ಪಟಾಕಿಯನ್ನು ನಿಯಂತ್ರಿಸಿ ಮಕ್ಕಳ ಬಾಳನ್ನೂ ಬೆಳಗಿಸಿ.. ದೀಪದ ಬೆಳಕಿನಲ್ಲಿ ಅಂಧಕಾರವನ್ನೂ ತೊಲಗಿಸಿ

0
689

ನಮ್ಮ ಹಿಂದೂ ಸಂಪ್ರದಾಯದಲ್ಲಿ ಅತಿ ವಿಜೃಂಭಣೆಯಿಂದ ಮಾಡುವ ಹಬ್ಬಗಳಲ್ಲಿ ದೀಪಾವಳಿಯೂ ಒಂದು..
ಮೊದಲು ಈ ಹಬ್ಬದ ಮಹತ್ವವನ್ನು ತಿಳಿದುಕೊಂಡು ನಂತರ ವಿಚಾರಕ್ಕೆ ಬರೋಣ..

ಪುರಾಣದ ಪ್ರಕಾರ ಶ್ರೀ ರಾಮ ರಾವಣನನ್ನು ಗೆದ್ದು ಸೀತೆ ಮತ್ತು ಲಕ್ಷ್ಮಣರೊಂದಿಗೆ ಅಯೋಧ್ಯೆಗೆ ಮರಳಿದ ಸಮಯವೆಂದು ದೀಪಾವಳಿಯನ್ನು ಕೆಲವರು ಆಚರಿಸುತ್ತಾರೆ..
ಅಮಾವಾಸ್ಯೆಯ ಹಿಂದಿನ ದಿನ (ನರಕ ಚತುರ್ದಶಿ) ಶ್ರೀಕೃಷ್ಣ ನರಕಾಸುರನನ್ನು ಸಂಹರಿಸಿದ ದಿನ ಎಂದು ಹೇಳಲಾಗುತ್ತದೆ.
ದೀಪಾವಳಿಯೊಂದಿಗೆ ಇನ್ನಿತರ ಪುರಾಣಗಳೂ ಸಂಬಂಧಿತವಾಗಿದೆ. ಉದಾಹರಣೆಗೆ, ಬಲಿ-ವಾಮನರ ಕಥೆ ಮತ್ತು ಬಲಿಯ ತ್ಯಾಗವನ್ನು ಅಮಾವಾಸ್ಯೆಯ ಮರುದಿನ ಬಲಿಪಾಡ್ಯಮಿಯಾಗಿ ಆಚರಿಸಲಾಗುತ್ತದೆ.

ಒಟ್ಟಿನಲ್ಲಿ ದೀಪಾವಳಿಯಲ್ಲಿ ಕೇಡಿನ ಮೇಲೆ ಶುಭದ ವಿಜಯವನ್ನು ಆಚರಿಸಲಾಗುತ್ತದೆ.

ಹ ಈಗ ವಿಷಯಕ್ಕೆ ಬರೋಣ.. ದೀಪಾವಳಿ ಹಬ್ಬವನ್ನು ಪಟಾಕಿ ಹೊಡೆಯುವುದರ ಮೂಲಕ ಆಚರಿಸುವುದು ಅಭ್ಯಾಸ.. ಆದರೆ ಇದರಿಂದ ನಮ್ಮ ಪರಿಸರ ಎಷ್ಟರ ಮಟ್ಟಿಗೆ ಹಾಳಾಗುತ್ತಿದೆ ಎಂಬ ಪರಿಕಲ್ಪನೆಯೂ ಕೂಡ ನಮಗಿಲ್ಲ.

ಪ್ರತೀ ವರ್ಷ ಪಟಾಕಿಯಿಂದ ಎಷ್ಟೋ ಮಕ್ಕಳ ಬಾಳು ಕುರುಡಾಗುತ್ತಲೇ ಬಂದಿದೆ..ಪಟಾಕಿಯಿಂದ ಕಣ್ಣು ಕಳೆದುಕೊಂಡ ಮಕ್ಕಳ ಹೆತ್ತವರ ಸ್ಥಿತಿ ಶೋಚನೀಯ ವಾದದ್ದು.. ಅವರ ಸಂಕಟ ಹೇಳತೀರದು.. ಅನುಭವಿಸಿದವರಿಗಷ್ಟೇ ಗೊತ್ತು ಆ ನೋವು.. ನಮ್ಮ ಹಣವನ್ನು ಕೊಟ್ಟು ನಾವೇ ನಮ್ಮ ಕಣ್ಣನ್ನೂ ಕಳೆದುಕೊಳ್ಳುವ ಜಾಣಪೆದ್ದರಾಗಿದ್ದೇವೆ.

ಹೌದು ಆಚರಣೆ ಅವಷ್ಯಕ.. ಆದರೇ ಪಟಾಕಿಯಿಂದಲೇ ಹಬ್ಬ ಮಾಡಬೇಕೆಂಬುದು ಮೂರ್ಖತನ.. ದೀಪಗಳನ್ನು ಬೆಳಗಿ ಅಂಧಕಾರವನ್ನು ತೊಲಗಿಸಿ.. ಪರಿಸರವನ್ನು ಉಳಿಸಿ.. ಮಕ್ಕಳು ನಮ್ಮ ಆಸ್ತಿ.. ಸಣ್ಣ ಸಂಭ್ರಮದ ಆಸೆಗೆ ಅವರ ಬಾಳನ್ನೇ ಕುರುಡಾಗಿಸಬೇಡಿ.. ಪರಿಸರ ಈಗಾಗಲೇ ಅತ್ಯಂತ ಕೆಟ್ಟ ಸ್ಥಿತಿ ತಲುಪುತ್ತಿದೆ.. ಇನ್ನೂ ಹಾಳಾಗಲು ನೀವು ಕಾರಣರಾಗಬೇಡಿ.

ಶುಭವಾಗಲಿ ನಮ್ಮ ಹಬ್ಬ ಬೆಳಕನ್ನು ತರಲಿ.. ಅಂಧಕಾರವನ್ನು ತೊಲಗಿಸುವ ಹಬ್ಬವಾಗಲಿ..