ಸರ್ಕಾರದ ಕೆಲಸ ದೇವರ ಕೆಲಸ”, ಒಂದು ಬಾರಿ ಕೆಲಸವನ್ನು ಗಿಟ್ಟಿಸಿಕೊಂಡರೆ ಸಾಕು ದೇವರು ಬಂದು ಹೇಳುವತನಕ ಕೆಲಸ ಮಾಡಲ್ಲ ಎನ್ನವವರ ಮಧ್ಯೆ ಈ ಅಧಿಕಾರಿ ಏನು ಮಾಡಿದರು ಗೊತ್ತೇ?

0
925

“ಸರ್ಕಾರದ ಕೆಲಸ ದೇವರ ಕೆಲಸ”, ಒಂದು ಬಾರಿ ಕೆಲಸವನ್ನು ಗಿಟ್ಟಿಸಿಕೊಂಡರೆ ಸಾಕು ದೇವರು ಬಂದು ಹೇಳುವತನಕ ಕೆಲಸ ಮಾಡುವ ಪ್ರಮೇಯವೇ ಇಲ್ಲ, ಮಾವನ ಮನೆಯ ಹಾಗೆ ಯಾವ ಸಮಯಕ್ಕೆ ಬೇಕಾದರೂ ಹೋಗಬಹುದು ತಡವಾಗಿಹೋದರು ಪರವಾಗಿಲ್ಲ, ಯಾರು ಕೇಳುವುದಿಲ್ಲ, ತಿಂಗಳಿಗೆ ಸರಿಯಾಗಿ ಸಂಬಳ ಬ್ಯಾಂಕ್ ಖಾತೆಗೆ ಬರುತ್ತದೆ ಎನ್ನುವ ಲೆಕ್ಕಾಚಾರವಿರುವ ಈ ಕಾಲದಲ್ಲಿ ಕಚೇರಿಗೆ ಲೇಟ್ ಆಗಿ ಬರುತ್ತಿದ್ದೇನೆ ಎಂದು ತಮಗೆ ತಾವೇ ನೋಟೀಸ್ ಜಾರಿ ಮಾಡಿಕೊಂಡಿದ್ದಾರೆ ಈ ಅಧಿಕಾರಿ.

ಹೌದು, ಕಚೇರಿಗೆ ತಡವಾಗಿ ಬರುತ್ತಿದ್ದೇನೆ ಎಂದು ತಮಗೆ ತಾವೇ ಎಚ್ಚರ ಪಾತ್ರವನ್ನು ಜಾರಿ ಮಾಡಿಕೊಂಡಿದ್ದಾರೆ ಈ ಅಧಿಕಾರಿ. ಯಾರು ಆ ಅಧಿಕಾರಿ ಎನ್ನುವ ಕುತೂಹಲ ನಿಮಗೆ ಇದ್ದೇ ಇರುತ್ತದೆ ಎಂದು ಗೊತ್ತು, ಅವರ ಹೆಸರು ಬಿಸ್ವಾನಾಥ್ ಸಿನ್ಹಾ, ಸಿನ್ಹಾ ಈ ವರ್ಷದ ಮೊದಲ ದಿನದಂದು ತಡವಾಗಿ ಬಂದರು, ಮತ್ತು ಅವರು ಎರಡು ದಿನಗಳ ಕಾಲ ಇದೆ ಮುಂದುವರಿಸಿದರು, ಲಿಸ್ಟಿನ ಪ್ರಕಾರ ಅವರು ಈ ಮೂರು ದಿನಗಳು ಸುಮಾರು ಒಂದು ಗಂಟೆ ತಡವಾಗಿ ಬಂದಿದ್ದರು.

ಕೇರಳ ಐಎಎಸ್ ಅಧಿಕಾರಿ ಬಿಸ್ವಾನಾಥ್ ಸಿನ್ಹಾ, ಕಚೇರಿಗೆ ತಡವಾಗಿ ಬರುತ್ತಿದ ಕಾರಣ ತಮಗೆ ತಾವೇ ಶೋಕಾಸ್ ನೋಟೀಸ್ ಜಾರಿಮಾಡಿಕೊಂಡು ಕರ್ತವ್ಯ ನಿಷ್ಠೆಗೆ ಮಾದರಿಯಾಗಿದ್ದಾರೆ. ರಾಜ್ಯ ಸರಕಾರ ತಮ್ಮ ಸಂಬಳ ಖಾತೆಯೊಂದಿಗೆ ಸಂಪರ್ಕ ಹೊಂದಿದ ಸಚಿವಾಲಯದ ಬಯೋಮೆಟ್ರಿಕ್ ಮೂಲಕ ಪ್ರವೇಶ ವ್ಯವಸ್ಥೆಯನ್ನು ಪ್ರಾರಂಭಿಸಿದ ಒಂದು ತಿಂಗಳ ನಂತರ ಅವರು ಈ ಕ್ರಮ ಕೈಗೊಂಡಿದ್ದಾರೆ.

ಸರ್ಕಾರ ಇದೆ ಜ.1 ರಿಂದ ಕಚೇರಿಗೆ ತಡವಾಗಿ ಹಾಜರಾಗುವವರಿಗೆ ಒಂದು ಪೂರ್ಣ ದಿನದ ವೇತನವನ್ನು ಹಿಂಪಡೆಯಲಾಗುತ್ತದೆ ಎಂದು ನಿಯಮ ರೂಪಿಸಿದ್ದರು. ಈ ನಿಯಮವು ಒಂದು ಗಂಟೆಯ ತಡವಾಗಿ ಅಥವಾ ಮೂರು ದಿನಗಳವರೆಗೆ ಸತತವಾಗಿ ನಿಯಮ ಪಾಲಿಸದ ಯಾರಿಗಾದರೂ ಅನ್ವಯಿಸುತ್ತದೆ. ಈ ಕಾನೂನುಗಳನ್ನು ಉಲ್ಲಂಘಿಸುವವರು ರಜೆಯ ಜೊತೆಯಲ್ಲಿ ಸಂಬಳವನ್ನು ಕಳೆದುಕೊಳ್ಳುತ್ತಾರೆ ಎಂದು ನಿಯಮ ಜಾರಿಗೊಳಿಸಲಾಗಿತ್ತು.

ಒಟ್ಟಿನಲ್ಲಿ IAS ಅಧಿಕಾರಿಯಾದರು ಸರಿ ಅಥವಾ ಗುಮಾಸ್ತನಾದರೂ ಸರಿ ನಿಯಮ ಉಲ್ಲಂಘಿಸುವ ಯಾರನ್ನು ಶಿಕ್ಷಿಸದೆ ಬಿಡುವುದಿಲ್ಲ ಎನ್ನುವ ಖಡಕ್ ಸಂದೇಶವನ್ನು ಸಿನ್ಹಾ ರವಾನಿಸಿದ್ದು ಹೆಮ್ಮೆಯ ವಿಚಾರ ಅಲ್ಲವೇ.