ಕರ್ನಾಟಕಕ್ಕೆ ಹೆಚ್ಚಿದ ಬರದ ಶಾಪ; ಕರಾವಳಿ ಕ್ಷೇತಕ್ಕೂ ತಟ್ಟಿದ ಭೀಕರ ಬರ!!

0
913
ಕರ್ನಾಟಕ ಕರಾವಳಿ ಪ್ರದೇಶ ಭಾರೀ ಮಳೆಯಾಗುವ ಪ್ರದೇಶ. ಆದರೆ ಈ ಬಾರಿ ಮಳೆ ಬಾರದೆ ಬರದ ಛಾಯೆ ಮೂಡಿದೆ. ರಾಜ್ಯ ಸರ್ಕಾರ ದಕ್ಷಿಣ ಕನ್ನಡ ಎರಡು ಹಾಗೂ ಉತ್ತರ ಕನ್ನಡ ಏಳು ತಾಲುಕಗಳನ್ನು ಬರ ಪೀಡಿತ ತಾಲೂಕಗಳೆಂದು ಘೋಷಣೆ ಮಾಡಿವೆ.
Image result for drought karnataka
ಕಳೆದ ವರ್ಷ ಎರಡು ಕರಾವಳಿ ರಾಜ್ಯಗಳಲ್ಲಿ ನೀರಿನ ಕೊರತೆ ಕಂಡು ಬಂದಿತ್ತು. ಅಲ್ಲದೆ ಮಳೆ ಇಲ್ಲದೆ ಅಂತರ್ಜಲದಲ್ಲೂ ಕುಸಿತ ಕಂಡು ಬಂದಿತ್ತು. ಆದರೆ ಈ ಬಾರಿ ಅಕ್ಟೋಬರ್‌ನಿಂದ ಡಿಸೆಂಬರ್ ವರೆಗೂ ಮಳೆ ಕಾಣದೆ ಜನ ಕಂಗಾಲಾಗಿದ್ದಾರೆ. ಇದನ್ನೆಲ್ಲಾ ಪರಿಗಣಿಸಿದ ಕರ್ನಾಟಕ ಸರ್ಕಾರ ತಾಲೂಕಗಳಿಗೆ ಬರೆಯ ಪಟ್ಟಿ ಅಂಟಿಸಿವೆ.
ಒಂದು ವರದಿಯ ಅನುಸಾರ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಸಾಮಾನ್ಯವಾಗಿ ೪೦೦೦ ಮಿಲಿ ಮೀಟರ್ ಮಳೆ ನೀರು ಸಂಗ್ರಹಣೆ ಆಗುತ್ತಿತ್ತು. ಆದರೆ ಇದೇ ಮೊದಲ ಬಾರಿಗೆ ಈ ಜಿಲ್ಲೆಗಳನ್ನು ಬರ ಪೀಡಿತ ಎಂದು ಘೋಷಿಸಲಾಗಿವೆ. ಬಂಟ್ವಾಳದಲ್ಲಿ ಸಾಮಾನ್ಯವಾಗಿ ೨೧೩ ಮಿ.ಮಿ ಮಳೆ ಬೀಳುತ್ತಿದ್ದರೆ, ಈ ಬಾರಿ ಈ ಮಳೆಯ ಪ್ರಮಾಣ ೭೦.೮ಕ್ಕೆ ಇಳಿದಿದೆ. ಇನ್ನು ಮಂಗಳೂರಿನಲ್ಲೂ ೩೦೩ ಮಿ.ಮಿ ಮಳೆ ಬಿಳುತ್ತಿದ್ದು, ಈ ಬಾರಿ ೯೨.೫ ಮಳೆ ದಾಖಲಾಗಿದೆ.
Image result for drought karnataka
ಬರ ಪೀಡಿತ ತಾಲೂಕಗಳಿಗೆ ೬೦ ಲಕ್ಷ ಹಣ ನೀಡಲಾಗುತ್ತದೆ. ಇದರಲ್ಲಿ ೪೦ ಲಕ್ಷ ಪರಿಹಾರ ಕೆಲಸಗಳಿಗೆ ಬಳಸಲು ಸೂಚಿಸಲಾಗಿದೆ. ಇನ್ನು ರಾಜ್ಯದ ಎಲ್ಲ ಜನಪ್ರತಿನಿಧಿಗಳು ಬರ ಪೀಡಿತ ತಾಲೂಕಗಳಿಗೆ ಸಹಾಯ ಮಾಡಬೇಕೆಂದು ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.
ಮರ ಕಡಿಯುವುದು, ಸರಿಯಾಗಿ ಮಳೆ ನೀರನ್ನು ಶೇಖರಣೆ ಮಾಡದೇ ಇರುವುದುದರಿಂದಲೇ ರಾಜ್ಯದಲ್ಲಿ ಈ ಪರಿಸ್ಥೀತಿ ಎದುರಾಗಿದೆ ಎಂದು ಪರಿಸರ ಜೀವಶಾಸ್ತ್ರಜ್ಞ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದೇ ಪರಿಸ್ಥಿತಿ ಮುಂದು ವರೆದಲ್ಲಿ ರಾಜ್ಯ ಇನಷ್ಟು ಕೆಟ್ಟ ದಿನಗಳನ್ನು ನೋಡುವ ದೂರ ಇಲ್ಲವೆಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.