ನಾಯಿಯ ನಿಯತ್ತು: ಕಿಂಗ್ ಕೋಬ್ರಾದಿಂದ ತನ್ನ ಯಜಮಾನಿಯನ್ನು ಕಾಪಾಡಿದ ನಾಯಿಗಳು

0
1064

ಮನುಷ್ಯ ಮನುಷ್ಯರ ನಡುವೆ ನಂಬಿಕೆ ವಿಶ್ವಾಸ ಇಲ್ಲದ ಇಂದಿನ ದಿನಗಳಲ್ಲಿ ಸಾಕಿದ ನಾಯಿ ಮಾತ್ರ ವಿಶ್ವಾಸವನ್ನು ಕಳೆದುಕೊಂಡಿಲ್ಲ ಎಂಬುದಕ್ಕೆ ಕೆಳಗಿನ ಸ್ಟೊರಿಯೇ ಉದಾಹರಣೆ. ಥೈಲ್ಯಾಂಡ್‍ನ ಬ್ಯಾಂಕಾಕ್ ನಲ್ಲಿ ಮನುಷ್ಯ ಕೂಡ ಮಾಡದ ಸಾಹಸವನ್ನು 4 ನಾಯಿಗಳ ಗುಂಪು ಮಾಡಿವೆ. ತನ್ನ ಯಜಮಾನನ ಪ್ರಾಣ ಕಾಪಾಡಲು ತನ್ನ ಪ್ರಾಣದ ಭಯ ತೊರೆದು ೪ ನಾಯಿಗಳ ಗುಂಪು ಸೇರಿಕೊಂಡು ದೈತ್ಯ ಹಾವನ್ನ ಬಾಯಲ್ಲಿ ಎಳೆದಾಡಿ ತನ್ನ ಯಜಮಾನಳನ್ನು ಹಾವಿನಿಂದ ಪಾರು ಮಾಡಿರೋ ಘಟನೆ ಬೆಳಕಿಗೆ ಬಂದಿದೆ. ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

8 ಅಡಿ ಉದ್ದದ ಕಿಂಗ್ ಕೋಬ್ರಾ ಮೇಲೆ ನಾಯಿಗಳು ದಾಳಿ ಮಾಡಿ ವಿಷಕಾರಿ ಹಾವನ್ನ ಬಾಯಲ್ಲಿ ಎಳೆದಾಡೋದನ್ನ ವೀಡಿಯೋದಲ್ಲಿ ನೀವು ನೋಡಬಹುದು. ಈ ವಿಡಿಯೋ ವನ್ನು jan 27 2017 ರಂದು youtube ನಲ್ಲಿ ಅಪ್ಲೋಡ್ ಮಾಡಲಾಗಿದೆ.

ನಾಯಿಗಳ ದಾಳಿಗೆ ಹೆದರಿ ಕೆಲ ಹೊತ್ತಿನ ಬಳಿಕ ಹಾವು ಅಲ್ಲಿಂದ ಹೊರಟುಹೋಗಿದ್ದು ನಾಯಿಗಳಿಗೆ ಯಾವುದೇ ಹಾನಿಯಾಗಿಲ್ಲ. ಮಹಿಳೆ ಈ ದೃಶ್ಯಗಳನ್ನ ವೀಡಿಯೋ ಮಾಡಿದ್ದು, ಒಂದು ವೇಳೆ ಹಾವಿನಿಂದ ನಾಯಿಗೆ ಅಪಾಯವಾಗಿದ್ರೆ ಪಶುವೈದ್ಯರ ನಂಬರ್ ಇದೆ, ಕೂಡಲೇ ಬರುತ್ತಿದ್ದರು ಎಂದು ಪತ್ರಿಕೆಯೊಂದಕ್ಕೆ ಹೇಳಿದ್ದಾರೆ.