋಜನೆಯನ್ನು ಬಿಡುಗಡೆ ಮಾಡಿದ್ದಾರೆ.

ಹೌದು, 2025 ರ ವೇಳೆಗೆ ಕರ್ನಾಟಕವನ್ನು ದೇಶದಲ್ಲಿಯೇ ಮಾದರಿ ರಾಜ್ಯವನ್ನಾಗಿ ಮಾಡುತ್ತೇವೆ ಅದಕ್ಕೆಂದೇ ನಾವು “ನವ ಕರ್ನಾಟಕ ವಿಷನ್‌–೨೦೨೫” ಎಂಬ ಹೊಸ ಯೋಜನೆಯನ್ನು ಬಿಡುಗಡೆ ಮಾಡುತ್ತಿದ್ದೇವೆ ಎಂದರು. ಇನ್ನು ಈ ಯೋಜನೆಯ ಮೂಲಕ ಯಾವ ರೀತಿ ರಾಜ್ಯದ ಅಭಿವೃದ್ಧಿಯಾಗಲಿದೆ ಎಂಬ ವಿವರಣೆ ಇಲ್ಲಿದೆ ನೋಡಿ.

ಸುಮಾರು 93 ಪುಟಗಳ ಮುನ್ನೋಟ ದಾಖಲೆಯಲ್ಲಿ ಕರ್ನಾಟಕ ಅಭಿವೃದ್ಧಿ ಮಾದರಿಯಲ್ಲಿ 8 ತತ್ವ, ಎಲ್ಲರನ್ನು ಒಳಗೊಳ್ಳುವ ಬೆಳವಣಿಗೆಗಾಗಿ 10 ತತ್ವ ಮತ್ತು ಸಾಮಾಜಿಕ– ಆರ್ಥಿಕ ಅಭಿವೃದ್ಧಿಗಾಗಿ 13 ಬೆಳವಣಿಗೆ ವಲಯಗಳನ್ನು ಗುರುತಿಸಲಾಗಿದೆ. ಇದಲ್ಲದೆ ಬೆಂಗಳೂರು, ಬೆಳಗಾವಿ, ಕಲಬುರ್ಗಿ ಮತ್ತು ಮೈಸೂರು ಪ್ರದೇಶಗಳಲ್ಲಿ ಉದ್ಯೋಗ ಹೆಚ್ಚಿಸಲು ಹೆಚ್ಚಿನ ಒಟ್ಟು ನೀಡಲಾಗುವುದು ಎಂದರು.

ರಾಜ್ಯದ ಉತ್ಪನ್ನವನ್ನು (GSDP) 24.3 ಲಕ್ಷ ಕೋಟಿ ಗೆ ಹೆಚ್ಚಿಸುವುದು. ಈ ಮೂಲಕ ಬೆಳವಣಿಗೆ ದರವನ್ನು ಶೇ 8.5 ಕ್ಕೆ ಏರಿಸುವುದು. ತಲಾ ಆದಾಯದ ವರಮಾನ 2.73 ಲಕ್ಷಕ್ಕೆ ಹೆಚ್ಚಿಸುವುದು ಮತ್ತು 75 ಲಕ್ಷ ಹೆಚ್ಚುವರಿ ಉದ್ಯೋಗಗಳ ಸೃಷ್ಟಿಯಾಗಲಿವೆಯಂತೆ.

ಒಟ್ಟಿನಲ್ಲಿ ಸರ್ಕಾರ ಅವಧಿ ಮುಗಿಯುತ್ತಿರುವಾಗ ಸಿಎಂ 2025 ರ ಕನಸಿನ ಯೋಜನೆ ಜಾರಿ ಮಾಡಿರುವುದು ಎಷ್ಟು ಸೂಕ್ತ ನೀವೇ ಯೋಚಿಸಿ…!!

Also Read: ಹಿಂದುಳಿದ ವರ್ಗಗಳ ಮತಗಳನ್ನು ತಮ್ಮತ್ತ ಸೆಳೆಯಲು ಇಂದು ಬಿಜೆಪಿಯ ಬೃಹತ್ ಸಮಾವೇಶ…!!